Home Business LPG Subsidy: ಇನ್ಮುಂದೆ LPG ಗ್ಯಾಸ್’ಗೆ ಸಬ್ಸಿಡಿ ಬೇಕಂದ್ರೆ ಈ ಕೆಲಸ ಕಡ್ಡಾಯ !!

LPG Subsidy: ಇನ್ಮುಂದೆ LPG ಗ್ಯಾಸ್’ಗೆ ಸಬ್ಸಿಡಿ ಬೇಕಂದ್ರೆ ಈ ಕೆಲಸ ಕಡ್ಡಾಯ !!

LPG Subsidy

Hindu neighbor gifts plot of land

Hindu neighbour gifts land to Muslim journalist

LPG Gas subsidy : ಉಜ್ವಲ ಯೋಜನೆಯ(PMUY )ಫಲಾನುಭವಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ಹಾಕಿಕೊಂಡಿದೆ. ಉಜ್ವಲ ಯೋಜನೆಯಡಿಯಲ್ಲಿ ಸುಮಾರು 75 ಲಕ್ಷ ಮಹಿಳೆಯರಿಗೆ ಗ್ಯಾಸ್ (LPG Gas Cylinder)ಸಂಪರ್ಕ ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದೆ.ಉಜ್ವಲ ಯೋಜನೆಯ ಸಬ್ಸಿಡಿ ಪ್ರಯೋಜನ (LPG Gas subsidy)ಹೆಚ್ಚಿನ ಮಂದಿಗೆ ಕುಟುಂಬಗಳಿಗೆ ವಿಸ್ತರಿಸಲು ಗ್ರಾಹಕರ ನೆಲೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದೆ.

ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ಗೆ ಲಿಂಕ್ (LPG Aadhaar link)ಮಾಡಲು ಸೂಚಿಸಿದ್ದು, ಒಂದು ವೇಳೆ, ಗ್ರಾಹಕರು ಈ ಕೆಲಸ ಮಾಡದೇ ಇದ್ದರೆ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಪ್ರಯೋಜನ ಪಡೆಯಲಾಗದು. LPG ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ನೊಂದಿಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ಲಿಂಕ್ ಮಾಡಬಹುದು.

ಆಧಾರ್ ಲಿಂಕ್ (Aadhar Link)ಮಾಡುವಾಗ ಗ್ಯಾಸ್ ಸಂಪರ್ಕವು(LPG Gas Cylinder)ಯಾರ ಹೆಸರಿನಲ್ಲಿದೆ ಎಂಬುದನ್ನು ಗಮನಿಸಬೇಕು. ಇದಲ್ಲದೇ ಅವರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದ್ದು, ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿದೆಯೇ ಎಂಬುದನ್ನೂ ಪರಿಶೀಲಿಸಬೇಕು. LPG ಗ್ಯಾಸ್ ಸಂಪರ್ಕದ ಹೆಸರು ಮತ್ತು ಆಧಾರ್ ಹೆಸರು ಒಂದೇ ಆಗಿರಬೇಕು. ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಆಫ್‌ಲೈನ್‌ ಮೂಲಕ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ವಿತರಕರನ್ನು ಭೇಟಿ ಮಾಡಿ. ಅವರಿಂದ ಅಪ್ಲಿಕೇಶನ್ ಪಡೆದು ಭರ್ತಿ ಮಾಡಿ, ನಿಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದರೆ ಅವರೇ ಇನ್ನುಳಿದ ಪ್ರಕ್ರಿಯೆ ಮುಗಿಸುತ್ತಾರೆ.

ಆಧಾರ್ ಕಾರ್ಡ್‌ನಲ್ಲಿ LPG ಗ್ಯಾಸ್ ಸಂಪರ್ಕವನ್ನು ಲಿಂಕ್ ಮಾಡುವುದು ಹೇಗೆ??
*ಮೊದಲಿಗೆ, UIDAI ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಬೇಕು .
ಇದರ ನಂತರ ಸೆಲ್ಫ್‌ ಸೀಡಿಂಗ್‌ ಪುಟಕ್ಕೆ ಭೇಟಿ ನೀಡಿ,ಅದರಲ್ಲಿ ಕೇಳಲಾದ ಮಾಹಿತಿಯನ್ನು ನಮೂದಿಸಬೇಕು.
* ಇಲ್ಲಿ LPG ಅನ್ನು ಆಯ್ಕೆ ಮಾಡಿ ಆಯಾ ಗ್ಯಾಸ್ ಕಂಪನಿ IVOCL, BPCL, HPCL ಅನ್ನು ನಮೂದಿಸಬೇಕು.
*ನಿಮಗೆ ವಿತರಕರ ಪಟ್ಟಿ ಕಾನಲಿದ್ದು, ಅದರಲ್ಲಿ ನಿಮ್ಮ ವಿತರಕರನ್ನು ಆಯ್ಕೆಮಾಡಿಕೊಳ್ಳಿ.
* ಇದಾದ ಬಳಿಕ ಗ್ಯಾಸ್ ಸಂಪರ್ಕ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮೇಲ್ ಐಡಿ ನಮೂದಿಸಬೇಕು.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ವಿವರಗಳನ್ನು ಗಮನಿಸಿ.
ಈ ಪ್ರಕ್ರಿಯೆ ಮುಗಿಸಿದರೆ ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಆಗಲಿದೆ.

ಇದನ್ನೂ ಓದಿ: ಪ್ರತಿದಿನ ಮಂಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ ಈ 2 ವಿಮಾನಗಳು !!