Shocking News: ಒಂದೇ ಕುಟುಂಬದ ಆರು ಸದಸ್ಯರ ಮೇಲೆ ಶೂಟೌಟ್: ಇಬ್ಬರ ಸ್ಥಿತಿ ಗಂಭೀರ!! ಕಾದು ಕುಳಿತು ಶೂಟ್‌ ಮಾಡಲು ಕಾರಣವೇನು ಗೊತ್ತೇ?

Shocking News: ಬಿಹಾರದಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಕಿಡಿಗೇಡಿಗಳು ಹೊಂಚು ಹಾಕಿ ಗುಂಡು ಹಾರಿಸಿ (Shootout) ಹತ್ಯೆ ಮಾಡಲು ಪ್ರಯತ್ನ ಪಟ್ಟ ಆಘಾತಕಾರಿ(Shocking News) ಘಟನೆ ವರದಿಯಾಗಿದೆ.

ಬಿಹಾರದ ಲಖಿಸರಾಯ್ ಜಿಲ್ಲೆಯ ಕವಯ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಾಬಿ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ದುರ್ಘಟನೆಯಲ್ಲಿ ಸೋದರರಿಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕ ವಾಗಿದೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಒಂದೇ ಮನೆಯ ನಾಲ್ವರು ಸದಸ್ಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ICU ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಕೆಲ ಬಲ್ಲ ಮೂಲಗಳ ವರದಿಯ ಅನುಸಾರ, ಈ ಘಟನೆಗೆ ನೆರೆಮನೆಯ ಆಶಿಶ್ ಅಲಿಯಾಸ್ ಛೋಟು ಕಾರಣ ಎನ್ನಲಾಗಿದ್ದು, ಪಂಜಾಬಿ ಮೊಹಲ್ಲಾದ ಆಶಿಶ್ ಕುಮಾರ್ ಪ್ರೇಮ ಪ್ರಕರಣದಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಎಸ್ಪಿ ಪಂಕಜ್ ಕುಮಾರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಗುಂಡು ಹಾರಿಸಿದ ನಂತರ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಿಡಿಗೇಡಿಯ ಬಂಧನಕ್ಕೆ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: H.D Kumaraswami: ದತ್ತಮಾಲೆ ಹಾಕುತ್ತೇನೆ ಎಂದ ಎಚ್‌ಡಿಕೆ: ಬಜರಂಗದಳ ವಿಶ್ವಹಿಂದು ಪರಿಷತ್ ನಿಂದ ಎಚ್‌ಡಿಕೆಗೆ ಅಮೋಘ ಬೆಂಬಲ !

Leave A Reply

Your email address will not be published.