Bank of Baroda: ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದ್ದೀರಾ ?! ಹಾಗಿದ್ರೆ ಇಲ್ಲಿದೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ
Business news good news for Bank of Baroda customers here is details
Bank of Baroda: ಭಾರತೀಯ ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಬರುವಂತಹ ರಾಷ್ಟ್ರಕೃತ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಆಗಿಂದ್ದಾಗೆ ಹಲವಾರು ಸಿಹಿ ಸುದ್ದಿಗಳನ್ನು ನೀಡುತ್ತಿರುತ್ತವೆ. ಹೊಸ ಯೋಜನೆಗಳ ಜಾರಿ, ಬಡ್ಡಿ ದರ ಏರಿಕೆ, ಕಡಿಮೆ ಬಡ್ಡಿಗೆ ಸಾಲ ಹೀಗೆ ಒಂದೊಂದು ರೀತಿಯಲ್ಲೂ ತನ್ನ ಗ್ರಾಹಕರಿಗೆ ಅನುಕೂಲಕರ ಯೋಜನೆಯನ್ನು ಜಾರಿಗೆ ತರುತ್ತಿರುತ್ತವೆ. ಅಂತೆಯೇ ಇದೀಗ ಬ್ಯಾಂಕ್ ಆಫ್ ಬರೋಡವು(Bank of Baroda) ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು ಅವರ ಕನಸಿನ ನನಸಿಗೆ ನೆರವಾಗುತ್ತಿದೆ.
ಹೌದು, ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡವು ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಗಳಲ್ಲಿ ಒಂದು. ಹೀಗಂದಮೇಲೆ ಅದು ತನ್ನ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಅಂತೆಯೇ ಇದೀಗ ತನ್ನ ಗ್ರಾಹಕರಾಗಿದ್ದು, ಅವರು ಕಾರು ಖರೀದಿಸುವ ಆಸೆಯನ್ನು ಹೊಂದಿದ್ರೆ, ಕೈಯಲ್ಲಿ ಕೊಳ್ಳುವಷ್ಟು ಹಣವಿಲ್ಲ ಅಂತ ಚಿಂತೆಯಲ್ಲಿದ್ರೆ ಅಂತವರಿಗೆ ಬ್ಯಾಂಕ್ ಆಫ್ ಬರೋಡವು ನೆರವಾಗಲು ಮುಂದಾಗೆದೆ. ಬ್ಯಾಂಕಿನ ಈ ಯೋಜನೆಯಿಂದ ಕೈಯಲ್ಲಿ ಕಾಸಿಲ್ಲ ಅಂದ್ರೂ ನೀವು ಆರಾಮಾಗಿ ಕಾರು ಖರೀದಿಸಬಹುದು.
ಅಂದಹಾಗೆ ಕಾರು ಕೊಳ್ಳಬೇಕು ಎಂಬುದು ಹಲವರ ಕನಸು. ಆದರೆ ಏನು ಮಾಡುವುದು ಅದರ ದಬಾರಿ ಬೆಲೆ ಅತ್ತ ಮುಖ ಹಾಕುವುದೂ ಬೇಡದಂತೆ ಮಾಡುತ್ತದೆ. ಆದರೆ ಗಟ್ಟಿ ಮನಸ್ಸು ಮಾಡಿ ಲೋನ್ ಮಾಡಿ ಕಾರು ಕೊಳ್ಳುವವರೂ ಹೆಚ್ಚಿನ ಜನರಿದ್ದಾರೆ. ಆದರೆ ಅದರ ಬಡ್ಡಿ ಕಟ್ಟುವಲ್ಲಿಯೇ ಸಾಕಾಗಿ ಹೋಗುತ್ತದೆ. ಆದರೆ ಈಗ ಬ್ಯಾಂಕ್ ಆಫ್ ಬರೋಡವು ಈ ಎಲ್ಲಾ ತಲೆನೋವುಗಳಿಗೆ ಮುಕ್ತಿ ನೀಡಲು ಮುಂದಾಗಿದೆ. ಯಾಕೆಂದರೆ ಕಾರು ಖರೀದಿಸುವ ಸಲುವಾಗಿಯೇ ಬ್ಯಾಂಕ್ ಆಫ್ ಬರೋಡವು ನಿಮಗೆ ಬರೋಬ್ಬರಿ 10 ಲಕ್ಷದಷ್ಟು ಲೋನ್ ನೀಡಲು ಮುಂದಾಗಿದೆ. ಬಡ್ಡಿಯಂತೂ ತುಂಬಾ ಕಡಿಮೆ. EMI ಅಂತೂ ಆರಾಮಾಗಿ ಕಟ್ಟಬಹುದು. ಹಾಗಿದ್ರೆ ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಬ್ಯಾಂಕ್ ಆಫ್ ಬರೋಡ (Bank of Baroda) ದಿಂದ ಕಾರ್ ಲೋನ್ ನೀಡಲಾಗುತ್ತಿದ್ದು ನೀವು 10 ಲಕ್ಷ ರೂಪಾಯಿಗಳ ಕಾರ್ ಲೋನ್ (Car Loan) ಪಡೆದುಕೊಂಡರೆ ಅದರ ಬಡ್ಡಿ 8%. ಹಾಗಿದ್ರೆ 62 ತಿಂಗಳುಗಳ ಕಾಲ ಅಂದರೆ ಐದು ವರ್ಷಗಳ ಕಾಲ ಅವಧಿಗೆ ನೀವು ಕಾರ್ ಲೋನ್ ಅನ್ನು ಪ್ರತಿ ತಿಂಗಳ EMI ಲೆಕ್ಕದಲ್ಲಿ 19744 ರೂಪಾಯಿ ಗಳನ್ನು ಕಟ್ಟಬೇಕಾಗುತ್ತದೆ. ಅಂದರೆ ಲೆಕ್ಕದ ಪ್ರಕಾರ ಹೆಚ್ಚುವರಿ ರೂಪದಲ್ಲಿ ನೀವು 2.24 ಲಕ್ಷ ರೂಪಾಯಿಗಳನ್ನು ನೀವು ಕಟ್ಟಬೇಕಾಗುತ್ತದೆ. ಆ ಲೆಕ್ಕದಲ್ಲಿ 10 ಲಕ್ಷ ರೂಪಾಯಿಗಳ ಲೋನ್ ಪಡೆದುಕೊಂಡ ನೀವು 12.24 ಲಕ್ಷ ರೂಪಾಯಿಗಳನ್ನು ಒಟ್ಟಾರೆಯಾಗಿ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: Whatsapp new rule : ವಾಟ್ಸಪ್ ಬಳಕೆದಾರರಿಗೆ ಇನ್ಮುಂದೆ ಬಂತು ಹೊಸ ರೂಲ್ಸ್- ಸುಪ್ರೀಂ ನಿಂದ ಖಡಕ್ ಎಚ್ಚರಿಕೆ !!