State Government Scheme: ದೇಶಾದ್ಯಂತ ಎಲ್ಲಾ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ರೂ – ತಕ್ಷಣ ಹೀಗೆ ಅರ್ಜಿ ಹಾಕಿ
State Government Scheme: ಬಿಜೆಪಿ ಸರ್ಕಾರ (BJP government) ತನ್ನ ಆಡಳಿತ ಅವಧಿಯಲ್ಲಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು (former CM Yeddyurappa) ಅಧಿಕಾರದಲ್ಲಿ ಇರುವಾಗ, 2006ರಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಆರಂಭಿಸಿದ್ದರು. ಲಕ್ಷಾಂತರ ಜನ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಮೊದಲಿಗೆ ಅರ್ಜಿ ಸಲ್ಲಿಸಿದವರಿಗೆ ಭಾಗ್ಯಲಕ್ಷ್ಮಿ ಬಾಂಡ್ ನ ಹಣ ಬಿಡುಗಡೆಯಾಗಲಿದೆ. 2006ರಲ್ಲಿ ಅರ್ಜಿ ಸಲ್ಲಿಸಿದವರಿಗೆ 2024 ಮಾರ್ಚ್ ತಿಂಗಳಿನಲ್ಲಿ 18 ವರ್ಷಗಳು ಮುಗಿಯಲಿದ್ದು ಭಾಗ್ಯಲಕ್ಷ್ಮಿ ಬಾಂಡ್ ನ ಹಣ ಸಿಗಲಿದೆ.
ಹೌದು, ಯಡಿಯೂರಪ್ಪ ಆಳ್ವಿಕೆಯ ಬಿಜೆಪಿ ಸರ್ಕಾರ (BJP government) ತನ್ನ ಆಡಳಿತ ಅವಧಿಯಲ್ಲಿ ಮನೆಯಲ್ಲಿ ಹುಟ್ಟಿದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಅವರ 18 ವರ್ಷ ವಯಸ್ಸಿಗೆ ಬಂದಾಗ ಒಂದು ಲಕ್ಷ ರೂಪಾಯಿ ಸಿಗುವಂತಹ ಯೋಜನೆಯನ್ನು (State Government Scheme) ಆರಂಭಿಸಿತು, ಈಗ ಆ ಹಣ ಸಿಗುವ ಸಮಯ ಬಂದಿದೆ.
ಮುಖ್ಯವಾಗಿ ಭಾಗ್ಯಲಕ್ಷ್ಮಿ ಬಾಂಡ್ ಒಂದು ಕುಟುಂಬದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಸಿಗಲಿದೆ. 2008 ಜುಲೈ ತಿಂಗಳಿನ ಒಳಗೆ ಜನಿಸಿದ ಹೆಣ್ಣು ಮಗುವಿಗೆ ಭಾಗ್ಯ ಲಕ್ಷ್ಮಿ ಬಾಂಡ್ ಮಾಡಿಸಿದ್ದ ಸಮಯದಲ್ಲಿ ಆ ಹೆಣ್ಣು ಮಗುವಿನ ಹೆಸರಿನಲ್ಲಿ 10,000ಗಳನ್ನು ಸರ್ಕಾರ ಎಫ್ ಡಿ (Fixed Deposit) ಇಟ್ಟಿರುತ್ತದೆ.
ಮುಖ್ಯವಾಗಿ ಎಲ್ ಐ ಸಿ ಸಹಯೋಗದೊಂದಿಗೆ ಸರ್ಕಾರ ಈ ಬಾಂಡ್ ಆರಂಭಿಸಿತ್ತು. 2024 ಮಾರ್ಚ್ ತಿಂಗಳಿನಲ್ಲಿ 18 ವರ್ಷ ತುಂಬಿರುವ ಹೆಣ್ಣು ಮಗುವಿಗೆ 34,751 (ಮೊದಲ ಮಗುವಿಗೆ) ಸಿಗಲಿದೆ. ಇನ್ನು ಎರಡನೇ ಮಗುವಿಗೆ 40,619 ರೂಪಾಯಿ ಸಿಗಲಿದೆ.
2008 ಆಗಸ್ಟ್ ತಿಂಗಳಿನ ನಂತರ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದ್ದರೆ, ಮೊದಲ ಮಗುವಿಗೆ 19,300 ರೂ. Fixed Deposit ಹಣವನ್ನು ಸರ್ಕಾರ ಮೀಸಲಿಟ್ಟಿದೆ. ಈ ಸಮಯದಲ್ಲಿ ಬಾಂಡ್ ಮಾಡಿಸಿದ ಮೊದಲ ಮಗುವಿಗೆ 1,00,051 ರೂಪಾಯಿಗಳು ಸಿಗಲಿದೆ. ಎರಡನೇ ಮಗುವಿಗೆ 18.350 ರೂಪಾಯಿಗಳ ಎಫ್ ಡಿ ಸರ್ಕಾರ ಮೀಸಲಿಟ್ಟಿದೆ. ಇವರಿಗೆ 1,00,097 ರೂಪಾಯಿಗಳು ಸಿಗಲಿದೆ. ಇಷ್ಟು ಮೊತ್ತವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಮಾರ್ಚ್ 2024ರಲ್ಲಿ ವರ್ಗಾವಣೆ ಮಾಡಲಾಗುವುದು.
ಪ್ರಸ್ತುತ ಭಾಗ್ಯಲಕ್ಷ್ಮಿ ಬಾಂಡ್ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi Yojana) ಯಲ್ಲಿ ವಿಲೀನಗೊಳಿಸಲಾಗಿದೆ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣವೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಬಹುದು.
21 ವರ್ಷ ವಯಸ್ಸಿಗೆ ಬಂದಿರುವ ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಹಣ ಸಿಗುತ್ತದೆ. ಬಡತನ ರೇಖೆಗಿಂತ ಕೆಳಗಿನವರು (below poverty line) ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಪ್ರತಿ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪೋಸ್ಟ್ ಆಫೀಸ್ ನಲ್ಲಿ ಸಹ ಈ ಯೋಜನೆಯನ್ನು ಆರಂಭಿಸಬಹುದು.
“State Government Scheme: ದೇಶಾದ್ಯಂತ ಎಲ್ಲಾ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ರೂ – ತಕ್ಷಣ ಹೀಗೆ ಅರ್ಜಿ ಹಾಕಿ” ಈ ಟೈಟಲ್ಗೂ ಇದರಲ್ಲಿ ವಿವರಿಸಿದ ವಿಷಯಕ್ಕೂ ಏನಾದರೂ ಸಂಬಂಧ ಇದ್ಯಾ.? ಇದುವರೆಗೂ ಇದು ಯಾರಿಗೂ ಗೊತ್ತಿರಲಿಲ್ಲ ಅಲ್ವ.? ಪಾಪ..