

Professional Tax: ಸಂಬಳ ಪಡೆಯುವ ಪ್ರತಿ ಉದ್ಯೋಗಿ ಕೂಡ ತಮ್ಮ ಆದಾಯ ತೆರಿಗೆ ಉಳಿತಾಯ ಮಾಡುವತ್ತ ಗಮನ ಹರಿಸುತ್ತಾರೆ.ಆದಾಯ ತೆರಿಗೆ ರಿಟರ್ನ್ ಅನ್ನು ಸಮಯೋಚಿತವಾಗಿ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರರ ಹೊಣೆ ಇಲ್ಲವೇ ಜವಾಬ್ದಾರಿಯಾಗಿದೆೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ತಪ್ಪಿಸಿಕೊಂಡರೆ, ಸಮಸ್ಯೆಗಳು ಎದುರಾಗುವುದು ನಿಶ್ಚಿತ. ಅದೇ ರೀತಿ, ರಾಜ್ಯ ಸರಕಾರಗಳು ಆದಾಯದ ಮೂಲವಾಗಿ ವೃತ್ತಿಪರ ತೆರಿಗೆಯನ್ನು ವಿಧಿಸುತ್ತದೆ.
ವೃತ್ತಿಪರ ತೆರಿಗೆ ಸಂಗ್ರಹದಿಂದ ಬರುವ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗಲಿದೆ. ಆದರೆ ತೆರಿಗೆ ಕಾಯಿದೆ 1961 ರ ಪ್ರಕಾರ ಯಾವುದೇ ವ್ಯಕ್ತಿ ತನ್ನ ತೆರಿಗೆಗೆ ಒಳಪಡುವ ಆದಾಯದಿಂದ ವೃತ್ತಿಪರ ತೆರಿಗೆಯನ್ನು ಪಾವತಿಸಿದ್ದರೆ ಅದರಲ್ಲಿ ವಿನಾಯಿತಿಯನ್ನು ಪಡೆಯಲು ಅವಕಾಶವಿದೆ. ವ್ಯಾಪಾರ, ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಆದಾಯ ಗಳಿಸುವ ಪ್ರತಿಯೊಬ್ಬ ಸಂಬಳದಾರ ಮತ್ತು ಸ್ವಯಂ ಉದ್ಯೋಗಿಗಳು ವೃತ್ತಿಪರ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.
ವೃತ್ತಿಪರ ತೆರಿಗೆಯನ್ನು ಆಯಾ ರಾಜ್ಯಗಳೇ ವಿಧಿಸುತ್ತವೆ. ಕೆಲವೊಂದು ರಾಜ್ಯಗಳು ಸಂಬಳವಿರುವ ಹಾಗೂ ಸಂಬಳರಹಿತ ವ್ಯಕ್ತಿಗಳ ಮೇಲೆ ವೃತ್ತಿಪರ ತೆರಿಗೆ ವಿಧಿಸುವ (Professional Tax) ಮೂಲಕ ನಿಗದಿ ಮಾಡಿದ ಮೊತ್ತಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ನಿಮ್ಮ ಆದಾಯ (Income) ಎಷ್ಟೇ ಇದ್ದರೂ ಕೂಡ ಬಹುತೇಕ ಎಲ್ಲಾ ಆದಾಯ ಗಳಿಸುವವರು ಈ ತೆರಿಗೆಗೆ ಒಳಪಡುತ್ತಾರೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಉದ್ಯೋಗದಾತರು ವೃತ್ತಿಪರ ತೆರಿಗೆಯನ್ನು ಪಾವತಿಸುತ್ತಾರೆ. ಇದನ್ನು ಅವರು ಫಾರ್ಮ್ 16 ನಲ್ಲಿ ನಮೂದಿಸುತ್ತಾರೆ. ಉದ್ಯೋಗಿ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವ ಸಂದರ್ಭ ಕಡಿತವಾಗಿ ಕ್ಲೈಮ್ ಮಾಡಬಹುದಾಗಿದೆ. ಇನ್ನು ಸ್ವ ಉದ್ಯೋಗಿಗಳು ಪಾವತಿಸಿದ ವೃತ್ತಿಪರ ತೆರಿಗೆಯನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ವ್ಯಾಪಾರ ವೆಚ್ಚವಾಗಿ ಕಡಿತವಾಗಿ ಕ್ಲೈಮ್ ಮಾಡಿಕೊಳ್ಳಬಹುದು.
ವೃತ್ತಿಪರ ತೆರಿಗೆಯನ್ನು ಹೇಗೆ ಪಾವತಿಸುವುದು?
ಹೆಚ್ಚಿನ ರಾಜ್ಯಗಳಲ್ಲಿ ವೃತ್ತಿಪರ ತೆರಿಗೆ ಪಾವತಿಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ವೃತ್ತಿಪರ ತೆರಿಗೆಯನ್ನು ರಾಜ್ಯ ಸರ್ಕಾರದ ಪುರಸಭೆಗಳು ವಿಧಿಸುವ ಹಿನ್ನೆಲೆ ಪಾವತಿ ಪ್ರಕ್ರಿಯೆ ಮತ್ತು ನೋಂದಣಿ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ರಾಜ್ಯಗಳು ಮಾಸಿಕ ಆಧಾರದ ಮೇಲೆ ವೃತ್ತಿಪರ ತೆರಿಗೆಯನ್ನು ಪಾವತಿ ಮಾಡಲು ಸೂಚಿಸುತ್ತವೆ. ವೃತ್ತಿಪರ ತೆರಿಗೆಯನ್ನು ಪಾವತಿಸಲು ವೃತ್ತಿಪರ ತೆರಿಗೆ ದಾಖಲಾತಿ ಪ್ರಮಾಣಪತ್ರ (PTEC) ಅವಶ್ಯಕವಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಇದಲ್ಲದೆ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ಕೆಲವು ರಾಜ್ಯಗಳಲ್ಲಿ ವೃತ್ತಿಪರ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ತಿಂಗಳಿಗೆ ರೂ 10,000 ಗಳಿಸುವ ಮಹಿಳೆಯರಿಗೆ ಈ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ವೃತ್ತಿಪರ ತೆರಿಗೆಯನ್ನು ವಿಧಿಸುವ ಹಲವು ರಾಜ್ಯಗಳು ಕೆಲವು ವರ್ಗದ ಜನರಿಗೆ ವಿನಾಯಿತಿ ನೀಡುತ್ತವೆ. ಕೆಲವು ರಾಜ್ಯಗಳಲ್ಲಿ, ತಿಂಗಳಿಗೆ 4,166 ರೂ.ಗಿಂತ ಹೆಚ್ಚು ಆದಾಯ ಪಡೆಯುವ ಯಾವುದೇ ವ್ಯಕ್ತಿಯಾದರೂ ಕೂಡ ವೃತ್ತಿಪರ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಇತರ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಯು ತಿಂಗಳಿಗೆ 3 ಲಕ್ಷಕ್ಕಿಂತ ಹೆಚ್ಚು ಗಳಿಸಿದಾಗ ಮಾತ್ರ ಅವರು ಈ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.













