BJP-JDS: ಬಿಜೆಪಿ ಜೊತೆ ಜೆಡಿಎಸ್ ವಿಲೀನ ?!

BJP-JDS: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್(BJP-JDS) ಪಕ್ಷಗಳು ಲೋಕಸಭಾ ಚುನಾವಣೆಯನ್ನು ಎದುರಿಸಲು ಮೈತ್ರಿ ಮಾಡಿಕೊಂಡ ಬಳಿಕ ಎದುರಾಳಿ ಪಕ್ಷವಾಗಿರುವ ಕಾಂಗ್ರೆಸ್ ಪ್ರತಿಯೊಂದು ಹಂತದಲ್ಲಿಯೂ ಎರಡೂ ಪಕ್ಷಗಳನ್ನು ಮಾತಿನಲ್ಲೇ ತಿವಿಯುತ್ತಿದೆ. ಅಂತೆಯೇ ಇದೀಗ ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಕೂಡ ಇವೆರಡರ ಮೈತ್ರಿ ಕುರಿತು ವ್ಯಂಗ್ಯವಾಡಿದ್ದಾರೆ.

ಹೌದು, ಜೆಡಿಎಸ್ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ‘ತನ್ನ ಸಿದ್ಧಾಂತ, ಮೌಲ್ಯಗಳನ್ನು ಗಾಳಿಗೆ ತೂರಿರುವ ಜೆಡಿಎಸ್ ಪಕ್ಷದಿಂದ ‘ಎಸ್’(ಜಾತ್ಯತೀತ) ತೆಗೆದು ಹಾಕಬೇಕಾಗಿದೆ. ಜೆಡಿಎಸ್ ತನ್ನ ಸ್ವರೂಪದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿಲ್ಲ, ಕೇವಲ ಕುಟುಂಬದ ಪಕ್ಷ ಅಷ್ಟೆ’ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟೇ ಅಲ್ಲದೆ ಸದ್ಯದಲ್ಲೇ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸಂಪೂರ್ಣ ವಿಲೀನ ಆದರೂ ಆಶ್ಚರ್ಯವಿಲ್ಲ’ ಎಂದು ಅವರು ಭವಿಷ್ಯವನ್ನೂ ನುಡಿದಿದ್ದಾರೆ.

ಅಲ್ಲದೆ ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷವಾಗಿ ಸೀಮಿತವಾಗಿದೆ. ನಾವಿದ್ದಾಗ ಅದು ಜಾತ್ಯತೀತ ಜನತಾದಳವಾಗಿತ್ತು. ಆದರೆ ಈಗ ಬರೀ ಜನತಾ ದಳವಾಗಿದೆ. ಅಪ್ಪ ಮಕ್ಕಳು ಮಾತ್ರ ಅಧಿಕಾರಕ್ಕಾಗಿ ಓಡಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಮೋದಿ ಸಲ್ಮಾನ್ ಖಾನ್ ತರ !! ಅರೆ, ಹೀಗೆ ಹೇಳಿದ್ಯಾರು ?!

Leave A Reply

Your email address will not be published.