Ananthapura Babiya Crocodile: ಅನಂತಪುರದಲ್ಲಿ ಪ್ರತ್ಯಕ್ಷವಾದ ಮೊಸಳೆಗೆ ಬಬಿಯಾ ಎಂದೇ ನಾಮಕರಣ : ಭಕ್ತರಲ್ಲಿ ಸಂಭ್ರಮೊಲ್ಲಾಸ !

Kasaragod news another crocodile seen at ananthapura Lake Temple has been renamed babiya

Babiya Crocodile Ananthapura: ಕಾಸರಗೋಡು (Kasaragod) ಶ್ರೀ ಅನಂತಪುರ ದೇವಸ್ಥಾನವು ಮೊಸಳೆಯಿಂದಲೇ ಪ್ರಸಿದ್ಧ. ಮತ್ತು ಶ್ರೀ ಕ್ಷೇತ್ರ ಅನಂತಪುರ ಸರೋವರ ಕ್ಷೇತ್ರ ಎಂದೇ ಹೆಸರಾಗಿದೆ. ಇದೀಗ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿ 75 ವರ್ಷಗಳಿಂದ ಇದ್ದ “ಬಬಿಯಾ” ಎಂಬ ಸಸ್ಯಹಾರಿ ಮೊಸಳೆ (Crocodile) ಒಂದು ವರ್ಷಗಳ ಹಿಂದೆ ಮೃತಪಟ್ಟಿತ್ತು. ಆ ಬಳಿಕ ಇಲ್ಲಿ ಯಾವ ಮೊಸಳೆಯೂ ಇರಲಿಲ್ಲ. ಆದರೆ ಈಗ ಏಕಾಏಕಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

ಹೌದು, ಶ್ರೀ ಕ್ಷೇತ್ರ ಅನಂತಪುರ, ಕುಂಬಳೆ ಸರೋವರದಲ್ಲಿದ್ದ “ಬಬಿಯಾ” (Babiya Crocodile Ananthapura) ಹರಿಪಾದ ಸೇರಿದ ಬಳಿಕ ಇತ್ತೀಚೆಗೆ ಹೊಸ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಇದೀಗ ಕ್ಷೇತ್ರದ ಆಚಾರ್ಯ ದೇಲಂಪಾಡಿ ಗಣೇಶ ತಂತ್ರಿಗಳ ನಿರ್ದೇಶನದಲ್ಲಿ ಹರಿಪಾದ ಸೇರಿದ “ಬಬಿಯಾ” ನೆನಪಿಗಾಗಿ ಮೊಸಳೆಗೆ “ಬಬಿಯಾ” ಎಂದೇ ಮರುನಾಮಕರಣ ಮಾಡಲಾಯಿತು.

ಮಾಹಿತಿ ಪ್ರಕಾರ, ಬಬಿಯಾ ಮೊಸಳೆಗಿಂತ ಮೊದಲು ಈ ಕೆರೆಯಲ್ಲಿದ್ದ ಮೊಸಳೆಯನ್ನು ಬ್ರಿಟಿಷರು ಗುಂಡಿಟ್ಟು ಕೊಂದಿದ್ದರಂತೆ. ಆ ಬಳಿಕ ತಾನಾಗಿಯೇ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿತ್ತು. ಆ ಮೊಸಳೆಯೇ ವರ್ಷಗಳ ಹಿಂದೆ ಅಗಲಿದ ಬಬಿಯ. ಅದಾಗಿ ವರ್ಷವೊಂದು ಪೂರೈಸಿದಾಗಲೇ ಮರಿ ಮೊಸಳೆ ಗೋಚರವಾಗಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

ಸದ್ಯ ಬಬಿಯ ಮೊಸಳೆಗೆ ಹೆಸರಿಡುವ ಈ ಸಂದರ್ಭ “ಮಕರ ಸಂಭ್ರಮ” ಹಾಗೂ ನೈವೇದ್ಯ ಕಾರ್ಯಕ್ರಮ ಜರಗಿತು. ದೇವರ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಮೊಸಳೆ ಎಲ್ಲಾ ಭಕ್ತಾದಿಗಳಿಗೆ ದರ್ಶನವನ್ನು ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್‌ ಸಿಹಿ ಸುದ್ದಿ; ಸಚಿವ ಮಧು ಬಂಗಾರಪ್ಪರಿಂದ ಮತ್ತೊಂದು ಮಹತ್ವದ ಘೋಷಣೆ!!!

Leave A Reply

Your email address will not be published.