Gruhalakshmi Scheme money: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್- ಇನ್ನು ಈ ಜಿಲ್ಲೆಯ ಯಜಮಾನಿಯರಿಗೆ ಮೊದಲು ಬರುತ್ತೆ ‘ಗೃಹಲಕ್ಷ್ಮೀ’ ದುಡ್ಡು

Karnataka news Gruhalakshmi scheme money released for these district first

Gruhalakshmi Scheme money: ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳ ಪೈಕಿ, ಗೃಹ ಲಕ್ಷ್ಮಿ ಯೋಜನೆಯಡಿ (Gruhalakshmi Scheme) , ಎರಡು ಸಾವಿರ ರೂಪಾಯಿಯಂತೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಯನ್ನು ಈಗಾಗಲೇ ಯಜಮಾನಿಯರ ಖಾತೆಗೆ ಸರ್ಕಾರವು ಹಣ ಜಮಾ ಮಾಡಿದೆ. ಆದರೆ ಇನ್ನೂ ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ.

ಸದ್ಯ ಮೊದಲ ಕಂತಿನ ಹಣ( Gruhalakshmi scheme money ) ಬಾರದೇ ಇರುವವರಿಗೆ ತಕ್ಷಣಕ್ಕೆ 2000 ರೂ ಹಣ ಹಾಕಲಾಗುತ್ತದೆ ಬಳಿಕ ನವೆಂಬರ್ ಮುಗಿಯುವದರೊಳಗೆ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಹಾಕಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಇದೀಗ ಹೊಸ ಅಪ್ ಡೇಟ್ ಸುದ್ದಿ ಎಂದರೆ ಯಾವ ಜಿಲ್ಲೆಗಳಿಗೆ ಸರ್ಕಾರ ಮೊದಲು ಹಣ ಬಿಡುಗಡೆ ಮಾಡುತ್ತದೆ ಎನ್ನುವ ಪಟ್ಟಿ ಬಿಡುಗಡೆ ಆಗಿದೆ.

ಮಾಹಿತಿ ಪ್ರಕಾರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಪ್ಪಳ, ಕೊಡಗು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ, ಚಾಮರಾಜನಗರ, ಬೀದರ್ ಮೊದಲಾದ ಜಿಲ್ಲೆಗಳಲ್ಲಿ ಹಣ ಹಾಕಿದ ನಂತರ ಉಳಿದ ಜಿಲ್ಲೆಗಳಲ್ಲೂ ಕೂಡ ಹಣ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಈಗಾಗಲೇ ಸರ್ಕಾರ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕೆ, ಸರ್ಕಾರದ ಕಡೆಯಿಂದಲೂ ತಾಂತ್ರಿಕ ದೋಷಗಳು ಕಾರಣವಾಗಿತ್ತು. ಇದೀಗ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಸರ್ಕಾರ ಹಣ ಹಾಕುವ ಪ್ರಕ್ರಿಯೆ ನಡೆಸುತ್ತಿದೆ.

ಇದನ್ನೂ ಓದಿ: RBI ನಿಂದ ಮಹತ್ವದ ಆದೇಶ; Bajaj Finance ಸಾಲ ಕೊಡುವಂತಿಲ್ಲ!!!

Leave A Reply

Your email address will not be published.