Hasanamba temple: ಹಾಸನಾಂಬ ದೇವಾಲಯದಲ್ಲಿ ನಡೆದೇಹೋಯ್ತು ಮಹಾನ್ ಪವಾಡ – ಹಾಸನಕ್ಕೆ ದೌಡಾಯಿಸುತ್ತಿದೆ ಭಕ್ತರ ದಂಡು !!
Hasanamba temple: ಹಾಸನದ ಹಾಸನಾಂಬ ದೇವಾಲಯದ ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ಗೊತ್ತೇ ಇದೆ. ವರುಷಕ್ಕೊಮ್ಮೆ ಮಾತ್ರ ದೀಪಾವಳಿ ಸಮಯದಲ್ಲಿ ತಾಯಿಯು ನಾಡಿನ ಜನತೆಗೆ ದರ್ಶನ ನೀಡುತ್ತಾಳೆ. ಅಲ್ಲದೆ ಇಲ್ಲಿನ ದೀಪದ ಪವಾಡದ ಕುರಿತೂ ಎಲ್ಲರಿಗೂ ತಿಳಿದಿದೆ. ಅಂತೆಯೇ ಇದೀಗ ದೀಪಾವಳಿ ಸಮಯದಲ್ಲಿ ತಾಯಿ ಎಲ್ಲರಿಗೂ ದರ್ಶನ ನೀಡುತ್ತಿದ್ದಾಳೆ. ಈ ವೇಳೆ ನಿನ್ನೆ ದಿನ ಅಮ್ಮನವರ ಸನ್ನಿಧಿಯಲ್ಲಿ ಮಹಾನ್ ಪವಾಡವೊಂದು ನಡೆದುಹೋಗಿದೆ.
ಹೌದು, ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬ(Hasanamba temple )ತಾಯಿಯನ್ನು ಕಂಡು, ಅಮ್ಮನವರ ಕೃಪೆಗೆ ಪಾತ್ರರಾಗಲು ನಾಡಿನ ಮೂಲೆ ಮೂಲೆಯಿಂದ ಜನ ಹಾಸನಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಹಾಸನಾಂಬ ಸನ್ನಿದಿಯಲ್ಲಿ ಮಹಾನ್ ಪವಾಡವೊಂದು ನಡೆದಿದೆ. ಏನೆಂದರೆ ಪೂಜೆಯ ವೇಳೆ ಮಳೆರಾಯನ ಆರ್ಭಟ ಜೋರಾಗಿತ್ತು. ಅಂದರೆ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಆದರೆ ಅಂತಹ ಮಹಾನ್ ಮಳೆಯಲ್ಲೂ ಹೊರಗೆ ಹಚ್ಚಿದ ಕರ್ಪೂರ ಆರದೆ ಉರಿಯುತ್ತಿತ್ತು. ಎಂತಾ ಗಾಳಿಗೂ, ಮಳೆಗೂ ಕೂಡ ಅದು ಆರಲಿಲ್ಲ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಅಂದಹಾಗೆ ಒಬ್ಬರು ಭಕ್ತರು ಕರ್ಪೂರವನ್ನು ಹಚ್ಚಿದ್ದು ಅದೇ ಸಮಯಕ್ಕೆ ಮಳೆಯ ಶುರುವಾಗಿದೆ. ಅದು ಸಾಧಾರಣ ಮಳೆ ಅಲ್ಲ. ಜೋರಾಗಿ ಸುರಿದಿದೆ. ಆದರೂ ಆ ಮಳೆಯಲ್ಲಿ ಆ ಕರ್ಪೂರದ ಬೆಂಕಿ ಆರಿಲ್ಲ. ಮೊದಲಿಂದಲೂ ಕೊನೇವರೆಗೂ ಹಾಗೇ ಪ್ರಜ್ವಲಿಸಿದೆ. ಇದನ್ನು ಕಂಡು ಭಕ್ತರೆಲ್ಲರೂ ದಂಗಾಗಿಹೋಗಿದ್ದಾರೆ. ಅಮ್ಮನವರ ಪವಾಡ, ತಾಯಿಯ ಕೃಪೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ ವೈರಲ್ ಆಗಿದೆ.
ಇದನ್ನು ಓದಿ: Hasanamba temple: ಹಾಸನಾಂಬ ದೇವಾಲಯದಲ್ಲಿ ನಡೆದೇಹೋಯ್ತು ಮಹಾನ್ ಪವಾಡ – ಹಾಸನಕ್ಕೆ ದೌಡಾಯಿಸುತ್ತಿದೆ ಭಕ್ತರ ದಂಡು !!