Chaitra assult: ಚೈತ್ರಾ ಮೇಲೆ ಜೈಲಿನಲ್ಲಿ ಹಲ್ಲೆ ನಡೆಸಿದ ಆಫ್ರಿಕನ್ ಕೈದಿಗಳು

Karnataka news assult on chaitra in jail BY AFRICAN WOMEN PRISONERS latest news

Share the Article

Chaitra assult: ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ (Chaitra) ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ, ಟಿಕೆಟ್ ಕುರಿತು ಬರೋಬ್ಬರಿ 5 ಕೋಟಿ ಡೀಲ್ ಪ್ರಕರಣದಲ್ಲಿ ಜೈಲು ಸೇರಿದ್ದು, ಇದೀಗ ಚೈತ್ರಾಗೆ ಜೈಲಿನಲ್ಲಿದ್ದರೂ ಮತ್ತೊಂದು ರೀತಿ ಸಂಕಷ್ಟ ಎದುರಾಗಿದೆ.

ಹೌದು, ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಮೇಲೆ ಹಲ್ಲೆ ನಡೆದಿದ್ದು, ಮಹಿಳಾ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮೇಲೆ ಭೀಕರ ಅಟ್ಯಾಕ್ (Chaitra assult)ಮಾಡಿದ್ದಾರೆ. ಮಾಹಿತಿ ಪ್ರಕಾರ, ಭಾನುವಾರ ಮಧ್ಯಾಹ್ನ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಮತ್ತು ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಚೈತ್ರಾ ಮೇಲೆ ಆಫ್ರಿಕನ್ ಮಹಿಳಾ ಕೈದಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಅಲ್ಲದೇ ಚೈತ್ರಾ ಮಾತ್ರವಲ್ಲದೇ ಆಕೆಯ ಜೊತೆಗಿದ್ದ ಮೂವರು ಸ್ಥಳೀಯ ಮಹಿಳಾ ಕೈದಿಗಳ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ಚೈತ್ರಾ ದೂರು ನೀಡಿದ್ದು, ಹೆಚ್ಚಿನ ಮಾಹಿತಿ ವಿಚಾರಣೆ ನಂತರ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜ್ಯ ಸರ್ಕಾರದಿಂದ ಬಿಗಿ ಭದ್ರತೆ- ಏನೆಲ್ಲಾ ಸೌಲಭ್ಯ ಉಂಟು ಗೊತ್ತಾ ?!

Leave A Reply