Kitchen Tips: ದೀಪಾವಳಿಗೆ ಅಡುಗೆ ಮನೆಯೂ ಹೊಳೆಯಬೇಕಾ ?! ಅಡುಗೆ ಸೋಡಾವನ್ನು ಹೀಗೆ ಬಳಸಿದರೆ ಸಾಕು, ಎಲ್ಲಾ ಫಳ, ಫಳ !!

Deepavali 2023 Kitchen Cleaning Tips in kannada these tips make your kitchen shine

 

Kitchen cleaning tips: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್( Kitchen Cleaning tips)ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !! ದೀಪಾವಳಿ ಹಬ್ಬದ (Deepavali)ಸಂಭ್ರಮದ ನಡುವೆ ಇಡೀ ಮನೆಯನ್ನು ಫಳ ಫಳ ಹೊಳೆಯುವಂತೆ ಮಾಡ್ಬೇಕು ಎಂದು ಹೆಚ್ಚಿನ ಹೆಂಗೆಳೆಯರು ಅಂದುಕೊಳ್ಳುತ್ತಾರೆ. ಅಡುಗೆ ಮನೆಯನ್ನೂ(Kitchen)ಸ್ವಚ್ಚ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಹಬ್ಬದ ಸಮಯದಲ್ಲಿ ಇನ್ನೂ ಹೆಚ್ಚು ಕಷ್ಟವಾಗುವುದು ಸುಳ್ಳಲ್ಲ. ದೀಪಾವಳಿಗೆ ಅಡುಗೆ ಮನೆಯೂ(Kitchen Tips) ಹೊಳೆಯಬೇಕಾ ?! ಅಡುಗೆ ಸೋಡಾವನ್ನು (Cleaning tips)ಹೀಗೆ ಬಳಸಿದರೆ ಸಾಕು, ಎಲ್ಲಾ ಫಳ, ಫಳ ಅಂತ ಹೊಳೆಯಲಿದೆ.

* ಸ್ಟೀಲ್‌ ಸಿಂಕ್‌ ಹೊಳೆಯುವಂತೆ ಮಾಡಲು ಬಳಸಿ ಅಡುಗೆ ಸೋಡಾ ಮತ್ತು ಲಿಂಬು
ಅಡುಗೆಮನೆಯ ಸ್ಟೀಲ್‌ ಸಿಂಕ್‌ ನೀರಿನ ಕಲೆಗಳಿಂದ ಕೂಡಿದ್ದರೆ ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ಲಿಂಬು ಬಳಸಿ ನೋಡಿ!! ಅಡುಗೆ ಸೋಡಾ ಮತ್ತು ಲಿಂಬು ರಸ ಬೆರೆಸಿ ಮಿಶ್ರಣ ಸಿದ್ದಪಡಿಸಿ ಅದನ್ನು ಪೂರ್ತಿ ಸಿಂಕ್‌ ಮತ್ತು ಮೇಲಿನ ಗೋಡೆಗೆ ಸಿಂಪಡಿಸಿಕೊಳ್ಳಿ. ಇದಾದ 15 ನಿಮಿಷಗಳ ಬಳಿಕ ಸ್ಕ್ರಬ್‌ಗೆ ಸ್ವಲ್ಪ ಲಿಂಬು ರಸ ಹಾಕಿಕೊಂಡು ಉಜ್ಜಿ ನೀರಿನಿಂದ ತೊಳೆದು ಒಣಗಿಸಬೇಕು.

* ಕಪಾಟುಗಳ ಸ್ವಚ್ಛತೆ
ಅಡುಗೆ ಮನೆಯಲ್ಲಿ ಪಾತ್ರೆ ಬೇಕೆ ಬೇಕು. ಅದನ್ನು ಜೋಡಿಸಲು ಡಬ್ಬಗಳನ್ನಿಡುವ ಕಪಾಟು ಬಳಕೆ ಮಾಡುವುದು ಸಹಜ. ಈ ಕಪಾಟು ಧೂಳಿನಿಂದ ಕೂಡಿದ್ದರೆ, ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಳಕೆ ಮಾಡಿ. ಮೊದಲು ಅಡುಗೆ ಸೋಡಾವನ್ನು ಕಪಾಟಿನ ಸುತ್ತ ಸಿಂಪಡಿಸಿಕೊಂಡು 15 ನಿಮಿಷ ಬಿಟ್ಟು, ಒದ್ದೆ ಬಟ್ಟೆಯಿಂದ ಒರೆಸಿದರೆ ಕಪಾಟು ಸ್ವಚ್ಚವಾಗುತ್ತದೆ.

* ಡ್ರೈನ್‌ ಸ್ವಚ್ಛಗೊಳಿಸುವುದು ಹೇಗೆ
ಸಿಂಕ್‌ ಸ್ವಚ್ಛಗೊಳಿಸಿದ ಬಳಿಕ ಡ್ರೈನ್‌ ಅನ್ನು ಸ್ವಚ್ಛ ಮಾಡಬೇಕಾಗುತ್ತದೆ. ಡ್ರೈನ್‌ ತೆರೆದು ಅದಕ್ಕೆ 2 ಚಮಚ ಅಡುಗೆ ಸೋಡಾ ಹಾಕಿಕೊಂಡು 10 ನಿಮಿಷಗಳ ನಂತರ ಬಿಸಿ ನೀರು ಹಾಕಿದರೆ ಡ್ರೈನ್‌ ನಲ್ಲಿರುವ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಇದರ ಜೊತೆಗೆ ಕೆಟ್ಟ ವಾಸನೆಯನ್ನೂ ಕೂಡ ಹೋಗಲಾಡಿಸುತ್ತದೆ. ಇದಾದ ಬಳಿಕ ನೀರಿನಿಂದ ಸ್ವಚ್ಚಗೊಳಿಸಿ.

* ಎಣ್ಣೆ ಜಿಡ್ಡು ತೆಗೆಯಲು ಬಳಸಿ ಅಡುಗೆ ಸೋಡಾ ಮತ್ತು ವಿನೇಗರ್
ಸ್ಟೌವ್‌, ಟೈಲ್ಸ್‌ ಮತ್ತು ಕಪಾಟಿನ ಕೆಳಭಾಗದಲ್ಲಿ ಹೆಚ್ಚಾಗಿ ಕಾಣಿಸುವ ಎಣ್ಣೆ ಜಿಡ್ಡಿನ ಕಲೆಯನ್ನು ತೊಡೆದು ಹಾಕಲು ಒದ್ದೆ ಬಟ್ಟೆಯಲ್ಲಿ ಉಜ್ಜುವ ಬದಲಿಗೆ ಅಡುಗೆ ಸೋಡಾ ಸಿಂಪಡಿಸಿಕೊಂಡು ಅರ್ಧ ಗಂಟೆಯ ನಂತರ ಬಿಸಿಮಾಡಿದ ವಿನೇಗರ್‌ ಹಾಕಿ ಇಲ್ಲವೇ, ಅಡುಗೆ ಸೋಡಾ ಮತ್ತು ವಿನೇಗರ್‌ ಸೇರಿಸಿ ದ್ರಾವಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಲೆ ಇರುವ ಜಾಗದ ಮೇಲೆ ಸ್ಪ್ರೇಯರ್‌ ಮೂಲಕ ಸಿಂಪಡಿಸಿ, ಸ್ವಲ್ಪ ಸಮಯದ ಬಳಿಕ ಸ್ಕ್ರಬ್‌ನಿಂದ ಉಜ್ಜಿ, ಒದ್ದೆ ಬಟ್ಟೆಯಿಂದ ಒರೆಸಿದರೆ ಎಣ್ಣೆ ಜಿಡ್ಡಿನ ಕಲೆ ಮಾಯವಾಗುತ್ತದೆ.

ಇದನ್ನೂ ಓದಿ: ಜಸ್ಟ್ 7ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು- ಇಲ್ಲಿ ಕೈ ಬೀಸಿ ಕರೆಯುತ್ತಿದೆ ಸರ್ಕಾರಿ ಜಾಬ್ !!

Leave A Reply

Your email address will not be published.