Bengaluru: ಡಿಸಿಪಿ ಕಚೇರಿ ಮುಂದೆಯೇ ಯುವತಿಗೆ ಲೈಂಗಿಕ ದೌರ್ಜನ್ಯ, ಬಟ್ಟೆ ಹಿಡಿದು ಎಳೆದಾಡಿದ ಕಾಮುಕ !!

Bengaluru news sexual harrasment of young woman in front of DCP office at jayanagar

Share the Article

Bengaluru: ಡಿಸಿಪಿ ಕಚೇರಿ ಎದುರಲ್ಲೇ ಯುವತಿಯೋರ್ವಳ ಮೇಲೆ ದೌರ್ಜನ್ಯ ನಡೆದಿದ್ದು, ಆಕೆಯ ಬಟ್ಟೆಯನ್ನು ಕಾಮುಕನೊಬ್ಬ ಹಿಡಿದು ಎಳೆದಾಡಿದ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ(Bengaluru) ನಡೆದಿದೆ.

ಹೌದು, ನವೆಂಬರ್ 6ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗವೇ ಕಾಮುಕರು ಯುವತಿಯನ್ನು ಅಡ್ಡಗಟ್ಟಿ ಬಟ್ಟೆ ಹಿಡಿದು ಎಳೆದಾಡಿ ಕಿರುಕುಳ ನೀಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು ಕಾಮುಕರಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

ಅಂದಹಾಗೆ ಸಂತ್ರಸ್ತ ಯುವತಿಯು ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಕಾಮುಕನೋರ್ವ ಬೈಕ್‌ನಲ್ಲಿ ಯುವತಿಯ ಹಿಂದೆ ಫಾಲೋ ಮಾಡಿಕೊಂಡು ಬಂದಿದ್ದಾನೆ. ಆಗ ದಕ್ಷಿಣ ವಿಭಾಗ ಡಿಸಿಪಿ ಕಚೇರಿ ಮುಂಭಾಗದಲ್ಲಿ ತೆರಳುತ್ತಿದ್ದ ಆ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಕೆಟ್ಟದಾಗಿ ನಿಂದನೆ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಯುವತಿಯು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಇದನ್ನೂ ಓದಿ: Dani Dabello: ನೀಲಿ ಚಿತ್ರ ಚಿತ್ರೀಕರಣ ವೇಳೆ ನಟನ ಜನನಾಂಗವನ್ನೇ ಕಚ್ಚಿದ ನಟಿಯ ಸಾಕು ಹಾವು !!

Leave A Reply