Shakti Scheme Allowed ID Card: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರೇ, ಇನ್ಮುಂದೆ ಹೀಗೂ ಉಚಿತ ಪ್ರಯಾಣ ಮಾಡಬಹುದು !! ಸರ್ಕಾರದ ಹೊಸ ಆದೇಶ
Shakti scheme allowed id card on mobile if the conductor does not agree case registered ksrtc order
Shakti Scheme Allowed IDCard: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮಹಿಳೆಯರಿಗೆ ಮೂಲ ಗುರುತಿನ ಚೀಟಿ ತೋರಿಸಬೇಕು ಎಂದು ಕೆಲವೆಡೆ ಬಸ್ ಕಂಡಕ್ಟರ್‌ಗಳು ತೀರ್ಮಾನ ಮಾಡಿವೆ. ಹೀಗಾಗಿ, ಸಾರಿಗೆ ಸಂಸ್ಥೆಗಳು ಮೊಬೈಲ್ ಗುರುತಿನ ಚೀಟಿಗೆ(Shakti Scheme Allowed IDCard Showing on Mobile)ಅವಕಾಶ ಕಲ್ಪಿಸಿದೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದು, ಈ ಯೋಜನೆಯ ಭಾಗವಾಗಿ ಮಹಿಳೆಯರು ಮೊಬೈಲ್ ನಲ್ಲಿ ಗುರುತಿನ ಚೀಟಿ (Identity Card)ತೋರಿಸಿದರೂ ಕೂಡ ಅದನ್ನು ಪರಿಗಣಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ಬಸ್ ಕಂಡಕ್ಟರ್ ಒಪ್ಪದಿದ್ದರೆ ಅವರ ವಿರುದ್ಧ ಸಾರಿಗೆ ಸಂಸ್ಥೆಗೆ ದೂರು ನೀಡಿ ಪ್ರಕರಣ ದಾಖಲಿಸಬಹುದು.ಈ ಕುರಿತು ಕರ್ನಾಟಕದ ಎಲ್ಲಾ ಸಾರಿಗೆ ಸಂಸ್ಥೆಗಳು ಸುತ್ತೋಲೆ ಹೊರಡಿಸಲಾಗಿದೆ.
ಶಕ್ತಿ ಯೋಜನೆಯಡಿ ಉಚಿತ ಬಸ್ ಸೌಲಭ್ಯ ಪಡೆಯುವವರಿಗೆ ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿಯ ಮೂಲ (ಓರಿಜಿನಲ್) ಪ್ರತಿಯನ್ನು ತೋರಿಸಬೇಕು ಎಂದು ಬಸ್ ಕಂಡಕ್ಟರ್‌ಗಳು ನಿಯಮ ಮಾಡಿದ್ದರು. ಆದರೆ, ಸಾರಿಗೆ ಸಂಸ್ಥೆಯು ನಕಲು ಪ್ರತಿ ಮೂಲಕ ಕೂಡ ಸಂಚಾರ ನಡೆಸಬಹುದು ಎಂದು ಸೂಚಿಸಿದೆ. ಹೀಗಿದ್ದರೂ ಬಸ್ ಕಂಡಕ್ಟರ್‌ಗಳು ಮೂಲ ಪ್ರತಿ ಇಲ್ಲದಿದ್ದರೆ ಮಹಿಳೆಯರನ್ನು ಬಸ್‌ನಿಂದ ಇಳಿಸುವ ಅಥವಾ ಹಣ ಪಡೆದು ಟಿಕೆಟ್ ನೀಡುತ್ತಿದ್ದರು ಹೀಗಾಗಿ, ಮಹಿಳೆಯರು ಈ ಕುರಿತು ವಿರೋಧ ವ್ಯಕ್ತವಾಗಿದೆ.
ಬಸ್ ಕಂಡಕ್ಟರ್ ವಿರುದ್ಧ ಗಂಭೀರ ಕ್ರಮ
ಈ ಬಗ್ಗೆ ದೂರುಗಳು ಸ್ವೀಕೃತಗೊಂಡಲ್ಲಿ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ.ಕ.ರ.ಸಾ.ನಿಗಮ ಕಲಬುರಗಿ ವಿಭಾಗ-1/ ವಿಭಾಗ-2/ ಬೀದರ್/ ಯಾದಗಿರಿ/ ರಾಯಚೂರು/ ಕೊಪ್ಪಳ/ ಬಳ್ಳಾರಿ/ ಹೊಸಪೇಟೆ/ ವಿಜಯಪುರ ಇವರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತ ಗೊಂದಲಗಳ ನಿವಾರಣೆಗೆ ಮತ್ತೊಮ್ಮೆ ಆದೇಶವನ್ನು ಹೊರಡಿಸಲಾಗಿದೆ.
ಇದನ್ನೂ ಓದಿ: Vechicle Registration: ವಾಹನ ಮಾಲಿಕರಿಗೆ ಶಾಕ್- ವಾಹನ ನೋಂದಣಿ ಸ್ಥಗಿತ !! ಕಾರಣವೇನು?!