7th Pay Commisson DA Arrears: ಕೇಂದ್ರ ನೌಕರರಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಗುಡ್ ನ್ಯೂಸ್ -ಖಾತೆಗೆ ಜಮಾ ಆಗಲಿದೆ ಇಷ್ಟು ಹೆಚ್ಚಿಗೆ ಮೊತ್ತ !!
Business news 7th pay commission update diwali gifts for Central Government employees
7th Pay Commisson DA Arrears: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಹೌದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಶೀಘ್ರದಲ್ಲೇ ಡಿಎ ಬಾಕಿ ಬಿಡುಗಡೆ (7th Pay Commisson DA Arrears) ಮಾಡಲಿದೆ ಎನ್ನಲಾಗಿದೆ. ಸುಮಾರು 1 ಕೋಟಿ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದಾರೆ.
ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ನೀಡಿರಲಿಲ್ಲ. ಇದೀಗ ಮೋದಿ ಸರ್ಕಾರವು 1 ಜನವರಿ 2020 ರಿಂದ 30 ಜೂನ್ 2021 ರವರೆಗಿನ ಡಿಎ ಬಾಕಿಯನ್ನು ನೌಕರರ ಖಾತೆಗಳಿಗೆ ಜಮಾ ಮಾಡಿಲ್ಲ. ಈ ಡಿಎ ಬಾಕಿಯನ್ನು ನೀಡುವಂತೆ ನೌಕರರು ಬಹಳ ದಿನಗಳಿಂದ ಮನವಿ ಮಾಡುತ್ತಿದ್ದಾರೆ.
ಒಂದುವೇಳೆ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವ ಮುನ್ನ, ಕೊರೊನಾ ಅವಧಿಯ 18 ತಿಂಗಳ ಡಿಎ ಬಾಕಿಯನ್ನು ಸರ್ಕಾರಿ ನೌಕರರಿಗೆ ನೀಡಿದರೆ, ಉನ್ನತ ಹುದ್ದೆಯಲ್ಲಿರುವ ನೌಕರರ ಖಾತೆಗೆ ಸುಮಾರು 2 ಲಕ್ಷ 18 ಸಾವಿರ ರೂ. ಜಮಾ ಆಗಬಹುದು. ಇದರಿಂದ ಉದ್ಯೋಗಿಗಳಿಗೆ ಭಾರೀ ಲಾಭವಾಗಲಿದೆ.
ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರಿ ನೌಕರರ ಬೆಂಬಲವನ್ನು ಪಡೆಯಲು ಸರ್ಕಾರವು ಅವರ ಬಹುಕಾಲದ ಬೇಡಿಕೆಗಳಾದ ಡಿಎ ಬಾಕಿ ಮೊತ್ತ, ಫಿಟ್‌ಮೆಂಟ್ ಅಂಶವನ್ನು ಈಡೇರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಹೊಸ ವರ್ಷಕ್ಕೂ ಮುನ್ನ ಸರ್ಕಾರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೆಕ್ಕಾಚಾರ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಫಿಟ್‌ಮೆಂಟ್ ಅಂಶವು 2.60 ರಿಂದ 3.0 ಪಟ್ಟು ಹೆಚ್ಚಾಗಬಹುದು ಎಂದು ಸೂಚಿಸುತ್ತದೆ. ಫಿಟ್‌ಮೆಂಟ್ ಅಂಶದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಮಾಧ್ಯಮ ವರದಿಗಳು ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎಂದು ಸೂಚಿಸುತ್ತದೆ.
ಇದನ್ನೂ ಓದಿ: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾದ ಕರಾವಳಿ ‘ಪುತ್ತಿಲ’ ಪಡೆ – ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ !!