Chanakya Niti:ಮದುವೆಯಾಗಲು ವಧು-ವರರ ನಡುವೆ ನಿಜಕ್ಕೂ ವಯಸ್ಸಿನ ಅಂತರ ಎಷ್ಟಿರಬೇಕು ?! ಇಲ್ಲಿವೆ ನೋಡಿ ಚಾಣಕ್ಯನ ದಾಂಪತ್ಯ ಸೂತ್ರಗಳು
Chanakya niti husband and Wife Age Gap according to koutilya
Chanakya Niti: ಮದುವೆ (Marriage)ಎಂಬುದು ಎರಡು ಜೋಡಿಯ ಬೆಸೆಯುವ ಕೊಂಡಿ ಮಾತ್ರವಲ್ಲ ಎರಡು ಕುಟುಂಬವನ್ನು ಒಟ್ಟಾಗಿಸುವ ಸುಂದರ ಬಂಧ. ಮದುವೆಯ ವಿಚಾರದಲ್ಲಿ ಪತಿ- ಪತ್ನಿಯ ನಡುವೆ ಪ್ರೀತಿ(Love)ಮಾತ್ರವಲ್ಲದೇ ಹೊಂದಾಣಿಕೆ,ನಂಬಿಕೆ ಸುಂದರ ಸಂಬಂಧ ದೀರ್ಘ ಕಾಲ ಉಳಿಯಲು ಕಾರಣವಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ(Chanakya Niti) ವೈವಾಹಿಕ ಜೀವನವನ್ನು(Marraige Life)ಬಲಪಡಿಸುವುದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಬ್ಬರ ನಡುವೆ ಹೊಂದಾಣಿಕೆ (Mutual Understanding)ಅತ್ಯಗತ್ಯ. ಪತ್ನಿಯು ತಮ್ಮ ಸಂಗಾತಿಯ ಅಗತ್ಯಗಳನ್ನು ಪೂರೈಸದೆ ಇದ್ದಲ್ಲಿ ಜೀವನದಲ್ಲಿ ಸಂತೋಷ(Happy)ಸಿಗದು. ಪತಿ ಪತ್ನಿಯರ ನಡುವೆ ಪ್ರೀತಿ, ಸೌಹಾರ್ದತೆಯಿರಬೇಕು. ಪತಿ – ಪತ್ನಿಯ ನಡುವೆ ವಯಸ್ಸಿನ(Husband – Wife Age Gap)ಅಂತರ ಹೆಚ್ಚಿರಬಾರದು. ವೃದ್ದ ಯುವತಿಯನ್ನು ಮದುವೆಯಾಗಬಾರದು. ಈ ರೀತಿಯ ಮದುವೆ ಅಮಾನ್ಯವಾಗಿದ್ದು, ಆ ಸಂಬಂಧ ವೈವಾಹಿಕ ಜೀವನಕ್ಕೆ ವಿಷಕಾರಿಯಾಗುತ್ತದೆ. ಈ ರೀತಿಯ ಮದುವೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಈ ಪರಿಸರದಲ್ಲಿ ಗಂಡು ಹೆಣ್ಣಿನ ದಾಂಪತ್ಯ ಜೀವನ ಹಾಳಾಗುತ್ತದೆ. ಪತಿ ಪತ್ನಿಯ ನಡುವೆ 3-5 ವರ್ಷಗಳ ಅಂತರವಿದ್ದಾಗ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಅಷ್ಟೇ ಅಲ್ಲದೆ, ಇಬ್ಬರ ಮನಸ್ಥಿತಿ ಸಹಜವಾಗಿ ಒಂದೇ ರೀತಿ ಇರುತ್ತದೆ.
ವೈವಾಹಿಕ ಜೀವನದಲ್ಲಿ ಪತಿ ಪತ್ನಿಯರ ನಡುವೆ ವಯಸ್ಸಿನ ವ್ಯತ್ಯಾಸ ಹೆಚ್ಚಿರಬಾರದು ಎನ್ನುವುದು ಚಾಣಕ್ಯರ ಅಭಿಪ್ರಾಯ. ಗಂಡ ಹೆಂಡತಿ ನಡುವಿನ ವಯಸ್ಸಿನ ವ್ಯತ್ಯಾಸ ಹೆಚ್ಚಾದರೆ ಅಂತಹ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ. ಅಷ್ಟೇ ಅಲ್ಲದೇ, ದಾಂಪತ್ಯ ಜೀವನ ಸುಖಮಯವಾಗಿರಲು ಒಬ್ಬರನ್ನೊಬ್ಬರು ನಿರಾಸೆ ಮಾಡಬಾರದಂತೆ. ಚಾಣಕ್ಯರ ಪ್ರಕಾರ, ಪತಿ ಪತ್ನಿ ನಡುವಿನ ಸಂಬಂಧವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಬ್ಬರ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೆಂಡತಿಯಾದವಳು ಪವಿತ್ರ ಸಂಬಂಧದ ಗೌರವವನ್ನು ಹಿಡಿಯಬೇಕು. ವೈವಾಹಿಕ ಜೀವನದಲ್ಲಿ ಪರಸ್ಪರರ ನಡುವೆ ಗೌರವವಿರಬೇಕು. ಪತಿ ಪತ್ನಿ ಪರಸ್ಪರ ಜಗಳವಾಡುತ್ತ ನಿಂದಿಸಿದರೆ ಸಂಸಾರದಲ್ಲಿ ನೆಮ್ಮದಿ ಹಾಳಾಗುವ ಜೊತೆಗೆ ಮನೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ನೆಮ್ಮದಿ ಹಾಳಾಗುತ್ತದೆ.
ಇದನ್ನು ಓದಿ: Side Effects Of Papayas: ಇಂಥವರು ಯಾವುದೇ ಕಾರಣಕ್ಕೂ ಪಪ್ಪಾಯಿ ಹಣ್ಣನ್ನು ತಿನ್ನಲೇ ಬಾರದು – ತಿಂದ್ರೆ ಅಪಾಯವೇ ಹೆಚ್ಚು !!