Gold Cleaning: ಅಂಗಡಿಗಳಿಗೆ ಕೊಂಡೋಗೋದೇ ಬೇಡ- ಮನೆಯಲ್ಲಿಯೇ ನಿಮ್ಮ ಒಡವೆಗಳಿಗೆ ಹೀಗೆ ಪಾಲಿಶ್ ಮಾಡಿ !!

Lifestyle gold cleaning tips simple tips to clean gold jewellery in kannada

Gold Cleaning Tips: ಚಿನ್ನ ಎಂದರೇ ಸಾಕು!! ಹೆಂಗೆಳೆಯರಿಗೆ ಎಲ್ಲಿಲ್ಲದ ವ್ಯಾಮೋಹ!! ಅದರಲ್ಲಿಯೂ ಚಿನ್ನದ ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು ಮತ್ತು ಉಂಗುರಗಳಿಗೆ ಹೊಸ ಹೊಳಪು ಕಳೆದುಕೊಂಡರೆ ಏನು ಮಾಡೋದು ಅಂತ ಯೋಚಿಸುತ್ತಿದ್ದೀರಾ?? ಹಾಗಿದ್ರೆ, ಮನೆಯಲ್ಲೇ ನೀವು ಕೆಲವು ಸಿಂಪಲ್ ಟಿಪ್ಸ್ (gold Cleaning Tips)ಫಾಲೋ ಮಾಡಿ ಚಿನ್ನ ಫಳ ಫಳ ಅಂತ ಹೊಳೆಯುವ ಹಾಗೆ ಮಾಡಬಹುದು.

ಹೆಚ್ಚಿನ ಸಂದರ್ಭದಲ್ಲಿ ಮದುವೆಯಾಗುವಾಗ ಚಿನ್ನ(Gold)ಮಾಡಿಸಿಕೊಂಡಿದ್ದರೆ, ಹಲವು ವರ್ಷಗಳವರೆಗೆ ಚಿನ್ನ ಬಳಸುವುದರಿಂದ ಚಿನ್ನ ಹಳೆಯದಂತೆ ಕಾಣಿಸುತ್ತದೆ. ಪ್ರತಿದಿನ ಚಿನ್ನವನ್ನು ಧರಿಸುತ್ತಿದ್ದರೆ ಕ್ರಮೇಣ ಅದರ ಹೊಳಪು ಕಡಿಮೆಯಾಗಿ ಆಭರಣ ಧರಿಸಲು ಜನ ಹಿಂದೇಟು ಹಾಕುವುದು ಸಾಮಾನ್ಯ!! ಆದರೆ, ಅದಕ್ಕಾಗಿ ನೀವು ಅಕ್ಕಸಾಲಿಗರ ಬಳಿಗೆ ಹೋಗಬೇಕಾಗಿಲ್ಲ!! ಬದಲಿಗೆ ಮನೆಯಲ್ಲೇ ಸರಳ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಿ. ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಬ್ಲೀಚ್ ಅನ್ನು ಮಾತ್ರ ಬಳಕೆ ಮಾಡಬೇಡಿ!!ಇದು ಆಭರಣಗಳ ಬಣ್ಣ ಹೋಗುವಂತೆ ಮಾಡುತ್ತದೆ.

# ಡಿಶ್ ಸೋಪ್:
ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು, ಮೊದಲು ಒಂದು ಬೌಲ್ನಲ್ಲಿ ಬಿಸಿ ನೀರನ್ನು ಹಾಕಿಕೊಂಡು ಅದರಲ್ಲಿ ಲಿಕ್ವೆಡ್ ಸೋಪ್ ಹಾಕಿ ಮಿಶ್ರಣ ಮಾಡಿಕೊಳ್ಳಿ. ಈಗ ಕೊಳಕು ಆಭರಣಗಳನ್ನು ಅದರಲ್ಲಿ ಅದ್ದಿ, ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ!! ಆ ಬಳಿಕ ಮೃದುವಾದ ಬ್ರಷ್ ಮೂಲಕ ಸ್ವಚ್ಛ ಮಾಡಿ ಆಭರಣವನ್ನು ಶುದ್ಧ ನೀರಿನಿಂದ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿ.

# ಅಡಿಗೆ ಸೋಡಾ ಮತ್ತು ವಿನೆಗರ್:
ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ಬಿಸಿ ನೀರನ್ನು ಮಿಶ್ರಣ ಮಾಡಿಕೊಂಡು ಈ ಪೇಸ್ಟ್ ಅನ್ನು ಕೊಳಕಾದ ಆಭರಣಗಳ ಮೇಲೆ ಹಚ್ಚಿ, ಅದನ್ನು ಬಿಳಿ ವಿನೆಗರ್ನಿಂದ ತೊಳೆದು ಆ ಬಳಿಕ ಅದನ್ನು ಸಂಪೂರ್ಣವಾಗಿ ನೀರಿನ ಸಹಾಯದಿಂದ ಸ್ವಚ್ಛಗೊಳಿಸಿದರೆ ಆಭರಣಗಳು ಫಳ ಫಳ ಅಂತ ಹೊಳೆಯುವುದನ್ನು ಗಮನಿಸಬಹುದು.

ಟೂತ್ಪೇಸ್ಟ್:
ಒಂದು ಬೌಲ್ನಲ್ಲಿ ಟೂತ್ಪೇಸ್ಟ್ ಮತ್ತು ಕೆಲವು ಡ್ರಾಪ್ಸ್ ನೀರನ್ನು ಬೆರೆಸಿ ತೆಳುವಾದ ಪೇಸ್ಟ್ ಸಿದ್ದ ಪಡಿಸಿ, ಈಗ ಮೃದುವಾದ ಬ್ರಷ್ ಸಹಾಯದಿಂದ ಆಭರಣವನ್ನು ಸ್ವಚ್ಛಗೊಳಿಸಿ ನಂತರ ತೊಳೆಯಿರಿ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ- ಇನ್ನು ರೈಲಿನಲ್ಲಿ ಪ್ರಯಾಣಿಸುವಾಗ ಊಟ ತಿಂಡಿ, ಬೆಡ್ ಶೀಟ್, ದಿಂಬು ಎಲ್ಲವೂ ಸಿಗುತ್ತೆ ಉಚಿತ !! ಹೀಗೆ ಮಾಡಿದ್ರೆ ಮಾತ್ರ

Leave A Reply

Your email address will not be published.