TV Addiction: ಮೊಬೈಲ್ ನಲ್ಲಿ ಅದನ್ನು ನೋಡುತ್ತಾ ಜೀವಕ್ಕೇ ಕುತ್ತು ತಂದ್ಕೊಂಡ ಮಹಿಳೆ !! ಆಕೆ ಮಾಡಿದ್ದೇನು ಗೊತ್ತಾ ?!
Viral post woman was so distracted by David Beckham's Netflix documentary and she made a teeth-brushing blunder.
TV Addiction: ಟಿವಿ, ಮೊಬೈಲ್ ಗಳು(Mobile)ಮನರಂಜನೆಯ ಭಾಗವಾಗಿದ್ದು,ಟಿವಿ, ಮೊಬೈಲ್ ನೋಡುತ್ತಾ ಮಗ್ನರಾಗಿ ಕೆಲವರು ಮಾಡಿಕೊಳ್ಳುವ ಅವಾಂತರ ಅಷ್ಟಿಷ್ಟಲ್ಲ. ಅದೇ ರೀತಿ, ಟಿವಿ ಸಿರೀಸ್(Telivision Series)ನೋಡುವುದರಲ್ಲಿ ಮಗ್ನಳಾಗಿದ್ದ (TV Addiction)ಮಹಿಳೆಯೊಬ್ಬರು(Women)ಮಾಡಿಕೊಂಡ ಫಜೀತಿ ಕೇಳಿದರೆ ನಿಮಗೆ ಅಚ್ಚರಿ ಆಗುವುದು ಖಚಿತ.
ಮಿಯಾ ಕಿಟೆಲ್ಸನ್ ಎಂಬ ಮಹಿಳೆ ನೆಟ್ಫಿಕ್ಸ್ ನಲ್ಲಿ ಸಾಕ್ಷ್ಯಚಿತ್ರ(Netflix Documentaty) ನೋಡುತ್ತಿದ್ದಳು. ಡಾಕ್ಯುಮೆಂಟರಿ ವೀಕ್ಷಣೆಯಲ್ಲಿ ಎಷ್ಟರಮಟ್ಟಿಗೆ ತಲ್ಲೀನಳಾಗಿದ್ದಳು ಎಂದರೆ ಬ್ರಷ್ ಗೆ(Tooth brush) ಏನು ಹಾಕುತ್ತಿದ್ದೇನೆ ಎಂಬುದು ಕೂಡ ಈಕೆಯ ಗಮನಕ್ಕೆ ಬಂದಿಲ್ಲವಂತೆ. ಮಿಯಾ ಕಿಟೆಲ್ಸನ್ ಪ್ರಕಾರ, ಆಕೆ ಟೂತ್ ಪೇಸ್ಟ್ ಬದಲು ನೋವಿನ ಮುಲಾಮನ್ನು ಬ್ರಷ್ ಗೆ ಹಾಕಿಕೊಂಡು ಹಲ್ಲುಜ್ಜಲು ಶುರು ಮಾಡಿದ್ದು, ಕೆಲ ಸಮಯದ ಬಳಿಕ ಅದನ್ನು ಉಗುಳಿ, ಬಾಯಿ ಕ್ಲೀನ್ ಮಾಡಿಕೊಂಡಿದ್ದಾಳೆ.
ಡೇವಿಡ್ ಬೆಕ್‌ಹ್ಯಾಮ್‌ನ ಸಾಕ್ಷ್ಯಚಿತ್ರ ನೋಡುವುದರಲ್ಲಿ ತಾನು ಮಗ್ನಳಾಗಿದ್ದೆ. ಬ್ರಷ್‌ಗೆ ಡೀಪ್ ಹೀಟ್ (Deep Heat)ಹಾಕಿದ್ದನ್ನು ನಾನು ಗಮನಿಸಲಿಲ್ಲ ಎಂದು ಮಿಯಾ ಟಿಕ್ ಟಾಕ್ ಪೋಸ್ಟ್ ನಲ್ಲಿ(Viral Post)ಹೇಳಿಕೊಂಡಿದ್ದಾರೆ. ಇದು ಜೀವ ತೆಗೆಯುವಷ್ಟು ಅಪಾಯಕಾರಿ ಎಂಬುದು ಮಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೂ ಮಿಯಾ, ಡೀಪ್ ಹೀಟ್ ಹೆಸರಿನ ಮುಲಾಮನ್ನು ಹಾಕಿಕೊಂಡು ಬ್ರಷ್ ಮಾಡಿದ್ದು, ಅನೇಕರು ಡೀಪ್ ಹೀಟ್ ವಿಷಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮಿಯಾ ಬಾಯ್ ಅವರ ಸ್ನೇಹಿತರು ವಿಷ ನಿಯಂತ್ರಣ ವೈದ್ಯಕೀಯ ತಂಡಕ್ಕೆ ಕರೆ ಮಾಡಿದ್ದಾರೆ. ಸದ್ಯ, ಮಿಯಾ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ.