M P Renukacharya: ಬಿಜೆಪಿ ತಂಡದಿಂದ ಎಂ ಪಿ ರೇಣುಕಾಚಾರ್ಯ ಔಟ್ !!

M P Renukacharya: ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಶಾಸಕರಾಗಿರುವ ಎಂಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವಿಚಾರ ಬಹಳಷ್ಟು ದಿನಗಳಿಂದಲೂ ಸುದ್ದಿ ಆಗುತ್ತಿತ್ತು. ಅವರು ಬಿಜೆಪಿ ವಿರುದ್ಧ ನೀಡುತ್ತಿದ್ದ ಹಲವಾರು ಹೇಳಿಕೆಗಳು ಇದಕ್ಕೆ ಇಂಬು ನೀಡುತ್ತಿದ್ದವು. ಜೊತೆಗೆ ಪಕ್ಷವು ಕೂಡ ತನ್ನನ್ನು ತುಂಬಾ ಕಡೆಗಣಿಸುತ್ತದೆ ಎಂದು ಅನೇಕ ಬಿಜೆಪಿ ನಾಯಕರ ವಿರುದ್ಧ ಅವರು ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಬಿಜೆಪಿಯು ಎಂಪಿ ರೇಣುಕಾಚಾರ್ಯ ಅವರಿಗೆ ಬಿಗ್ ಶಾಕ್ ನೀಡಿದ್ದು ತಮ್ಮ ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದೆ.

ಹೌದು, ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ಕೂಡ ಆಡಳಿತ ರೂಢ ಕಾಂಗ್ರೆಸ್ ಜನರಿಗೆ ಪರಿಹಾರ ನೀಡುತ್ತಿಲ್ಲ ಎಂದು ಬಿಜೆಪಿಯು ತನ್ನದೇ ಒಂದು ನಾಯಕರ ತಂಡವನ್ನು ರಚಿಸಿಕೊಂಡು ರಾಜ್ಯಾದ್ಯಂತ ಬರ ಅಧ್ಯಯನ ನಡೆಸಲು ಮುಂದಾಗಿದೆ. ಆದರೆ ಇದೀಗ ಈ ತಂಡದಿಂದ ಎಂ ಪಿ ರೇಣುಕಾಚಾರ್ಯ ಅವರನ್ನು ಪಕ್ಷವು ಹೊರಗಿಟ್ಟಿರುವುದು ಸಾಕಷ್ಟು ಸುದ್ಧಿಯಾಗುತ್ತಿದೆ. ಬಿಜೆಪಿ ಈ ನಡೆ ಬಗ್ಗೆ ರೇಣುಕಾಚಾರ್ಯ ಅವರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾನು 2018 ರ ಚುನಾವಣಾ ಪೂರ್ವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಬರ ಅಧ್ಯಯನ (Drought Study) ಮಾಡಿದ್ದೆ. ಆದರೆ ಈ ಬಾರಿ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರ ಇಟ್ಟಿದ್ದಾರೆ. ಪಕ್ಷದ ಕೆಲ ನಾಯಕರ ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಇದ್ದಿದ್ದು ಇದ್ದಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಹಂಗಾಗಿದೆ. ಪಕ್ಷದಲ್ಲಿರುವ ಲೋಪವನ್ನು ನೇರವಾಗಿ ಹೇಳಿದ್ದಕ್ಕೆ ಕೆಲ ನಾಯಕರು ನನ್ನನ್ನು ಹೊರಗಿಟ್ಟಿದ್ದಾರೆ. ನಮ್ಮ ಬಿಜೆಪಿಯಲ್ಲಿ ಒಂದು ತಂಡ ಇದೆ ಅದು ಈ ಕೆಲಸ ಮಾಡುತ್ತಿದೆ ಎಂದು ಕೆಲ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

 

ಇದನ್ನು ಓದಿ: Free current: ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್, ಉಚಿತ ವಿದ್ಯುತ್ ಯೂನಿಟ್ ಮಿತಿ ಹೆಚ್ಚಿಸಿದ ಸರ್ಕಾರ !! ಇವರಿಗೆ ಮಾತ್ರ ಅನ್ವಯ !!

Leave A Reply

Your email address will not be published.