Ration Card: ರೇಷನ್‌ ಕಾರ್ಡ್‌ ದಾರರೇ ಅಲರ್ಟ್! ನಿಮ್ಮಿಂದ ಈ ತಪ್ಪಾಗಿದ್ದರೂ ಅನ್ನಭಾಗ್ಯ ಸಿಗಲ್ಲ !

Karnataka news anna bhagya scheme ration Card latest update ekyc for ration Card

Ration Card EKYC: ಪಡಿತರ ಚೀಟಿದಾರರಿಗೆ (Ration Card) ಮಹತ್ವ ಮಾಹಿತಿ ಒಂದನ್ನು ನೀಡಲಾಗಿದೆ. ಹೌದು,
ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಯೋಜನೆ (Anna Bhagya Scheme) ಕುರಿತು ಮಹತ್ವ ನಿರ್ಧಾರ ಕೈಗೊಂಡಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಕೂಡಲೇ ಇ-ಕೆವೈಸಿ( Ration Card EKYC) ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈಗಾಗಲೇ ಅನ್ನಭಾಗ್ಯ ಯೋಜನೆಗೆ ರಾಜ್ಯದ ಪಾಲು ಐದು ಕೆ.ಜಿ. ಅಕ್ಕಿಯನ್ನು ಪೂರೈಕೆ ಮಾಡಲು ಸಮರ್ಪಕ ದಾಸ್ತಾನು ಇಲ್ಲದೇ ಇದ್ದರಿಂದ ಅದರ ಬದಲಿಗೆ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡುತ್ತಾ ಬಂದಿದೆ. ಇವರಲ್ಲಿ ಬಹಳಷ್ಟು ಮಂದಿ ರೇಷನ್‌ ಕಾರ್ಡ್‌ನಲ್ಲಿ ಸಮಸ್ಯೆ ಇದ್ದರಿಂದ ಹಣ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ತಿದ್ದುಪಡಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಿದ್ದಾರೆ. ಇದರಿಂದ ಸರ್ಕಾರಕ್ಕೆ ಹೊರೆ ಮತ್ತಷ್ಟು ಹೆಚ್ಚಳವಾಗಲಿದೆ. ಈ ಎಲ್ಲದರ ಮಧ್ಯೆ ರಾಜ್ಯ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಇದುವರೆಗೂ ಇ-ಕೆವೈಸಿ (E-KYC) ಮಾಡಿಸಿಕೊಳ್ಳದಿದ್ದರೆ, ಹಣವನ್ನು ಖಾತೆಗೆ ಜಮೆ ಮಾಡುವುದಿಲ್ಲ. ಜತೆಗೆ ಆರು ತಿಂಗಳವರೆಗೆ ಅಕ್ಕಿಯನ್ನು ಪಡೆಯದೇ ಇದ್ದರೂ ಯೋಜನೆಯ ಫಲ ದಕ್ಕುವುದಿಲ್ಲ. ಈ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದರೆ ಕಾರ್ಡನ್ನೇ ರದ್ದು ಮಾಡಲು ಮುಂದಾಗಿದೆ.

ರೇಷನ್ ಕಾರ್ಡ್‌ಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇ-ಕೆವೈಸಿ ಅಪ್ಡೇಟ್‌ಗಾಗಿ ರಾಜ್ಯ ಸರ್ಕಾರವು ಡಿಸೆಂಬರ್ 30ರ ವರೆಗೆ ಕಾಲಾವಕಾಶವನ್ನು ನೀಡಿದೆ. ಒಂದು ವೇಳೆ ಇದನ್ನು ಮಾಡಿಸದೆ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.

ಇನ್ನು ರೇಷನ್‌ ಕಾರ್ಡ್‌ ಹೊಂದಿದವರು 6 ತಿಂಗಳುಗಳ ಕಾಲ ನಿರಂತರವಾಗಿ ರೇಷನ್‌ ಪಡೆಯದೇ ಇದ್ದರೆ ಅಂಥವರ ಕಾರ್ಡ್‌ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

ಇನ್ನು ಅನ್ನಭಾಗ್ಯದ ಅಕ್ಕಿಯನ್ನು ಮಾರಿದರೂ ಸರ್ಕಾರ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತದೆ. ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಪ್ರಕರಣ ದಾಖಲು ಮಾಡುವ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯಡಿ ಪಡೆಯುವ ಅಕ್ಕಿಯನ್ನು ಮಾರಾಟ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಇದು ಶಿಕ್ಷಾರ್ಹ ಅಪರಾಧವಾಗಿದೆ. ಜತೆ ಕಾರ್ಡ್‌ ಸಹ ರದ್ದುಗೊಳ್ಳುತ್ತದೆ ಎಂದು ಸೂಚನೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: RBI New Rules: ವೈಯಕ್ತಿಕ ಸಾಲದ ನಿಯಮ ಇನ್ನು ದುಬಾರಿ! ಶಾಕ್‌ ನೀಡಿದ ಆರ್‌ಬಿಐ!!!

Leave A Reply

Your email address will not be published.