Gruhalakshmi scheme: ಯಜಮಾನಿಯರೇ ‘ಗೃಹಲಕ್ಷ್ಮೀ’ ಹಣ ಬಂದಿಲ್ಲ ಅಂದ್ರೆ ಈ ನಂಬರ್ ಗೆ ಕರೆ ಮಾಡಿ !!
Karnataka news if you not received the money from gruhalakshmi then call this phone number
Gruhalakshmi money: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ(Gruhalakshmi Scheme money) 2,000 ಹಣವನ್ನು ರಾಜ್ಯದ ಯಜಮಾನಿಯರಿಗೆ ನೀಡಲಾಗುತ್ತಿದ್ದು, ಇನ್ನೂ ಸಾವಿರಾರು ಮಹಿಳೆಯರಿಗೆ ಯಾವುದೇ ಕಂತಿನ ಹಣ ಜಮೆಯಾಗಿಲ್ಲ. ಇನ್ಮುಂದೆ ಇದಕ್ಕೆ ಚಿಂತೆಪಡಬೇಕಿಲ್ಲ. ಯಾಕೆಂದರೆ ಈ ನಂಬರಿಗೆ ಕರೆ ಮಾಡಿದ್ರೆ ಸಾಕು, ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ !!
ಹೌದು, ಸಾವಿರಾರು ಮಹಿಳೆಯರ ಖಾತೆಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿ ಕೊಡ ಮಾಡುವ ಎರಡು ಸಾವಿರ ಹಣ ಜಮಾ ಆಗಿಲ್ಲ. ಈ ಕುರಿತು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹಾಗೆ ಮಾಡಿ, ಇದೊಂದು ಕೆಲಸ ಮಾಡಿ, ಜಸ್ಟ್ ಹೀಗೆ ಹಣ ಬರುತ್ತದೆ ಎಂಬ ವರದಿಗಳನ್ನು ನೋಡಿ ನೋಡಿ ಮಹಿಳೆಯರಿಗೆ ಸಾಕಾಗಿ ಹೋಗಿದೆ. ಕೊನೆಗೂ ಇದೆಲ್ಲವನ್ನು ನೋಡಿ ತಾಳ್ಮೆ ಕಳೆದುಕೊಂಡ ಯಜಮಾನಿಯರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆದರೀಗ ಸರ್ಕಾರದಿಂದ ಈ ಗೃಹಲಕ್ಷ್ಮೀಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು 2,000 ಹಣ ಬರದಿದ್ದರೆ 1906 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಆ ಕೂಡಲೇ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಇಷ್ಟೇ ಅಲ್ಲದೆ ಇದರೊಂದಿಗೆ ಇನ್ನೊಂದು ಗುಡ್ ನ್ಯೂಸ್ ಸಿಕ್ಕಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳಕಲ ಹೆಬ್ಬಾಳ್ಕರ್ ಅವರು ಇನ್ನು ಮುಂದೆ ಪ್ರತಿ ತಿಂಗಳ 15ನೇ ತಾರೀಖಿನ ಒಳಗಡೆ ಎಲ್ಲಾ ಯಜಮಾನಿಯರ ಖಾತೆಗೆ ಗೃಹಲಕ್ಷ್ಮಿಯ 2000 ಹಣ ಬಂದು ತಲುಪಲಿದೆ ಎಂದು ಸುದ್ದಿಗೋಷ್ಠಿಯನ್ನು ನಡೆಸಿ ಹೇಳಿದ್ದಾರೆ.
ಇದನ್ನೂ ಓದಿ: New pension scheme: ಕೇಂದ್ರದ ಈ ಯೋಜನೆಗೆ ಕುಳಿತಲ್ಲೇ ಅರ್ಜಿ ಹಾಕಿ – ಸಂಬಳದಂತೆ ಪ್ರತೀ ತಿಂಗಳು ಪಡೆಯಿರಿ 36,000 ಪೆನ್ಶನ್ !!