Snake Bite Death: ಕುಡಿತದಿಂದ ಅನಾಹುತ; ಹಾವಿಗೆ ಮುತ್ತು ಕೊಡಲು ಹೋಗಿ ಯುವಕ ಸಾವು!!

viral news man gets bitten while filming video with snake

Snake Bite Death: ಕುಡಿದ ಮತ್ತಿನಲ್ಲಿ ಕೆಲವರು ಮಾಡುವ ಅವಾಂತರಗಳ ಕುರಿತು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ. ಅಂತಹುದೇ ಒಂದು ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಹಾವಿನ ಜೊತೆ ವೀಡಿಯೋ ಮಾಡುವಾಗ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆದಿದ್ದು, ಹಾವಿಗೆ ಮುತ್ತು ಕೊಡಲು ಹೋಗುವಾದ ಅದು ಕಚ್ಚಿದ್ದು, ರೋಹಿತ್‌ ಜೈಸ್ವಾಲ್‌ ಎಂಬ ಯುವಕ ಸಾವಿಗೀಡಾಗಿದ್ದಾನೆ.

 

ಮೃತ ಯುವಕ ವೀಡಯೋದಲ್ಲಿ ಶಿವನ ರೂಪವಾದ ಮಹಾಕಾಲ್‌ ಆಗಿ ನಟಿಸುತ್ತಿರುವುದು, ಹಾವಿಗೆ ನನ್ನನ್ನು ಕಚ್ಚುವಂತೆ ಸವಾಲು ಹಾಕುತ್ತಿದ್ದ, ಕುತ್ತಿಗೆ, ಹಾಗೂ ಕೈಗೆ ಹಾವನ್ನು ಸುತ್ತಿಕೊಂಡಿದ್ದ, ಬಳಿಕ ನಾಲಗೆ ತೆರೆದು ಕಚ್ಚುವಂತೆ ಹೇಳಿದ್ದಾನೆ. ಸಿಗರೇಟು ಸೇದುವುದು ಹಾವಿಗೆ ಹೊಡೆಯುವುದು ಹೀಗೆ ವರ್ತಿಸುತ್ತಿದ್ದ.

ನಾಲ್ಕು ನಿಮಿಷ 38ಸೆಕೆಂಟುಗಳ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

 

ಇದನ್ನು ಓದಿ: TV Addiction: ಮೊಬೈಲ್ ನಲ್ಲಿ ಅದನ್ನು ನೋಡುತ್ತಾ ಜೀವಕ್ಕೇ ಕುತ್ತು ತಂದ್ಕೊಂಡ ಮಹಿಳೆ !! ಆಕೆ ಮಾಡಿದ್ದೇನು ಗೊತ್ತಾ ?!

Leave A Reply

Your email address will not be published.