Congress Government: ಬಿಜೆಪಿಗೆ ಬಿಗ್ ಶಾಕ್- ಕಾಂಗ್ರೆಸ್ ನಿಂದ ಮತ್ತೊಂದು ಪ್ರಮುಖ ಯೋಜನೆ ರದ್ದು!!!

Karnataka politics news congress government ban child care scheme latest news

Child Care Scheme: ಕಾಂಗ್ರೆಸ್(Congress)ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ(BJP Government)ಪ್ರಮುಖ ಯೋಜನೆಯಾದ ಶಿಶುಪಾಲನಾ ಯೋಜನೆಯನ್ನು(Child Care Scheme)ರಾಜ್ಯ ಸರ್ಕಾರ ರದ್ದು  ಮಾಡಿದೆ. ಕಟ್ಟಡ  ಕಾರ್ಮಿಕರ 6 ವರ್ಷದೊಳಗಿನ  ಮಕ್ಕಳ ಪೋಷಣೆಯ ನಿಟ್ಟಿನಲ್ಲಿ 2020- 21ರಲ್ಲಿ ಹಿಂದಿನ ಸರಕಾರ ಸ್ಥಾಪಿಸಿದ್ದ 137 ಶಿಶುಪಾಲನ ಕೇಂದ್ರಗಳನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ನಾಲ್ಕು ಸಾವಿರ ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರದಲ್ಲೇ ‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ತಯಾರಿ ನಡೆಸಿದೆ. ನರೇಗಾ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳ ಪಾಲನೆ, ಪೋಷಣೆಗೆ ರಾಜ್ಯಾದ್ಯಂತ 40 ಕೋಟಿ ವೆಚ್ಚದಲ್ಲಿ 4,000 ಗ್ರಾಮ ಪಂಚಾಯತಿಗಳಲ್ಲಿ ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರಗಳನ್ನು ಆರಂಭ ಮಾಡಲಿದೆ.

2020-21ನೆ ಸಾಲಿನಲ್ಲಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಇದಕ್ಕಾಗಿ ಕಾರ್ಮಿಕ ಇಲಾಖೆಯಿಂದ ಹಣ ಖರ್ಚು ಮಾಡಿ ಸಂಚಾರಿ ಶಿಶುಪಾಲನ ಕೇಂದ್ರಗಳ ಒಳಗೊಂಡಂತೆ 137 ಶಿಶುಪಾಲನ ಕೇಂದ್ರಗಳನ್ನು ತೆರೆದು ಈ ಮೂಲಕ ಮಗುವಿನ ಆರೈಕೆಯ ಹೊರೆಯನ್ನು ಕಡಿಮೆ ಮಾಡಿ ತಾಯಿಗೆ ಉದ್ಯೋಗದಲ್ಲಿ ತೊಡಗಲು ಅನುವು ಮಾಡಿಕೊಡಲಿದೆ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ನೀಡಿರುವ ವರದಿ ಆಧರಿಸಿ ಸಂಚಾರಿ ಶಿಶುಪಾಲನ ಕೇಂದ್ರ ಸೇರಿ 137 ಶಿಶುಪಾಲನ ಕೇಂದ್ರಗಳನ್ನೂ ರದ್ದು ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: HSRP Number Plate: HSRP ನಂಬರ್ ಪ್ಲೇಟ್ ಅಳವಡಿಸೋ ವಾಹನ ಸವಾರರಿಗೆ ಗುಡ್ ನ್ಯೂಸ್ – ಯಾಕೆ ಇದು ಇಷ್ಟೊಂದು ಇಂಪಾರ್ಟೆಂಟ್ !!

Leave A Reply

Your email address will not be published.