CS shadakshari transfer: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ವಿಚಾರ- ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು

Karnataka news Minister Madhu bangarappa statement about CS shadakshari transfer

Share the Article

CS shadakshari transfer: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ವಿರುದ್ಧದ ಪ್ರಕರಣವನ್ನು ಅವರನ್ನು ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಿರುವುದರ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಒತ್ತಡವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhubangarappa) ಮೌನ ಮುರಿದಿದ್ದಾರೆ.

ಹೌದು, ಕೆರೆಯಿಂದ ಅಕ್ರಮವಾಗಿ ಹೂಳನ್ನು ಸಾಗಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ವರ್ಗಾವಣೆ(CS shadakshari transfer) ಕುರಿತು ಮಧು ಬಂಗಾರಪ್ಪನವರು ಪ್ರತಿಕ್ರಿಯಿಸಿದ್ದು, ಇದು ಸರ್ಕಾರದ ತೀರ್ಮಾನ ಎಂದು ಹೇಳಿದ್ದಾರೆ.

ಅಂದಹಾಗೆ ಶಿವಮೊಗ್ಗದಲ್ಲಿ ಮಾದ್ಯಮವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು .ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಅವರ ವರ್ಗಾವಣೆ ಸರಕಾರದ ತೀರ್ಮಾನ. ಸರಕಾರದಲ್ಲಿ ವರ್ಗಾವಣೆ ಮಾಡಿದ್ದಾರೆ ನಾನು ಸರಕಾರದಲ್ಲಿ ಇದ್ದೇನೆ ಇಲ್ಲ ಅಂತಾ ಹೇಳಕ್ಕೆ ಆಗುತ್ತಾದ? ಅದೇನು ದೊಡ್ಡ ವಿಷಯ ಏನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Supreme court: ದೇಶದ ಎಲ್ಲಾ MP, MLAಗಳಿಗೆ ನಡುಕ ಹುಟ್ಟಿಸಿದ ಸುಪ್ರೀಂ ಕೋರ್ಟ್- ಬಂತು ನೋಡಿ ಹೊಸ ಆದೇಶ

Leave A Reply