Sukanya Samriddhi Yojana: ಮಕ್ಕಳ ಭದ್ರ ಭವಿಷ್ಯಕ್ಕೆ ಸರ್ಕಾರದಿಂದ ಹೊಸ ಸ್ಕೀಮ್ ಘೋಷಣೆ- ಕೇವಲ 12 ಸಾವಿರ ಇನ್ವೆಸ್ಟ್ ಮಾಡಿದ್ರೆ ಕೈ ಸೇರುತ್ತೆ ಬರೋಬ್ಬರಿ 70 ಲಕ್ಷ !!
Sukanya samruddi yojana you can earn 70 lakhs returns from ssy scheme with low investment
Sukanya Samriddhi Yojana: ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Yojana) ಕೇಂದ್ರ ಸರ್ಕಾರ(Central Government)ಜಾರಿಗೆ ತಂದಿದೆ. ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳ ಕುರಿತು ನೀವು ಚಿಂತಿತರಾಗಿದ್ದರೆ, ನಿಮಗೆ ಬಿಗ್ ರಿಲೀಫ್ ನೀಡುವ ಸುದ್ದಿ ಇಲ್ಲಿದೆ ನೋಡಿ!! ಸರ್ಕಾರದಿಂದ ನಡೆಸಲಾಗುವ ಹಲವು ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕೂಡ ಒಂದಾಗಿದೆ. ಸಣ್ಣ ಮಗುವಿನಿಂದ ಹಿಡಿದು 10 ವರ್ಷದೊಳಗಿನ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಯೋಜನೆ ಪ್ರಾರಂಭಿಸಬಹುದು.
ಸಣ್ಣ ಹೂಡಿಕೆಗಳು ಕೂಡ ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವ ಪೋಷಕರು/ಪೋಷಕರ ವರ್ಗಾವಣೆಯ ಸಂದರ್ಭದಲ್ಲಿ SSY ಖಾತೆಯನ್ನು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ (ಬ್ಯಾಂಕ್/ಪೋಸ್ಟ್ ಆಫೀಸ್) ಮುಕ್ತವಾಗಿ ವರ್ಗಾಯಿಸಬಹುದು. ಸರ್ಕಾರದ ಈ ಯೋಜನೆಯಲ್ಲಿ ವಾರ್ಷಿಕ ಶೆ. 8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಒಂದು ವರ್ಷಕ್ಕೆ 250 ರೂ ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶವಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷಕ್ಕೆ 1,50,000 ರೂವರೆಗೆ ಹೂಡಿಕೆ ಮಾಡಬಹುದಾಗಿದ್ದು, ಈ ಯೋಜನೆಯ ಮೂಲಕ ಆದಾಯವು 100% ತೆರಿಗೆ ಮುಕ್ತವಾಗಿದೆ. ಈ ಯೋಜನೆಯು PPF ಗಿಂತ ಉತ್ತಮ ಆದಾಯವನ್ನು ನೀಡುತ್ತದೆ.
ಸುಕನ್ಯಾ ಸಮೃದ್ದಿ ಯೋಜನೆಯಡಿಯಲ್ಲಿ 70 ಲಕ್ಷ ರೂಪಾಯಿಗಳ ನಿಧಿಯನ್ನು ಹೇಗೆ ರಚಿಸುವುದು?
ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಬ್ಬರು ವರ್ಷಕ್ಕೆ ಗರಿಷ್ಠ 1.50 ಲಕ್ಷ ಹೂಡಿಕೆ ಮಾಡಬಹುದು. ಹೀಗಾಗಿ, ನಿಗದಿತ ವರ್ಷಗಳಲ್ಲಿ ಗರಿಷ್ಠ ಹೂಡಿಕೆ 22.50 ಲಕ್ಷ ವಾಗಲಿದೆ. ಅಂದರೆ, ನೀವು ಮಾಸಿಕ ಹೂಡಿಕೆ ಸರಿಸುಮಾರು ರೂ. 12,5001.50 ಲಕ್ಷ ವಾರ್ಷಿಕ ಹೂಡಿಕೆಯಾಗಲಿದೆ. ಸುಮಾರು 15 ವರ್ಷಗಳ ಕಾಲ ಆ ಹೂಡಿಕೆಯು ನಿಮಗೆ 47.3 ಲಕ್ಷ ಬಡ್ಡಿ ಆದಾಯವನ್ನು ಮತ್ತು 69.80 ಲಕ್ಷದ ಮೆಚುರಿಟಿ ಮೊತ್ತವನ್ನು ಒದಗಿಸುತ್ತದೆ. ಹೀಗಾಗಿ, ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ 22.50 ಲಕ್ಷ ರೂಪಾಯಿಗಳ ಒಟ್ಟು ಹೂಡಿಕೆಯು 15 ವರ್ಷಗಳಲ್ಲಿ ಸುಮಾರು 70 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಬಹುದು.
ಇದನ್ನು ಓದಿ: ಗಾಜಾ ಪಟ್ಟಿ ಮೇಲೆ ಅಣ್ವಸ್ತ್ರ ದಾಳಿ? ಓರ್ವ ಸಚಿವ ಅಮಾನತು !