EPF ವತಿಯಿಂದ ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ – ವೇತನ ಮಿತಿ ಹೆಚ್ಚಿಸಿದ ಸಂಸ್ಥೆ !!
good news for Central Government employees epfo Benefits
EPF : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಪಾವತಿ ಮಾಡುವುದಾಗಿ ಘೋಷಿಸಿದೆ. ಪಿಎಫ್ ಬಡ್ಡಿಯ ಹೊರತುಪಡಿಸಿ, ಉದ್ಯೋಗಿಗಳು ಖುಶಿ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇಪಿಎಫ್‌ಒ ಇಪಿಎಸ್‌ಗೆ ನಿಗದಿ ಮಾಡಿದ ವೇತನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, EPFO ಮಿತಿಯನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಈ ಹಿಂದೆ 2014ರಲ್ಲಿ ಪಿಎಫ್‌ನ ಗರಿಷ್ಠ ಮಿತಿಯನ್ನು 6,500 ರೂ.ನಿಂದ 15,000 ರೂ.ಗೆ ಹೆಚ್ಚಳ ಮಾಡಲಾಗಿದೆ. EPFO ತೆಗೆದುಕೊಂಡ ಈ ನಿರ್ಧಾರದಿಂದ ಸುಮಾರು 75 ಲಕ್ಷ ಉದ್ಯೋಗಿಗಳು ನೇರವಾಗಿ ಪ್ರಯೋಜನ ಪಡೆಯುತ್ತಾರೆ. ಇಪಿಎಸ್ ವೇತನ ಮಿತಿಯನ್ನು ಹೆಚ್ಚಿಸಿದರೆ, ಹೆಚ್ಚಿನ ಉದ್ಯೋಗಿಗಳು ಪಿಎಫ್ ಲಾಭ ಪಡೆಯಬಹುದು. ವರದಿಯ ಅನುಸಾರ, ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಇಪಿಎಫ್‌ಒನ ಉದ್ಯೋಗಿ ಪಿಂಚಣಿ ಯೋಜನೆಗೆ ಪ್ರತಿ ವರ್ಷ 6,750 ಕೋಟಿ ರೂ. ಮೀಸಲಿಡುತ್ತಿದೆ. ಹೊಸ ಯೋಜನೆ ಜಾರಿಗೆ ಬಂದ ಬಳಿಕ 7.5 ಲಕ್ಷ ಹೆಚ್ಚುವರಿ ಉದ್ಯೋಗಿಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗುತ್ತದೆ. ನೌಕರನ ನಿವೃತ್ತಿಯ ಬಳಿಕ ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನವನ್ನು 15,000 ರೂ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಒಬ್ಬ ಉದ್ಯೋಗಿ ಇಪಿಎಸ್ ಅಡಿಯಲ್ಲಿ ಗರಿಷ್ಠ 7,500 ರೂ ಪಿಂಚಣಿ ಪಡೆಯಬಹುದು.