Jio AirFiber in Karnataka: ದೀಪಾವಳಿ ಪ್ರಯುಕ್ತ ಜಿಯೋ ಗ್ರಾಹಕರಿಗೆ ಸಿಗ್ತಿದೆ ಭರ್ಜರಿ ಆಫರ್- ಈ ನಗರದ ಗ್ರಾಹಕರಿಗೆ ಮಾತ್ರ

Technology news Deepavali festival offer jio customer now get jio airfiber offer in Karnataka and other cities

Jio AirFiber in Karnataka: ಗ್ರಾಹಕರ ಗಮನ ಸೆಳೆಯಲು, ಖ್ಯಾತ ಜಿಯೋ ಸಂಸ್ಥೆಯ ಇತ್ತೀಚಿನ ಹೊಸ ಸೇವೆಯಾದ ಜಿಯೋ ಏರ್‌ಫೈಬರ್‌ 5G (Jio AirFiber 5G FWA – ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್) ಪ್ರಾರಂಭ ಆಗಿದೆ. ಹೌದು, ಇತ್ತೀಚಿಗೆ ರಿಲಯನ್ಸ್ ಅಧಿಕೃತವಾಗಿ ಜಿಯೋ ಏರ್‌ಫೈಬರ್ ಅನ್ನು ಎಂಟು ಭಾರತೀಯ ನಗರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.ಜೊತೆಗೆ ದೀಪಾವಳಿಯ ಸಂದರ್ಭದಲ್ಲಿ ಮತ್ತಷ್ಟು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಿದೆ.

ಮುಖ್ಯವಾಗಿ ರಿಲಯನ್ಸ್ ಸಂಸ್ಥೆಯು ಜಿಯೋ ಏರ್‌ಫೈಬರ್ ಸೇವೆಯನ್ನು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಪುಣೆ ಸೇರಿದಂತೆ ಎಂಟು ಭಾರತೀಯ ನಗರಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಈಗ ಈ ಸೇವೆಯನ್ನು 115 ನಗರಗಳಿಗೆ ವಿಸ್ತರಿಸಿದೆ.

ಜಿಯೋ ಏರ್‌ಫೈಬರ್ ಪಡೆದ ಹೊಸ 115 ನಗರಗಳ ಲಿಸ್ಟ್‌ ಇಲ್ಲಿದೆ:
ಕರ್ನಾಟಕ ರಾಜ್ಯದಲ್ಲಿ (Jio AirFiber in Karnataka ) ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾಂಡೇಲಿ, ದೇವಂಗೆರೆ, ದೊಡ್ಡಬಳ್ಳಾಪುರ, ಗುಲ್ಬರ್ಗ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಮತ್ತು ಉಡುಪಿ ನಗರಗಳಲ್ಲಿ ಸೇವೆಯು ಲಭ್ಯ.

ಆಂಧ್ರಪ್ರದೇಶ ರಾಜ್ಯದಲ್ಲಿ ಅನಂತಪುರ, ಕಡಪಾ, ಗುಂಟೂರು, ಕಾಕಿನಾಡ, ಕರ್ನೂಲ್, ನೆಲ್ಲೂರು, ಒಂಗೋಲ್, ರಾಜಮಂಡ್ರಿ, ತಿರುಪತಿ, ವಿಜಯವಾಡ, ವಿಶಾಖಪಟ್ಟಣಂ, ವಿಜಯನಗರಂ ನಗರಗಳಲ್ಲಿ ಸೇವೆ ಲಭ್ಯ.

ತೆಲಂಗಾಣ ರಾಜ್ಯದಲ್ಲಿ ಹೈದರಾಬಾದ್, ಆರ್ಮೂರ್ (ಕೋಟಾರ್ಮೂರ್), ಜಗ್ತಿಯಾಲ್, ಕರೀಂನಗರ, ಖಮ್ಮಮ್, ಕೊತಗುಡೆಂ, ಮಹೆಬೂಬ್ನಗರ, ಮಂಚೇರಿಯಲ್, ಮಿರ್ಯಾಲ್ಗುಡ, ನಿರ್ಮಲ್, ನಿಜಾಮಾಬಾದ್, ಪಾಲ್ವೋಂಚ, ಪೆದ್ದಪಲ್ಲಿ(ರಾಮಗುಂಡಂ), ರಾಮಗುಂಡಂ, ಸಂಗರೆಡ್ಡಿ, ಸಿದ್ದಿಪೇಟ್, ಸಿರ್ಸಿಲ್ಲಾ, ಸೂರ್ಯಪೇಟ್, ತಾಂಡಲೂರು ನಗರಗಳಲ್ಲಿ ಸೇವೆಯು ಲಭ್ಯ.

ಗುಜರಾತ್ ರಾಜ್ಯದಲ್ಲಿ ಅಹಮದಾಬಾದ್, ಆನಂದ್, ಅಂಕಲೇಶ್ವರ, ಬಾರ್ಡೋಲಿ, ಭರೂಚ್, ಭಾವನಗರ, ಭುಜ್, ದಾಹೋದ್, ದೀಸಾ, ಹಿಮ್ಮತ್‌ನಗರ, ಜಾಮ್‌ನಗರ, ಜುನಾಗಢ್, ಕಡಿ, ಕಲೋಲ್, ಮೆಹ್ಸಾನಾ, ಮೊರ್ವಿ, ನಾಡಿಯಾಡ್, ನವಸಾರಿ, ಪಾಲನ್‌ಪುರ್, ರಾಜ್‌ಕೋಟ್, ಸೂರತ್, ವಡೋದರಾ, ವಲ್ಸಾದ್, ವಾಪಿ ಮತ್ತು ವಾಧ್ವಾನ್ ನಗರಗಳಲ್ಲಿ ಸೇವೆ ಲಭ್ಯ.

ಮಹಾರಾಷ್ಟ್ರ ರಾಜ್ಯದಲ್ಲಿ ಪುಣೆ, ಮುಂಬೈ, ಅಹ್ಮದ್‌ನಗರ, ಅಮರಾವತಿ, ಔರಂಗಾಬಾದ್, ಚಂದ್ರಾಪುರ, ಜಲ್ನಾ, ಕೊಲ್ಲಾಪುರ, ನಾಗ್ಪುರ, ನಾಂದೇಡ್, ನಾಸಿಕ್, ರತ್ನಗಿರಿ, ಸಾಂಗ್ಲಿ, ಮತ್ತು ಸೊಲ್ಲಾಪುರ ನಗರಗಳಲ್ಲಿ ಸೇವೆ ದೊರೆಯಲಿದೆ.

ತಮಿಳುನಾಡು ರಾಜ್ಯದಲ್ಲಿ ಚೆನ್ನೈ, ಅಂಬೂರ್, ಚೆಂಗಲ್ಪಟ್ಟು, ಕೊಯಮತ್ತೂರು, ಈರೋಡ್, ಹೊಸೂರು, ಕಾಂಚೀಪುರಂ, ಕರೂರ್, ಕುಂಭಕೋಣಂ, ಮಧುರೈ, ನಾಮಕ್ಕಲ್, ನೇವೇಲಿ, ಪಟ್ಟುಕೊಟ್ಟೈ, ಪೊಲ್ಲಾಚಿ, ಸೇಲಂ, ಶ್ರೀಪೆರುಂಪುದೂರ್, ಶ್ರೀರಂಗಂ, ತಿರುಚಿರಾಪಳ್ಳಿ, ತಿರುಪ್ಪೂರ್, ತಿರುವಳ್ಳೂರು, ತಿರುವಣ್ಣಾಮಲೈ, ಮತ್ತು ವೆಲ್ಲೂರು ನಗರಗಳಲ್ಲಿ ಸೇವೆ ಸಿಗಲಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೋಲ್ಕತ್ತಾ ನಗರದಲ್ಲಿ ಸೇವೆ ಲಭ್ಯ. ಅದೇ ರೀತಿ ದೆಹಲಿ ರಾಜ್ಯದಲ್ಲಿ ದೆಹಲಿ NCR ಯಲ್ಲಿ ಸೇವೆಯು ದೊರೆಯುತ್ತದೆ.

ಜಿಯೋ ಏರ್‌ಫೈಬರ್ ಪ್ಲ್ಯಾನ್ ಮಾಹಿತಿ:
ಜಿಯೋ ಏರ್‌ ಫೈಬರ್‌ 30mpbs ಯೋಜನೆ ಬೆಲೆಯು 599ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಜೊತೆಗೆ 14 ಆಪ್ಸ್‌ ಸೇವೆ ಪಡೆದಿದೆ.
ಜಿಯೋ ಏರ್‌ ಫೈಬರ್‌ 100mpbs ಯೋಜನೆ ಬೆಲೆಯು 899ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಜೊತೆಗೆ 14 ಆಪ್ಸ್‌ ಸೇವೆ ಒಳಗೊಂಡಿದೆ. ಹಾಗೆಯೇ 1199ರೂ. ಯೋಜನೆಯು 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಜೊತೆಗೆ 14 ಆಪ್ಸ್‌ ಸೇವೆ ಜೊತೆಗೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.

ಇದನ್ನೂ ಓದಿ: RDPR ಇಲಾಖೆಯಲ್ಲಿರುವ ವಿವಿಧ ವೃಂದಗಳ ನೇರ ನೇಮಕಾತಿ! 733 ಹುದ್ದೆಗಳು!

Leave A Reply

Your email address will not be published.