Beating By slippers: ಚುನಾವಣೆ ಗೆಲ್ಲುವ ಆಸೆ – ಕಾಂಗ್ರೆಸ್ ಅಭ್ಯರ್ಥಿಗೆ ಬಿತ್ತು ಚಪ್ಪಲಿ ಏಟು !! ಕೊಟ್ಟಿದ್ಯಾರು?

Fakir baba hit with slippers Congress candidates as blessings

Share the Article

Beating by Slippers: ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಅಭ್ಯರ್ಥಿಗಳು ನಾನಾ ಬಗೆಯ ಕಸರತ್ತು ಮಾಡುವುದು ಸಹಜ. ಮಧ್ಯ ಪ್ರದೇಶದಲ್ಲಿ (Madhya Pradesh election) ಕಾಂಗ್ರೆಸ್ ಅಭ್ಯರ್ಥಿಯೊಬ್ಬರು (Congress Candidate) ವಿಚಿತ್ರ ನಡೆಯನ್ನು ತೋರಿದ್ದಾರೆ.

ಚುನಾವಣೆಗೆ ಮೊದಲೇ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಫಕೀರ್ ಬಾಬಾನ ಮುಂದೆ ಚಪ್ಪಲಿಯಿಂದ ಹೊಡಿಸಿಕೊಂಡಿದ್ದು,(Beating by Slippers)ಈ ವಿಡಿಯೋ ವೈರಲ್ ಆಗಿ(Video Viral)ಸಂಚಲನ ಮೂಡಿಸಿದೆ. ಕಮಲ್ ರಾಝಾ ಕಾಂಗ್ರೆಸ್ ಅಭ್ಯರ್ಥಿಗೆ ಚಪ್ಪಲಿ ಮೂಲಕ ಆಶೀರ್ವಾದ ಮಾಡುತ್ತಿರುವ ವ್ಯಕ್ತಿಯ ಫಕೀರ್ ಎನ್ನಲಾಗಿದೆ. ಮ್ಹೌ ನೀಮಚ್ ರಸ್ತೆಯಲ್ಲಿ ತಿರುಗಾಡುತ್ತಾ ತನ್ನ ಬಳಿಗೆ ಬರುವ ಜನರಿಗೆ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡಲಿದ್ದು ಅನೇಕ ಜನರು ತಮ್ಮ ದೂರುಗಳೊಂದಿಗೆ ಹೊಸ ಚಪ್ಪಲಿಗಳನ್ನು ತಂದು ಬಾಬಾಗೆ ನೀಡುತ್ತಾರೆ.

ಅವುಗಳಿಂದಲೇ ಬಾಬಾ ಆಶೀರ್ವಾದ ಮಾಡಬಹುದು ಎಂಬುದು ಅವರ ನಂಬಿಕೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫಕೀರ್ ಬಾಬಾ ಪರಾಸ್ ಸಕ್ಲೇಚಾ ಅವರನ್ನು ಕೆಲವೊಮ್ಮೆ ಬೆನ್ನಿನ ಮೇಲೆ, ಕೆಲವೊಮ್ಮೆ ಭುಜದ ಮೇಲೆ ಮತ್ತು ಕೆಲವೊಮ್ಮೆ ಮುಖದ ಮೇಲೆ ಚಪ್ಪಲಿಯಿಂದ ಬಾರಿಸುತ್ತಾರೆ. ಫಕೀರ್ ಬಾಬಾ ಜೋರಾಗಿ ಚಪ್ಪಲಿಯಿಂದ ಹೊಡೆಯುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಕೆಲವರು ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

https://x.com/veeer999/status/1725462060505714697?s=20

ಇದನ್ನು ಓದಿ: ಬೆಳ್ತಂಗಡಿ : ಹೊಸ ತಹಶೀಲ್ದಾರ್‌ ಆಗಿ ಪೃಥ್ವಿ ಸಾನಿಕಂ ನೇಮಕ

Leave A Reply