LPG Gas Subsidy: ಗ್ಯಾಸ್ ಸಬ್ಸಿಡಿಯಲ್ಲಿ ಭಾರೀ ಹೆಚ್ಚಳ- ಇನ್ಮುಂದೆ ಅಗ್ಗದ ಬೆಲೆಗೆ ಸಿಗಲಿದೆ LPG ಸಿಲಿಂಡರ್!!
Business news LPG gas subsidy increases and gas cylinder price decreased
LPG Subsidy News: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ( Pradhan Mantri Ujwala Yojana) ಫಲಾನುಭವಿಗಳಿಗೆ ಬೊಂಬಾಟ್ ಸುದ್ದಿ ಇಲ್ಲಿದೆ. ಕೆಲ ಬಲ್ಲ ಮೂಲಗಳ ಪ್ರಕಾರ, ಗ್ಯಾಸ್ ಸಿಲಿಂಡರ್ಗಳ(LPG Gas Cylinder)ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ(PMUY) ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯಲ್ಲಿ (LPG gas Subsidy News)ಹೆಚ್ಚಳವನ್ನು ಘೋಷಿಸುವ ನಿರೀಕ್ಷೆಯಿದ್ದು, ಸಬ್ಸಿಡಿ ಮೊತ್ತ ಹೆಚ್ಚಿಸಿದರೆ ಕೋಟಿಗಟ್ಟಲೆ ಗ್ಯಾಸ್ ಗ್ರಾಹಕರಿಗೆ ಪರಿಹಾರ ಸಿಗಲಿದೆ.ಪ್ರಸ್ತುತ, ಉಜ್ವಲ ಯೋಜನೆಯ ಫಲಾನುಭವಿಗಳು ಒಂದು ವರ್ಷದಲ್ಲಿ 12 ಸಿಲಿಂಡರ್ಗಳ ಮೇಲೆ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ಪಡೆಯುತ್ತಿದ್ದಾರೆ. ಸಬ್ಸಿಡಿ ಪಡೆದ ಬಳಿಕ ಫಲಾನುಭವಿಗಳಿಗೆ ಈ ಸಿಲಿಂಡರ್ 603 ರೂ. ಗೆ ಸಿಗುತ್ತಿದೆ.
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ಹಾಕಿಕೊಂಡಿದೆ. ಉಜ್ವಲ ಯೋಜನೆಯಡಿಯಲ್ಲಿ ಸುಮಾರು 75 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದೆ.ಉಜ್ವಲ ಯೋಜನೆಯ ಪ್ರಯೋಜನ ಹೆಚ್ಚಿನ ಮಂದಿಗೆ ಕುಟುಂಬಗಳಿಗೆ ವಿಸ್ತರಿಸಲು ಗ್ರಾಹಕರ ನೆಲೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದೆ. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಸುಮಾರು 9.6 ಕೋಟಿ ಕಡಿಮೆ ಆದಾಯದ ಕುಟುಂಬಗಳಿಗೆ ಗ್ಯಾಸ್ ಸಬ್ಸಿಡಿಯನ್ನು ಹೆಚ್ಚಿಸಿದೆ. ಕಡಿಮೆ ಆದಾಯದ ಕುಟುಂಬಗಳಿಗೆ ಎಲ್ಪಿಜಿ ಸಬ್ಸಿಡಿಯನ್ನು (LPG Subsidy)ಪ್ರತಿ ಸಿಲಿಂಡರ್ಗೆ 200 ರೂ.ನಿಂದ 300 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.