White hair: ತಲೆಯ ಒಂದು ಬಿಳಿ ಕೂದಲನ್ನು ಕಿತ್ತರೆ ಅಕ್ಕ ಪಕ್ಕದ ಕೂದಲೆಲ್ಲಾ ಬಿಳಿ ಆಗುತ್ತಾ ?!

If you cut one white hair on your head will all the adjacent hairs turn white

White hair: ಆರೋಗ್ಯದ ವಿಚಾರವಾಗಿ ಹಲವರು ಹಲವು ತರದ ಸಲಹೆಗಳನ್ನು ನೀಡುತ್ತಾರೆ. ಹಾಗಂತ ಹೇಳಿ ನಾವು ಅವರು ಹೇಳಿದ್ದನೆಲ್ಲ ಪ್ರಯೋಗಿಸಲು, ರೂಢಿಗತಗೊಳಿಸಲು ಆಗುವುದಿಲ್ಲ. ಯಾಕೆಂದರೆ ಅದ್ಯಾವುದೂ ವೈಜ್ಞಾನಿಕವಾಗಿ ಪ್ರೂವ್ ಆಗಿರೋದಿಲ್ಲ.

 

ಅಂತೆಯೇ ಇಂತಹ ಅನೇಕ ಬಿಟ್ಟಿ ಸಲಹೆ, ಟಿಪ್ಸ್ ಗಳ ಪೈಕಿ ತಲೆ ಕೂದಲಿನ ವಿಚಾರವೂ ಒಂದು. ಏನೆಂದರೆ ಕೂದಲು ಬಿಳಿ ಆದರೆ ಸಾಕು, ಕಪ್ಪಾಗಿಸಲು ಹಾಗೆ ಮಾಡು, ಹೀಗೆ ಮಾಡು, ಅದನ್ನು ತಿನ್ನು, ಇದನ್ನು ಹಚ್ಟು ಎಂದು ಹೇಳುವವರು ಅನೇಕ ಮಂದಿ. ಇದು ಒಂದ ಕಡೆಯಾದರೆ ಇನ್ನೊಂದು ವಿಚಾರವುಂಟು. ಆದೇನೆಂದರೆ ತಲೆಯಲ್ಲಿ ಅಪರೂಪಕ್ಕೆ ಒಂದು ಬಿಳಿ ಕೂದಲು(White hair) ಕಂಡರೆ ಅದನ್ನು ಕೀಳಬೇಡ, ತಲೆತುಂಬಾ ಬಿಳಿಕೂದಲೇ ಆಗುತ್ತೆ ಎಂದು. ಹೀಗೆ ಹೇಳಿ ಅನೇಕರು, ಅನೇಕರನ್ನು ಭಯಬೀಳಿಸಿದ್ದಾರೆ. ಹಾಗಿದ್ರೆ ಇದು ನಿಜವಾ? ಈ ಕುರಿತು ವಿಜ್ಞಾನ ಏನು ಹೇಳುತ್ತೆ?

ಬೀಳಿ ಕೂದಲು ಕಿತ್ತರೆ ಹೆಚ್ಚು ಬಿಳಿ ಕೂದಲು ಹುಟ್ಟುತ್ತವೆಯೇ?
ಒಂದು ಬಿಳಿ ಕೂದಲು ಮುರಿದರೆ ಅಥವಾ ಕಿತ್ತರೆ ಬಿಳಿ ಕೂದಲು ಬರುತ್ತದೆ. ಆದರೆ ಒಂದೇ ಒಂದು ಮಾತ್ರ. ಯಾಕೆಂದರೆ ಆ ಸ್ಥಳದಲ್ಲಿ ಒಂದು ಕಿರುಚೀಲದಿಂದ ಕೇವಲ ಒಂದು ಕೂದಲು ಮಾತ್ರ ಬರುತ್ತದೆ. ಸುತ್ತಮುತ್ತಲಿನ ಕೂದಲು ತಮ್ಮದೇ ಆದ ವರ್ಣದ್ರವ್ಯ ಕೋಶಗಳು ಸಾಯುವವರೆಗೂ ಬಿಳಿಯಾಗಿರುವುದಿಲ್ಲ. ಒಂದು ಬಿಳಿ ಕೂದಲು ತೆಗೆದರೆ ಹತ್ತಿರದ ಎಲ್ಲಾ ಕೂದಲು ಬಿಳಿಯಾಗೋದಿಲ್ಲ. ಇದು ವೈಜ್ಞಾನಿಕವಾಗಿ ನಿಜವಾಗಿದೆ. ಹಾಗಾಗಿ ನಿಶ್ಚಿಂತೆಯಿಂದಿರಿ.

 

ಇದನ್ನು ಓದಿ: Anna Suvidha Scheme: ‘ಅನ್ನಭಾಗ್ಯದ’ ಜೊತೆಗೇ ಬರ್ತಿದೆ ‘ಅನ್ನ ಸುವಿಧ ‘- ಇಂತವರಿಗಿನ್ನು ಮನೆ ಬಾಗಿಲಿಗೇ ರೇಷನ್, ಲಿಸ್ಟ್ ನಲ್ಲಿ ನಿಮ್ಮ ಕಾರ್ಡ್ ಉಂಟಾ ?!

Leave A Reply

Your email address will not be published.