BBK Season 10: ಬಿಗ್ ಬಾಸ್ ಮನೆಯಲ್ಲಿ ತನಿಷಾ ಬಂಧನ ?! SP ಹೇಳಿದ್ದೇನು ?
Entertainment news bbk season 10 contestant Tanisha kuppanda case SP first reaction
BBK contestant Tanisha case: ಬಿಗ್ ಬಾಸ್ ಕನ್ನಡ ಸೀಸನ್ 10ನ(BBK Season 10) ಸ್ಪರ್ಧಿ ತನಿಷಾ (Tanisha Kuppanda)ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ದೌರ್ಜನ್ಯ ಕಾಯ್ದೆಯಡಿ ಎಫ್ಐಆರ್ (FIR)ದಾಖಲಿಸಲಾಗಿದೆ.
ಹುಲಿ ಉಗುರು ಪ್ರಕರಣದ ಮೂಲಕ ಬಿಗ್ ಬಾಸ್(Bigg Boss Season 10)ಮನೆಯಿಂದ ಜೈಲು ಪಾಲಾದ ವರ್ತೂರ್ ಸಂತೋಷ್(Varthur Santhosh) ಬಳಿಕ ಈಗ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಜೈಲು ಸೇರ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಮನರಂಜನಾ ಕಾರ್ಯಕ್ರಮವಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 10ನ(BBK Season 10) ಸ್ಪರ್ಧಿ ತನಿಷಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ದೌರ್ಜನ್ಯ ಕಾಯ್ದೆಯಡಿ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ( BBK contestant Tanisha case) ದಾಖಲಾಗಿದೆ ಎಂದು ತಿಳಿದುಬಂದಿದೆ.
ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಬೋವಿ ಸಮಾಜದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಬೋವಿ ಸಮುದಾಯದ ರಾಜ್ಯಾಧ್ಯಕ್ಷೆ ಪದ್ಮ ಎಂಬುವರು ಕುಂಬಳಗೋಡು ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ FIR ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಇದೀಗ ಬಿಗ್ ಬಾಸ್ ಮತ್ತೊಬ್ಬ ಸ್ಪರ್ಧಿ ತನಿಷಾ ಅವರಿಗೂ ಕೂಡ ಬಂಧನದ ಭೀತಿ ಎದುರಾಗಿದೆ. ತನಿಷಾ ವಿರುದ್ಧದ ಪ್ರಕರಣದ ಬಗ್ಗೆ ರಾಮನಗರ ಎಸ್‌ಪಿ ಮಾಹಿತಿ ನೀಡಿದ್ದು, ಈಗಾಗಲೇ ಮಾಗಡಿ ಡಿವೈಎಸ್‌ಪಿ ಪ್ರವೀಣ್ ನೇತೃತ್ವದಲ್ಲಿ ವಿಚಾರಣೆ ನಡೆಸಿರುವ ಬಗ್ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
FSL ತನಿಖೆಗಾಗಿ ಬಿಗ್‌ಬಾಸ್ ವಿಡಿಯೋ ರವಾನಿಸಿದ್ದು, ವರದಿ ಬಂದ ನಂತರ ಪೊಲೀಸ್ ಪಡೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.FSL ವರದಿಯ ಆಧಾರದ ಮೇರೆಗೆ ತನಿಷಾ ಬಿಗ್‌ಬಾಸ್ ಭವಿಷ್ಯ ನಿರ್ಧಾರವಾಗಲಿದೆ. ಈ ನಿಟ್ಟಿನಲ್ಲಿ ತನಿಷಾ ಕುಪ್ಪಂಡಗೆ ತನಿಷಾ ಕುಟುಂಬಸ್ಥರು ಜಾಮೀನು ಪಡೆಯುವ ನಿಟ್ಟಿನಲ್ಲಿ ವಕೀಲರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:LPG Subsidy: ಇನ್ಮುಂದೆ LPG ಗ್ಯಾಸ್’ಗೆ ಸಬ್ಸಿಡಿ ಬೇಕಂದ್ರೆ ಈ ಕೆಲಸ ಕಡ್ಡಾಯ !!