Ration Card: ರೇಷನ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ- ದೇಶಾದ್ಯಂತ ರೇಷನ್ ಪಡೆಯುವ ಬಗ್ಗೆ ಸಚಿವರಿಂದ ಬಂತು ಬಿಗ್ ಅಪ್ಡೇಟ್ !!
Karnataka news kh muniappa said ration card holders can get ration at any ration shop in the country
Ration Card: ರಾಜ್ಯದ ಪಡಿತರ ಚೀಟಿದಾರರು ತಾವು ಇಚ್ಛೆ ಪಡುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಇದರಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋಗುವ ಕಾರ್ಮಿಕರಿಗೆ ಈ ಯೋಜನೆ ಅನುಕೂಲವಾಗಲಿದೆ.
ಹೌದು, ಮೈಸೂರು ನಗರದ ಮುಕ್ತ ವಿವಿ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಕೇಂದ್ರ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ಆಯೋಜಿಸಿದ್ದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ರಾಜ್ಯದ ಪಡಿತರ ಚೀಟಿದಾರರು ತಾವು ಇಚ್ಛೆ ಪಡುವ ನ್ಯಾಯಬೆಲೆ ಅಂಗಡಿಗಳಲ್ಲಿ ತನ್ನ ಗುರುತಿನ ಚೀಟಿ (Ration Card) ತೋರಿಸಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಮ್ಮ ಸರಕಾರದ ಅನ್ನಭಾಗ್ಯ ಯೋಜನೆ ಯಂತೆ ಪ್ರತಿಯೊಬ್ಬರಿಗೂ 10 ಕೆ.ಜಿ. ಉಚಿತ ಅಕ್ಕಿ ವಿತರಣೆ ಮಾಡುವ ಗುರಿಯಿದೆ. ಆದರೆ, ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಹೀಗಾಗಿ, ಇನ್ನಷ್ಟು ದಿನ ರಾಜ್ಯ ಸರಕಾರ ಹೆಚ್ಚುವರಿ ಅಕ್ಕಿಗೆ ಹಣ ನೀಡಲಿದೆ ಎಂದರು.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವರಿಂದ ಸಿಹಿ ಸುದ್ದಿ- ಈ ದಿನದೊಳಗೆ ಕೈ ಸೇರಲಿದೆ ಆದೇಶ ಪತ್ರ