Vehicle registration: ವಾಹನ ಮಾಲಿಕರಿಗೆ ಶಾಕ್- ವಾಹನ ನೋಂದಣಿ ಸ್ಥಗಿತ !! ಕಾರಣವೇನು?!

Karnataka news Vehicle registration has been suspended across the state today latest news

Share the Article

Vehicle registration: ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ (Technical Issue)ಉಂಟಾಗಿರುವುದರಿಂದ ಕೆಲವು ದಿನಗಳಿಂದ ವಾಹನ ನೋಂದಣಿ ಸ್ಥಗಿತಗೊಂಡಿದೆ.

ರಾಜ್ಯ ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಕಳೆದ ಮೂರು ದಿನಗಳಿಂದ ಕರ್ನಾಟಕದಾದ್ಯಂತ ವಾಹನ ನೋಂದಣಿ (Vehicle registration) ಸ್ಥಗಿತಗೊಂಡಿದ್ದು, ವಿತರಕರಿಗೆ ಹಾಗೂ ಗ್ರಾಹಕರ ವಾಹನಗಳ ನೋಂದಣಿಗೆ ಅಡ್ಡಿಯಾಗಿದೆ.ದೀಪಾವಳಿ ಹಬ್ಬದ ಸಂದರ್ಭ ವಾಹನ ಖರೀದಿ ಮಾಡಲು ಮುಂದಾಗಿದ್ದ ಅನೇಕ ಗ್ರಾಹಕರಿಗೆ ನಿರಾಸೆಯಾಗಿದೆ.ಪ್ರತಿವರ್ಷ ಹಬ್ಬದ ಸಮಯದಲ್ಲಿ ವಾಹನಗಳ ಮಾರಾಟ ಗರಿಷ್ಠ ಮಟ್ಟಕ್ಕೆ ತಲುಪುತ್ತಿತ್ತು. ದಿನಕ್ಕೆ ಸರಾಸರಿ 15 ವಾಹನಗಳು ಮಾರಾಟವಾಗುತ್ತಿದ್ದವು. ಈ ವರ್ಷ ವೆಬ್‌ಸೈಟ್ ಸಮಸ್ಯೆಯಿಂದ ದೊಡ್ಡ ಹೊಡೆತವಾಗಿದೆ. ಸದ್ಯ 50 ವಾಹನಗಳ ನೋಂದಣಿ ಬಾಕಿ ಇದ್ದು, ಶೇ 10ರಷ್ಟು ಗ್ರಾಹಕರು ಬುಕ್ಕಿಂಗ್‌ ರದ್ದುಗೊಳಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Password: ಭಾರತೀಯರು ಜಾಸ್ತಿ ಯೂಸ್ ಮಾಡೋ ಪಾಸ್’ವರ್ಡ್ ಗಳಿವು – ಅಬ್ಬಬ್ಬಾ.. ಒಂದೊಂದೂ ಇಂಟ್ರೆಸ್ಟಿಂಗ್ ಆಗಿವೆ !!

Leave A Reply