Udupi murder case: ಕೊಲೆ ಮಾಡಿದ ಕಾರಣವ ಬಿಟ್ಟುಕೊಡದ ನರಹಂತಕ : ತನಿಖೆಯ ಹಾದಿ ತಪ್ಪಿಸುತ್ತಿದ್ದಾನೆ ಪ್ರವೀಣ್ ಚೌಗಲೆ

Udupi family members murder case accused Praveen chowgale did not give reason for murder

Praveen chowgale: ನೇಜಾರಿನ ಮನೆಯಲ್ಲಿ ನಡೆದ ನಾಲ್ವರ ಕೊಲೆ ಆರೋಪಿ ಏರ್‌ಇಂಡಿಯಾ ಕ್ಯಾಬಿನ್‌ ಕ್ರೂ ಉದ್ಯೋಗಿ ಪ್ರವೀಣ್‌ ಚೌಗುಲೆ (Praveen chowgale) ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿಲ್ಲ, ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ ಎಂದು ವರದಿಯಾಗಿದೆ.

ಕೊಲೆ ಮಾಡಿದ ಉದ್ದೇಶ, ಕೃತ್ಯ ನಡೆಸಿದ ಘಟನಾವಳಿಗಳ ಮಾಹಿತಿಯನ್ನು ಆತ ಇಲ್ಲಿಯವರೆಗೆ ಒದಗಿಸಿಲ್ಲ ಎಂದು ತಿಳಿದು ಬಂದಿದೆ.

ಆರೋಪಿಯ ಎರಡು ಕೈ ಬೆರಳಿಗೆ ಗಾಯವಾಗಿದ್ದು, ಇದು ಹೇಗಾಯಿತು ಎಂಬ ವಿಚಾರ ಆತ ಇನ್ನೂ ಪೊಲೀಸರಿಗೆ ತಿಳಿಸಿಲ್ಲ ಎನ್ನಲಾಗಿದೆ. ಈತನನ್ನು ಕೋರ್ಟ್‌ಗೆ ಹಾಜರುಪಡಿಸುವ ಸಂದರ್ಭ ಪೊಲೀಸರು ಹತ್ಯೆ ನಡೆಸುವ ಸಂದರ್ಭ ಕೈಗಾದ ಗಾಯ ಎಂದು ನ್ಯಾಯಾಧೀಶರಿಗೆ ಸಮಜಾಯಿಷಿ ನೀಡಿದ್ದರು. ಆದರೆ ಆತ ಅದನ್ನು ಅಲ್ಲೇ ನಿರಾಕರಿಸಿದ್ದ. ಹತ್ಯೆಗೆ ನಡೆಸಿದ ಆಯುಧ ಇಲ್ಲಿಯವರೆಗೆ ಪತ್ತೆಯಾಗಿಲ್ಲ.

ಒಂದು ಬಾರಿ ಮೂಲ್ಕಿ ಬಳಿ ನದಿಯಲ್ಲಿ ಬಿಸಾಡಿರುವುದಾಗಿಯೂ, ಇನ್ನೊಮ್ಮೆ ಬೇರೆಲ್ಲೋ ಎಸೆದಿರುವುದಾಗಿ ತಿಳಿಸಿರುವುದಾಗಿ ಮಾಧ್ಯಮವೊಂದು ಪ್ರಕಟ ಮಾಡಿದೆ.

ಈ ಕೃತ್ಯದ ಪ್ರಮುಖ ಸಾಕ್ಷಿ ನೂರ್‌ ಮಹಮ್ಮದ್‌ ಅವರ ತಾಯಿ. ಆರೋಪಿಯನ್ನು ಮನೆಯವರೆಗೆ ಬಿಟ್ಟ ಆಟೋ ರಿಕ್ಷಾ ಚಾಲಕ ಹಾಗೂ ಈ ಕೊಲೆ ನಡೆಸಿ ಮನೆಯಿಂದ ಹೊರಹೋಗುವುದನ್ನು ನೋಡಿದ ಪಕ್ಕದ ಮನೆಯ ಯುವತಿ. ಇವರು ಈ ಪ್ರಕರಣದ ಪರೋಕ್ಷ ಸಾಕ್ಷಿಗಳು. ಆದರೆ ಆರೋಪಿ ಈ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದ.

ಈ ಕೃತ್ಯಕ್ಕೆ ಬಳಸಿದ್ದ ಆಯುಧ ಪ್ರಮುಖ ಸಾಕ್ಷಿಯಾಗಿದೆ. ಪ್ರಾಸಿಕ್ಯೂಷನ್‌ ಗೆ ಆರೋಪವನ್ನು ಸಾಬೀತುಪಡಿಸಲು ಇದು ಪ್ರಮುಖ ಆಧಾರ. ಇದು ಸಿಗದಿದ್ದರೆ ಕೇಸು ಹಿನ್ನಡೆಯಾಗುವ ಸಾಧ್ಯತೆಯಿದೆ. ಕೊಲೆ ಮಾಡಿದ ನಂತರ ಪರಾರಿಯಾಗಲು ಬಳಸಿದ ಮಾರ್ಗ, ಬಳಸಿದ ವಾಹನ ಇವುಗಳ ಮಾಹಿತಿ ನೀಡುವಾಗಲೂ ಆತ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದನೆಂದು ವರದಿಯಾಗಿದೆ. ಮಹಜರು ಸಮಯದಲ್ಲಿ ಕೂಡಾ 25ನಿಮಿಷ ಕೃತ್ಯ ನಡೆಸಿದ ರೀತಿ, ಕೊಲೆ ಬಗ್ಗೆ ತನಿಖೆಯ ದಾರಿ ತಪ್ಪಿಸುವ ರೀತಿಯಲ್ಲೇ ವರ್ತಿಸಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಇನ್ನೊಮ್ಮೆ ಆರೋಪಿಯನ್ನು ಕೃತ್ಯ ನಡೆದ ಸ್ಥಳಕ್ಕೆ ಮಹಜರಿಗೆ ಕರೆದುಕೊಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇವಲ ಅಯ್ನಾಜ್‌ ಮೇಲೆ ದ್ವೇಷ ಇದ್ದರೆ ಅವಳು ಒಬ್ಬಂಟಿಯಾಗಿ ಸಿಗುವ ಸ್ಥಳದಲ್ಲಿ ಈ ಕೃತ್ಯ ಎಸಗುತ್ತಿದ್ದ. ಮನೆಯವರೆಗೂ ಹೋಗಿ, ಅಲ್ಲಿ ಎಲ್ಲರೂ ಇರುವಾಗ ಕೊಲೆ ಮಾಡುವ ಅವಶ್ಯಕತೆ ಏನಿತ್ತು? ಇದು ಸಂಶಯ ಕಾಡುತ್ತಿದೆ. ಏನೇ ಇದ್ದರೂ ಕೊಲೆಗಾರನಿಗೆ ಶಿಕ್ಷೆ ಆಗಬೇಕು, ಕಾನೂನಿನ ಕುಣಿಕೆಯಿಂದ ಹೊರಬರಬಾರದು. ಪೊಲೀಸ್‌ ಇಲಾಖೆ ಸಮರ್ಪಕವಾದ ತನಿಖೆ ನಡೆಸಬೇಕು. ಕೊಲೆ ಮಾಡಲು ಇದ್ದ ಕಾರಣವೇನು ಎಂಬುವುದು ಬಹಿರಂಗವಾಗಬೇಕು, ಸಾಕ್ಷ್ಯ ಸಂಗ್ರಹದಲ್ಲಿ ಲೋಪ ಆಗಬಾರದು. ಹಾಗೆನೇ ಕೊಲೆಯಾದವರ ಚಾರಿತ್ರ್ಯಹರಣದಂತಹ ಕೆಲಸ ಕೂಡಾ ಆಗಬಾರದು ಎಂಬುವುದು ಸ್ಥಳೀಯ ಸಾರ್ವಜನಿಕರ ಆಗ್ರಹ.

ಇದನ್ನೂ ಓದಿ: Udupi Crime News: ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ; ಪೋಸ್ಟರ್‌ ಮಾಡಿ ಸಂಭ್ರಮಿಸಿದ ಕಿಡಿಗೇಡಿಗಳು, ಕೇಸು ದಾಖಲು!!!

Leave A Reply

Your email address will not be published.