Brundavana Serial : ಬೃಂದಾವನ ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟ ವರುಣ್ ಆರಾಧ್ಯ: ಕೂಡಲೇ ಕಾಮೆಂಟ್ಸ್ ಆಫ್ ಮಾಡಿದ ಕಲರ್ಸ್ ವಾಹಿನಿ ! ಅರೇ ಇದೇಕೇ?

Brundavana Serial: ಕಲರ್ಸ್ ಕನ್ನಡ (Colors Kannada)ವಾಹಿನಿಯಲ್ಲಿ ತುಂಬು ಕುಟುಂಬದ ಕಥೆಯನ್ನು ಜನರ ಮುಂದಿಡಲು ಶುರುವಾದ ಬೃಂದಾವನ ಧಾರಾವಾಹಿ(Brundavana Serial) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ, ಗೀತಾ ಧಾರಾವಾಹಿಯ ಮೂಲಕ ಮನಸೆಳೆದ ನಿರ್ದೇಶಕ ರಾಮ್ಜಿ, ಬೃಂದಾವನ ನಿರ್ದೇಶನ ಮಾಡುತ್ತಿದ್ದಾರೆ.

ಮಾಜಿ ಬಿಗ್ಬಾಸ್ ಸ್ಪರ್ಧಿ (Bigg Boss Contestant)ವಿಶ್ವನಾಥ್ ಹಾವೇರಿ ಬೃಂದಾವನ ಧಾರಾವಾಹಿಯ ನಾಯಕನಾಗಿ ತೆರೆ ಮೇಲೆ ಮಿಂಚಿದ್ದರು. ಇವರ ಜೊತೆಗೆ ಕನ್ನಡತಿ ಸೀರಿಯಲ್ ಖ್ಯಾತಿಯ ಅಮ್ಮಮ್ಮ ಎಂದೇ ಪ್ರಖ್ಯಾತಿ ಪಡೆದ ಚಿತ್ಕಳಾ,ಸುಂದರ್, ವೀಣಾ ಸುಂದರ್ ಸೇರಿ ಹಿರಿ ಕಿರಿ ಕಲಾವಿದರನ್ನೊಳಗೊಂಡ ತುಂಬು ಕುಟುಂಬದ ಕಥೆಯ ಎಳೆಯನ್ನು ಇಟ್ಟುಕೊಂಡು ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಬೃಂದಾವನ ತಂಡ ಹೆಜ್ಜೆ ಇರಿಸಿದೆ.ಇದೀಗ ಈ ಧಾರಾವಾಹಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಹೌದು!!ಕಥಾನಾಯಕ ಆಕಾಶ್ಗೆ ಹೆಣ್ಣು ಹುಡುಕಿ ಮದುವೆ ಶಾಸ್ತ್ರ ಶುರುವಾಗುತ್ತಿರುವ ಹೊತ್ತಲ್ಲೇ ನಾಯಕನನ್ನು ಬದಲಾವಣೆ ಮಾಡಲಾಗಿದೆ.

ಬೃಂದಾವನ ಸೀರಿಯಲ್‌ ನಲ್ಲಿ ಹೀರೋ ಬದಲಾವಣೆಯ ಹಿನ್ನೆಲೆ, ಹೊಸ ಹೀರೋವನ್ನು ಒಪ್ಪಿಕೊಳ್ಳಲು ಕಷ್ಟವೆಂದು ವೀಕ್ಷಕರು ಹೇಳುತ್ತಿದ್ದಾರೆ. 36 ಮಂದಿ ಇರುವ ಬೃಂದಾವನ ಸೀರಿಯಲ್ ನಲ್ಲಿ ಮುದ್ದು ಮನೆಮಗನಾಗಿ ಕಾಣಿಸಿಕೊಂಡಿದ್ದ ಆಕಾಶ್ ಪಾತ್ರಧಾರಿಯನ್ನು ಗಾಯಕ ವಿಶ್ವನಾಥ್ ಹಾವೇರಿ ಅವರ ಬದಲಿಗೆ ಆಕಾಶ್ ಪಾತ್ರಕ್ಕೆ ವರುಣ್‌ ಆರಾಧ್ಯ ಅವರನ್ನು ಹೀರೋ ಆಗಿ ಆಯ್ಕೆ ಮಾಡಲಾಗಿದೆ. ಇದರ ಪ್ರೋಮೋ ಬಿಡುತ್ತಿದ್ದಂತೆ ವೀಕ್ಷಕರು ತರಹೇವಾರಿ ಕಮೆಂಟ್‌ ಹಾಕಿದ್ದು, ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್‌ ಆಫ್ ಮಾಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವಾಹಿನಿಯು ಕಮೆಂಟ್‌ ಆಫ್‌ ಮಾಡಿ ಪ್ರೋಮೋ ರಿಲೀಸ್‌ ಮಾಡಿದೆ. ಇದೀಗ ಸೀರಿಯಲ್ನ ಮುಖ್ಯಘಟ್ಟದಲ್ಲಿ ನಾಯಕನಾಗಿ ನಟಿಸುತ್ತಿದ್ದ ವಿಶ್ವನಾಥ್ ಹಾವೇರಿ ಬದಲಿಗೆ ಖ್ಯಾತ ಯೂಟ್ಯೂಬರ್ ವರುಣ್ ಆರಾಧ್ಯಾ ನಾಯಕನ ಸ್ಥಾನಕ್ಕೆ ಭರ್ತಿ ಪಡೆದಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಎಲ್ಲರ ಗಮನ ಸೆಳೆದ ವರುಣ್ ಆರಾಧ್ಯ ಮತ್ತು ಕಾವೇರಿ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಈ ನಡುವೆ, ಈ ಜೋಡಿ ಬ್ರೇಕ್ ಅಪ್‌ ಆಗಿ ಭಾರೀ ಸುದ್ದಿಯಾಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕವೇ ಗಮನ ಸೆಳೆದ ವರುಣ್ ಆರಾಧ್ಯ ಮೊತ್ತ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಕಥಾನಾಯಕ ತುಂಬ ಚಿಕ್ಕವನು ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳು ಕೇಳಿಬಂದದ್ದು ಮಾತ್ರವಲ್ಲದೇ ನಾಯಕನ ಬದಲಾವಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಬೃಂದಾವನ ನಾಯಕನನ್ನು ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅಕ್ಟೋಬರ್ 23ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಬೃಂದಾವನ ಧಾರಾವಾಹಿಯಲ್ಲಿ ಸದ್ಯ, ಸುಧಾಮೂರ್ತಿ ಮೊಮ್ಮಗ ಆಕಾಶ್ ಮತ್ತು ಪುಷ್ಪಾ ಮದುವೆ ಸಂಭ್ರಮ ನಡೆಯುತ್ತಿದೆ.

 

 

ಇದನ್ನು ಓದಿ: Gruha Lakshmi Scheme: ಗೃಹಲಕ್ಷ್ಮೀ ಹಣ ಬರದೇ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ: 3 ಕಂತಿನ ಹಣ ಒಟ್ಟಿಗೆ ಜಮಾ! ಈ ರೀತಿ ಚೆಕ್ ಮಾಡಿಕೊಳ್ಳಿ

1 Comment
  1. […] ಇದನ್ನು ಓದಿ: Brundavana Serial : ಬೃಂದಾವನ ಧಾರಾವಾಹಿಯಲ್ಲಿ ಎಂಟ್ರಿ… […]

Leave A Reply

Your email address will not be published.