Home News ಉಡುಪಿ Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಮೃತದೇಹ ಕಂಡು ಕಣ್ಣೀರಾದ ಪುತ್ರ- ಪೊಲೀಸರಿಂದ ಆರೋಪಿ...

Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಮೃತದೇಹ ಕಂಡು ಕಣ್ಣೀರಾದ ಪುತ್ರ- ಪೊಲೀಸರಿಂದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ!!!

Udupi murder case

Hindu neighbor gifts plot of land

Hindu neighbour gifts land to Muslim journalist

Udupi murder case: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ನಿನ್ನೆ ನಡೆದಿದ್ದು, ಈ ಘಟನೆ ನಡೆದ ನಂತರ ಜನರು ಬೆಚ್ಚಿ ಬಿದ್ದಿದ್ದಾರೆ. ನಾಲ್ವರ ಕಗ್ಗೊಲೆಯ ನಂತರ ಇದೀಗ ಹತ್ಯೆ ಪ್ರಕರಣಕ್ಕೆ (Udupi murder case)ಸಂಬಂಧಪಟ್ಟಂತೆ ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

ಮೃತ ಹಸೀನಾ ಪುತ್ರ, ಹತ್ಯೆಗೀಡಾದ ಮೂವರು ಮಕ್ಕಳ ಸೋದರ ಅಸಾದ್‌ ಬೆಂಗಳೂರಿನಿಂದ ಆಗಮಿಸಿದ್ದಾರೆ.

ಶವಗಾರಕ್ಕೆ ಬರುತ್ತಿದ್ದಂತೆ ಪುತ್ರನ ಕಣ್ಣೀರಾಗಿದ್ದಾನೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ ನೂರ್‌ ಮಹಮದ್‌ ಉಡುಪಿಗೆ ಆಗಮಿಸಲಿದ್ದಾರೆ.

ಉಡುಪಿಯ ಜಾಮಿಯಾ ಮಸೀದಿಗೆ ತಂದು ಅಂತಿಮ ಪೂಜಾವಿಧಿ ವಿಧಾನಗಳು ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ. ಅನಂತರ ಕೋಡಿಬೆಂಗ್ರೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಆರೋಪಿಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದು, ನಾಲ್ಕು ಜಿಲ್ಲೆಗಳಾದ ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಮಾಹಿತಿ ರವಾನಿಸಿರುವ ಮಾಹಿತಿ ಇದೆ.

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಜ್ಜಿ ಅವರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Udupi: ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಆಟೋ ಡ್ರೈವರ್ ಹೇಳಿದ್ದೇನು ?!