Karnataka Congress: ಕಾಂಗ್ರೆಸ್ ನಿಂದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!!

Karnataka politics news List of Lok Sabha polls candidates released by Congress

Share the Article

Karnataka Congress: ಮುಂಬರುವ ಲೋಕಸಭಾ ಚುನಾವಣೆಯ ಕಾವು ದೇಶಾದ್ಯಂತ ರಂಗೇರುತ್ತಿದೆ. ಪಕ್ಷಗಳೆಲ್ಲವೂ ಈಗಿಂದಲೇ ತಯಾರಿ ನಡೆಸುತ್ತಿವೆ. ಅಭ್ಯರ್ಥಿಗಳ ಆಯ್ಕೆ ಕೂಡ ತೆರೆ ಮರೆಯಲ್ಲಿ ನಡೆಯುತ್ತಿದ್ದು ಹಲವು ಲಾಭಿಗಳು ನಡೆಯುತ್ತಿವೆ. ಈ ನಡುವೆ ಕರ್ನಾಟಕ ಕಾಂಗ್ರೆಸ್(Karnataka Congress) ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಕುರಿತು ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.

ಹೌದು, ಲೋಕಸಭಾ ಚುನಾವಣೆಯ(Parliament election) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬರುವ ಜನವರಿ 2ನೇ ವಾರದಂದು ಬಿಡುಗಡೆ ಮಾಡಲಾಗುವುದು, ಅಭ್ಯರ್ಥಿಗಳು ಯಾರೆಂದು ಅಂದೇ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದ್ದಾರೆ.

ಅಲ್ಲದೆ ಮುಂದಿನ ವಾರ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಸಚಿವರು ಹಾಗೂ ಶಾಸಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಕೆಮಾಡಲಿದ್ದಾರೆ. ಈ ಎಲ್ಲಾ ಪ್ರಕ್ರಿಯಗಳನ್ನು ಮುಗಿಸಿ, ಸೂಕ್ತ ಅಭ್ಯರ್ಥಿಯನ್ನು ಆರಿಸಿ ಜನವರಿ 2ನೇ ವಾರ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengalure : ಬೆಂಗಳೂರು ರೌಡಿಶೀಟರ್ ನನ್ನು ಭೀಕರವಾಗಿ ಕೊಚ್ಚಿ ಕೊಂದ 6 ಮಂದಿ ದುಷ್ಕರ್ಮಿಗಳು !!

Leave A Reply