Basanagouda Patil yatnal : ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ – ಶಾಕಿಂಗ್ ಹೇಳಿಕೆ ನೀಡಿದ ಯತ್ನಾಳ್

Karnataka politics news BJP MLA Basanagouda Patil yatnal Says BY Vijayendra Should Not Even Step Into His House

Share the Article

Basanagouda Patil yatnal : ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾದುದರಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ವಿಪಕ್ಷ ನಾಯಕರ ಆಯ್ಕೆ ಕೂಡ ಆಗಿದೆ. ಜೊತೆಗೆ ಕೆಲವು ಹಿರಿಯ ನಾಯಕರು ಅಸಮಾಧಾನಿತರಾಗಿ ಮನದ ನೋವನ್ನು ಪರೋಕ್ಷವಾಗಿ ತೋಡಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಬಿಜೆಪಿ ಪ್ರಬಲ ನಾಯಕ, ಶಾಸಕ ಬಸವನ ಗೌಡ ಯತ್ನಾಳ್(Basanagouda Patil yatnal ) ಅವರು ವಿಜಯೇಂದ್ರ ನನ್ನ ಮನೆಗೆ ಕಾಲಿಡಬಾರದೆಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ ನೇಮಕವಾದ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಯಡಿಯೂರಪ್ಪರನ್ನು ಹಾಗೂ ಅವರ ಪುತ್ರರನ್ನು ಮೊದಲಿಂದಲೂ ವಿರೋಧ ಮಾಡುತ್ತಾ ಬರುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಈ ಕುರಿತು ಆಕ್ರೋಶ ಹೊರಹಾಕಿದ್ದು ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ಅವರು ತಮ್ಮ ಮನೆಗೆ ಕಾಲಿಡುವುದೇ ಬೇಡ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿಜಯೇಂದ್ರ ಜೊತೆ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಮನೆಗೆ ವಿಜಯೇಂದ್ರ ಬರೋದು ಬೇಡ ಎಂದು ಯತ್ನಾಳ್ ಹೇಳಿದ್ದಾರೆ.

ಇದನ್ನೂ ಓದಿ: ನನ್ನನ್ನು ರಾಜ್ಯಾಧ್ಯಕ್ಷ ಮಾಡಿದ್ಯಾರು ಗೊತ್ತಾ ?! ಸತ್ಯಬಿಚ್ಚಿಟ್ಟ ವಿಜಯೇಂದ್ರ!!

Leave A Reply