SSLC ವಿದ್ಯಾರ್ಥಿಗಳೇ ಗಮನಿಸಿ- ಪರೀಕ್ಷೆ ಕುರಿತು ಸರ್ಕಾರದಿಂದ ಹೊರಬಿತ್ತು ಬಿಗ್ಅಪ್ಡೇಟ್!!
Karnataka education news SSLC exam registration allowed till November 15 latest news
SSLC Exam Registration: 2024ನೇ ಮಾರ್ಚ್ ನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಹಿನ್ನೆಲೆ, ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ಮಂಡಳಿಗೆ ದೂರವಾಣಿಯ ಮುಖಾಂತರ ವಿದ್ಯಾರ್ಥಿಗಳ ನೋಂದಣಿ (SSLC Exam Registration) ಮಾಡಲು ದಿನಾಂಕವನ್ನು ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ ಹಾಜರಾಗುವ ವಿದ್ಯಾರ್ಥಿಗಳನ್ನು ನೋಂದಾಯಿಸಲು ನವೆಂಬರ್ 15 ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.
ಸದ್ಯ 2024ರ ಮಾರ್ಚ್ ನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ನೋಂದಾಯಿಸಲು ಹೊರಡಿಸಲಾಗಿರುತ್ತದೆ.
ಸದ್ಯ ವಿದ್ಯಾರ್ಥಿಗಳ ನೋಂದಣಿಗಾಗಿ ದಿನಾಂಕಗಳನ್ನು 15-11-2023 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಮೇಲೆ ವಿವರಿಸಿರುವಂತೆ ವಿಸ್ತರಿಸಿರುವ ದಿನಾಂಕದವರೆಗೆ ವಿದ್ಯಾರ್ಥಿಗಳ ನೋಂದಣಿ ಮಾಡತಕ್ಕದ್ದು. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ವಿದ್ಯಾರ್ಥಿಗಳ/ಪೋಷಕರ ಗಮನಕ್ಕೆ ತಂದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು / ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಿಳಿಸಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ- ದೇಶಾದ್ಯಂತ ರೇಷನ್ ಪಡೆಯುವ ಬಗ್ಗೆ ಸಚಿವರಿಂದ ಬಂತು ಬಿಗ್ ಅಪ್ಡೇಟ್ !!