Home Latest Health Updates Kannada Hair Care: ಬಿಳಿ ಕೂದಲಿನ ಚಿಂತೆ ಬಿಡಿ : ಈ ಎರಡು ವಸ್ತು 5 ನಿಮಿಷದಲ್ಲಿ...

Hair Care: ಬಿಳಿ ಕೂದಲಿನ ಚಿಂತೆ ಬಿಡಿ : ಈ ಎರಡು ವಸ್ತು 5 ನಿಮಿಷದಲ್ಲಿ ನಿಮ್ಮ ಕೂದಲನ್ನು ಕಪ್ಪಾಗಿಸುತ್ತೆ !

Hair Care

Hindu neighbor gifts plot of land

Hindu neighbour gifts land to Muslim journalist

Hair Care: ಕೂದಲು ಕಪ್ಪಾಗಿ ಕಾಣಲು ಕೂದಲಿಗೆ ಬಳಸುವಂತಹ ಶಾಂಪೂ, ಕಂಡೀಷನರ್ ಇತ್ಯಾದಿಗಳಲ್ಲಿ (Hair Care) ಅತಿಯಾದ ರಾಸಾಯನಿಕ ಕೂಡಿರುವುದರಿಂದ ಕೂದಲಿಗೆ ಮತ್ತಷ್ಟು ಹಾನಿ ಮಾಡುತ್ತವೆ. ಆದರೆ ಕೆಲವೊಂದು ಮನೆಮದ್ದುಗಳು ತುಂಬಾ ಸುಲಭವಾಗಿ ಕೂದಲು ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ.

ಹೌದು, ಸಂಶೋಧನೆಯ ಪ್ರಕಾರ, ಅರಿಶಿನವು ತಲೆಹೊಟ್ಟು ವಿರೋಧಿ ಪರಿಣಾಮವನ್ನು ಹೊಂದಿದೆ. ಈ ಕಾರಣಕ್ಕಾಗಿ ಅರಿಶಿನವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲದೆ, ಅರಿಶಿನವನ್ನು ಬಳಸುವುದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ, ಇದು ಬಿಳಿ ಕೂದಲಿನ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.

ಇದಕ್ಕಾಗಿ ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದಕ್ಕೆ ಹಸಿ ಅರಿಶಿನದ ಸಣ್ಣ ತುಂಡುಗಳನ್ನು ಸೇರಿಸಿ. ಎರಡನ್ನೂ ಒಟ್ಟಿಗೆ 2 ನಿಮಿಷಗಳ ಕಾಲ ಬಿಸಿ ಮಾಡಿ. ಅರಿಶಿನವನ್ನು ಹಿಂಡಿ ಮತ್ತು ಎಲ್ಲಾ ಎಣ್ಣೆಯನ್ನು ಹೊರತೆಗೆಯಿರಿ. ಎಣ್ಣೆ ತಣ್ಣಗಾದಾಗ ತಲೆಗೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ. ಈ ಹೇರ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಹಚ್ಚಿ.

ಇನ್ನು ಒಂದು ಬಟ್ಟಲಿನಲ್ಲಿ 2 ಮೊಟ್ಟೆ, 2 ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಅದಕ್ಕೆ 2 ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಈಗ ಈ ತಯಾರಿಸಿದ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕೂದಲಿನ ಬೇರುಗಳಿಗೆ ಚೆನ್ನಾಗಿ ಹಚ್ಚಿ. ಅರ್ಧ ಘಂಟೆಯ ನಂತರ, ತಣ್ಣನೆಯ ನೀರು ಮತ್ತು ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಹಾಲು, ಜೇನುತುಪ್ಪ ಮತ್ತು ಅರಶಿನವನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಸಂಪೂರ್ಣವಾಗಿ ಹಚ್ಚಿ. 30 ನಿಮಿಷಗಳ ನಂತರ, ಉಗುರು ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಈ ಹೇರ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಬಳಸಬಹುದು.

ಇದನ್ನೂ ಓದಿ: Ration Card: ರೇಷನ್‌ ಕಾರ್ಡ್‌ ದಾರರೇ ಅಲರ್ಟ್! ನಿಮ್ಮಿಂದ ಈ ತಪ್ಪಾಗಿದ್ದರೂ ಅನ್ನಭಾಗ್ಯ ಸಿಗಲ್ಲ !