Womens Fight For BusSeat: ಶಕ್ತಿ ಯೋಜನೆ ಎಫೆಕ್ಟ್- ಬಸ್ ಸೀಟಿಗಾಗಿ ‘ಶಕ್ತಿ’ ಮೀರಿ ಮೆಟ್ಟಲ್ಲಿ ಹೊಡೆದುಕೊಂಡ ನಾರಿಯರು!!

Karnataka news Shakti scheme effect two womens fights for busseat in Belagavi govt bus

Womens Fight For BusSeat : ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸರ್ಕಾರ ಕೆಲವು ಯೋಜನೆಗಳನ್ನು ಶುರು ಮಾಡಿದೆ. ಸದ್ಯ ರಾಜ್ಯ ಸರ್ಕಾರ ಕಾಂಗ್ರೆಸ್ ಆಳ್ವಿಕೆ ನಂತರ, ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ಬಂದಾಗಿನಿಂದ ಬಸ್ ಗಳಲ್ಲಿ ಮಹಿಳೆಯರದ್ದೇ ಹವಾ. ವಿಶೇಷ ಅಂದ್ರೆ ಸರ್ಕಾರ ಉಚಿತ ಪ್ರಯಾಣವನ್ನು ಘೋಷಿಸಿದರೂ ಕೂಡಾ ಇದೀಗ ಮಹಿಳೆಯರು ಸೀಟಿಗಾಗಿ ಹೊಡೆದಾಡಿಕೊಳ್ಳುತ್ತಿರುವುದು (Womens Fight For BusSeat) ಕಂಡು ಬರುತ್ತಿದೆ.

ಹೌದು, ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ- ಬೆಳಗಾವಿ (Belagavi) ಮಾರ್ಗದ ಬಸ್ ನಲ್ಲಿ ಮಹಿಳೆಯರಿಬ್ಬರು ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಮಹಿಳೆಯರಿಬ್ಬರ ನಡುವೆ ಸೀಟು ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಅದೇ ವೇಳೆ ಓರ್ವ ಮಹಿಳೆ ಮತ್ತೋರ್ವ ಮಹಿಳೆಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಮಹಿಳೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಂತೆ ಪುರುಷ ಪ್ರಯಾಣಿಕ ಮಹಿಳೆಯನ್ನು ಥಳಿಸಿದ್ದಾನೆ. ಮಹಿಳೆಯರಿಬ್ಬರೂ ಹೆಡೆದಾಡಿಕೊಂಡಿದ್ದಲ್ಲದೇ ಇಬ್ಬರೂ ಕಿರುಚಾಡಿ ಕಣ್ಣೀರಿಟ್ಟಿದ್ದಾರೆ.

ಸದ್ಯ ಮಹಿಳೆಯರ ರಂಪಾಟ ನೋಡಿ, ಪರಿಸ್ಥಿತಿ ಹದಗೆಡುವ ಮೊದಲು ಉಳಿದ ಪ್ರಯಾಣಿಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಹೊಡೆದಾಟದ ವಿಡಿಯೋ ವೈರಲ್ ಆಗಿದೆ.

https://www.kooapp.com/koo/krishna792S3C/2b1b3da0-78cb-4368-88fd-b74dc44c0985

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಜಿಯೋ ಗ್ರಾಹಕರಿಗೆ ಸಿಗ್ತಿದೆ ಭರ್ಜರಿ ಆಫರ್- ಈ ನಗರದ ಗ್ರಾಹಕರಿಗೆ ಮಾತ್ರ

Leave A Reply

Your email address will not be published.