Water To Tulsi: ಈ ದಿನ ತುಳಸಿ ಗಿಡಕ್ಕೆ ನೀರನ್ನು ನೀಡದಿರಿ! ಯಾಕೆ ಗೊತ್ತಾ?

Water To Tulsi: ಲಕ್ಷ್ಮಿ ದೇವಿಯ ರೂಪವಾಗಿರುವ ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಬಹಳ ಪೂಜನೀಯ ಸಸ್ಯವಾಗಿದೆ. ಭಗವಾನ್ ವಿಷ್ಣುವಿನ ವರವನ್ನು ಪಡೆದ ನಂತರ, ತುಳಸಿ ದೇವಿಯು ಪ್ರಪಂಚದಾದ್ಯಂತ ಶಾಶ್ವತವಾಗಿ ಪೂಜಿಸಲ್ಪಟ್ಟಳು. ಅದಕ್ಕಾಗಿಯೇ ಆಕೆಗೆ ಹಿಂದೂ ಧರ್ಮದಲ್ಲಿ ಅಂತಹ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬಹುತೇಕರು ಸಾಮಾನ್ಯವಾಗಿ ಬೆಳಿಗ್ಗೆ ಸ್ನಾನದ ನಂತರ ತುಳಸಿ ದೇವಿಗೆ ನೀರನ್ನು ಅರ್ಪಿಸುತ್ತಾರೆ. ಆದರೆ ಭಾನುವಾರದ ದಿನದಂದು ತುಳಸಿಗೆ ನೀರನ್ನು (Water To Tulsi) ನೀಡಬಾರದು ಎನ್ನಲಾಗುತ್ತದೆ.

ಹೌದು, ವಿಶೇಷವಾಗಿ ನಾವೆಲ್ಲರೂ ಯಾವುದಾದರೊಂದು ದಿನ ಉಪವಾಸವನ್ನು ಆಚರಿಸುತ್ತೇವೆ, ಅದೇ ರೀತಿ ತುಳಸಿ ದೇವಿಯು ಸಹ ಭಾನುವಾರದಂದು ಭಗವಾನ್ ವಿಷ್ಣುವಿಗೆ ಉಪವಾಸ ಮಾಡುತ್ತಾಳೆ. ಈ ಕಾರಣದಿಂದ ಭಾನುವಾರ ತುಳಸಿ ಗಿಡಕ್ಕೆ ಶಾಸ್ತ್ರದ ಪ್ರಕಾರ ನೀರು ನೀಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮರೆತು ನೀವು ಈ ದಿನ ತುಳಸಿಗೆ ನೀರನ್ನು ನೀಡಿದರೆ ತುಳಸಿಯ ಬಳಿ ಕ್ಷಮೆಯನ್ನು ಕೇಳಲು ಮರೆಯದಿರಿ.

ಇನ್ನು ತುಳಸಿಗೆ ನೀರನ್ನು ನೀಡುವಾಗ ಮಂತ್ರದೊಂದಿಗೆ ನೀರನ್ನು ನೀಡುವುದು ಅತ್ಯಂತ ಮಂಗಳಕರವಾಗಿದೆ. ತುಳಸಿಯು ಇದರಿಂದ ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಎನ್ನುವ ನಂಬಿಕೆಯಿದೆ.
”ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನೀ
ಆಧಿ ವ್ಯಾಧಿಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ ”

ಮುಖ್ಯವಾಗಿ ಪ್ರತಿನಿತ್ಯ ಸ್ನಾನ ಮಾಡಿ ಶುದ್ಧರಾದ ನಂತರ ತುಳಸಿಗೆ ನೀರನ್ನು ನೀಡಬೇಕು. ಸ್ನಾನ ಮಾಡದೇ ತುಳಸಿಯನ್ನು ಮುಟ್ಟಲು ಕೂಡ ಹೋಗಬಾರದು. ಹಾಗೂ ಭಾನುವಾರದ ದಿನದಂದು ತಪ್ಪಿಯೂ ತುಳಸಿಗೆ ನೀರನ್ನು ಅರ್ಪಿಸಬಾರದು ಎನ್ನಲಾಗುತ್ತದೆ.

 

ಇದನ್ನು ಓದಿ: Brundavana Serial : ಬೃಂದಾವನ ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟ ವರುಣ್ ಆರಾಧ್ಯ: ಕೂಡಲೇ ಕಾಮೆಂಟ್ಸ್ ಆಫ್ ಮಾಡಿದ ಕಲರ್ಸ್ ವಾಹಿನಿ ! ಅರೇ ಇದೇಕೇ?

Leave A Reply

Your email address will not be published.