Rahul Gandhi: ಪಂಚಾಯಿತಿಯಲ್ಲಿ OBC ಮೀಸಲು 42%ಕ್ಕೆ ಏರಿಕೆ – ಕಾಂಗ್ರೆಸ್ ನಿಂದ ಮಹತ್ವದ ಘೋಷಣೆ !!

Rahul Gandhi: ರಾಹುಲ್ ಗಾಂಧಿ ಅವರು, ಶುಕ್ರವಾರ ತೆಲಂಗಾಣದ ಪಿನಾಪಾಕ, ನರಸಂಪೇಟ್‌ನಲ್ಲಿ ಚುನಾವಣಾ ಪ್ರಚಾರ ರಾಲಿಗಳನ್ನು ನಡೆಸಿದ್ದು, ಪಂಚಾಯಿತಿ ಮಟ್ಟದಲ್ಲಿ ಮೀಸಲು ಪ್ರಮಾಣ ಹೆಚ್ಚಳದಿಂದ ತೆಲಂಗಾಣದಲ್ಲಿ 24 ಸಾವಿರ ಹೊಸ ಪಂಚಾಯಿತಿ ನಾಯಕರ ಆಗಮನ ಆಗಲಿದೆ. ಮುಖ್ಯವಾಗಿ ಆದಿವಾಸಿಗರಿಗೆ, ದಲಿತರಿಗೆ ರಾಜಕೀಯದಲ್ಲಿ ಸ್ಥಾನಮಾನ ಸಿಗಲಿದೆ. ರಾಜ್ಯದ ಆಡಳಿತಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ಇನ್ನು ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌ ಹೀನಾಯವಾಗಿ ಸೋಲು ಕಾಣಲಿದೆ. ಅಲ್ಲದೇ ಕಾಂಗ್ರೆಸ್‌ ತನ್ನ ಬದ್ಧತೆಯಾಗಿರುವ ಒಬಿಸಿ ಸಮುದಾಯದ ಮೀಸಲು ಪ್ರಮಾಣವನ್ನು ಪಂಚಾಯಿತಿಗಳಲ್ಲಿ ಶೇ 23 ನಿಂದ ಶೇ 42ಕ್ಕೆ ಏರಿಕೆ ಮಾಡಲಿದೆ,” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಿಸಿದ್ದಾರೆ.

“ಈ ದೇಶದಲ್ಲಿ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಎಷ್ಟಿದ್ದಾರೆ ಎಂದು ತಿಳಿಯಲು ನಾವು ಬಯಸಿದ್ದೇವೆ. ಹಿಂದುಳಿದವರ ಜನಸಂಖ್ಯೆ ಶೇ 50ರಷ್ಟಿದ್ದರೆ, ಅವರ ಪಾಲ್ಗೊಳ್ಳುವಿಕೆಯೂ ಶೇ 50ರಷ್ಟು ಇರಬೇಕು ಎಂದು ಹೇಳಿದರು.

 

ಇದನ್ನು ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರ – ಸಾರಿಗೆ ಇಲಾಖೆಯಿಂದ ಬಂತೊಂದು ಹೊಸ ಆದೇಶ !!

Leave A Reply

Your email address will not be published.