RBI New Rule: ಸಹಕಾರಿ ಸಂಘಗಳಿಗೆ ಬಂತು ಹೊಸ ರೂಲ್ಸ್- RBI ನಿಂದ ಖಡಕ್ ವಾರ್ನಿಂಗ್

Business news RBI new rule cooperative societies can't use Bank in their name

RBI New Rule: ಸಹಕಾರಿ ಸಂಘಗಳು ಇನ್ನು ಮುಂದೆ ‘ಬ್ಯಾಂಕ್’ ಎಂಬ ಹೆಸರನ್ನು ಬಳಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಆದೇಶವನ್ನು (RBI New Rule) ಹೊರಡಿಸಿದೆ.

ಹೌದು, ಸಂಘಗಳು ಬ್ಯಾಂಕ್ ಹೆಸರನ್ನು ಬಳಸಬಾರದು ಎಂದು ಆರ್‌ಬಿಐ ಪತ್ರಿಕೆಯ ಜಾಹೀರಾತಿನ ಮೂಲಕ ಸ್ಪಷ್ಟಪಡಿಸಿದ್ದು, ಇದು ರಾಜ್ಯದ 1625 ಸಹಕಾರಿ ಸಂಘಗಳಿಗೆ ಅನ್ವಯಿಸುತ್ತದೆ. ಆರ್‌ಬಿಐ ಈ ಹಿಂದೆಯೂ ಇದೇ ರೀತಿಯ ಸೂಚನೆಗಳನ್ನು ನೀಡಿತ್ತು. ಆದರೆ ಸಂಘಗಳು ಈ ಬಗ್ಗೆ ಗಮನ ನೀಡಲಿಲ್ಲ. ಇದೀಗ RBI ಮತ್ತೊಮ್ಮೆ ವಾರ್ನಿಂಗ್ ನೀಡಿದೆ.

ಅಂದಹಾಗೆ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯಿದೆಯ ಪ್ರಕಾರ, ಸಹಕಾರ ಸಂಘಗಳು ತಮ್ಮ ಹೆಸರಿನಲ್ಲಿ ‘ಬ್ಯಾಂಕ್’, ‘ಬ್ಯಾಂಕರ್’ ಮತ್ತು ‘ಬ್ಯಾಂಕಿಂಗ್’ ಪದಗಳನ್ನು ಬಳಸಬಾರದು. ಆದರೂ ಕೂಡ ಕೆಲವು ಸಂಘಗಳು ಈ ಕಾಯಿದೆಯನ್ನು ಉಲ್ಲಂಘಿಸಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಎಂಬ ಪದವನ್ನು ಬಳಸುತ್ತಿರುವುದನ್ನು ಆರ್‌ಬಿಐ ಗಮನಿಸಿದೆ. ಅಲ್ಲದೆ ಆರ್‌ಬಿಐನ ಜಾಹೀರಾತಿನಲ್ಲಿ ಸಹಕಾರಿ ಸಂಘಗಳಲ್ಲಿನ ಹೂಡಿಕೆಗೆ ಯಾವುದೇ ರಕ್ಷಣೆ ಇಲ್ಲ ಎಂಬುದನ್ನೂ ಒತ್ತಿ ಹೇಳಿದೆ.

ಇದನ್ನೂ ಓದಿ: Krishi bhagya: ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ – ಮತ್ತೆ ಪ್ರಾರಂಭವಾಗ್ತಿದೆ ‘ಕೃಷಿ ಭಾಗ್ಯ’ ಯೋಜನೆ

Leave A Reply

Your email address will not be published.