Diwali Festival Offers: ದೀಪಾವಳಿಗೆ ಬಂಪರ್ ಆಫರ್- ಮಹಿಂದ್ರಾ ಕಂಪೆನಿಯ ಈ ಕಾರು ಖರೀದಿಸಿದ್ರೆ ನಿಮಗೆ ರಿಟರ್ನ್ ಆಗುತ್ತೆ 5 ಲಕ್ಷ !!

Diwali Festival Offers best Diwali discount offers for these cars

Diwali Offers For Cars: ಹಬ್ಬದ ಸಮಯದಲ್ಲಿ ಹೆಚ್ಚಿನ ಕಂಪನಿಗಳು ವಿಶೇಷ ಆಫರ್ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ, ದೀಪಾವಳಿ ಹಬ್ಬಕ್ಕೆ ಕೆಲ ಆಟೋಮೊಬೈಲ್(Auto Mobiles)ಕಂಪನಿಗಳು ಬಂಪರ್ ಆಫರ್ ಘೋಷಿಸಿದ್ದು, ಹೀಗಾಗಿ, ಹೆಚ್ಚಿನ ಉಳಿತಾಯದ ಜೊತೆಗೆ ನಿಮ್ಮ ನೆಚ್ಚಿನ ಕಾರನ್ನು ಖರೀದಿ ಮಾಡಬಹುದು. ಇದೀಗ, ಈ ಕಂಪನಿಗಳ ಕಾರು ಖರೀದಿ (Diwali Offers For Cars)ಮಾಡಿದರೆ ನಿಮಗೆ ಸಿಗಲಿದೆ ಬೊಂಬಾಟ್ ಆಫರ್ ಗಳು!!ದೀಪಾವಳಿ ಹಬ್ಬಕ್ಕೆ(Diwali Festival) ಬಹುತೇಕ ಆಟೋಮೊಬೈಲ್ ಕಂಪನಿಗಳು ಆ್ಯಕ್ಸಸರಿ, ಕಡಿಮೆ ಬಡ್ಡಿದರದ ಸಾಲ, ಕಡಿಮೆ ಡೌನ್‌ಪೇಮೆಂಟ್ ಸೇರಿದಂತೆ ಇತರ ಆಫರ್‌ಗಳನ್ನು ಘೋಷಿಸಿದೆ.

 

* ನೀವೇನಾದರೂ ಮಹೀಂದ್ರ XUV400 ಎಲೆಕ್ಟ್ರಿಕ್ ಕಾರು ಖರೀದಿ ಮಾಡುವ ಪ್ಲಾನ್ ಹಾಕಿಕೊಂಡಿದ್ದರೆ, ಈ ದೀಪಾವಳಿ ಹಬ್ಬಕ್ಕೆ 3 ಲಕ್ಷ ರೂಪಾಯಿ ಆಫರ್ ಲಭ್ಯವಾಗಲಿದೆ. XUV400 ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ ರೂಪಾಯಿಯಿಂದ 19.19 ಲಕ್ಷ ರೂಪಾಯಿಯಾಗಿದೆ.

* ಈ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 23.84 ಲಕ್ಷ ರೂಪಾಯಿಯಿಂದ 24.03 ಲಕ್ಷ ರೂಪಾಯಿಯಾಗಿದೆ. ಈ ಕಾರು ಖರೀದಿಸುವ ಗ್ರಾಹಕರು 2 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು.

* ಎಲೆಕ್ಟ್ರಿಕ್ ಕಾರಿನಲ್ಲಿ ಎಂಜಿ ZS ಕಾರು ಭಾರತದಲ್ಲಿ ಭಾರೀ ಡಿಮ್ಯಾಂಡ್ ಹೊಂದಿದ್ದು, ಕಾರಿನ ಎಕ್ಸ್ ಶೋ ರೂಂ ಬೆಲೆ 22.88 ಲಕ್ಷ ರೂಪಾಯಿಂದ 26 ಲಕ್ಷ ರೂಪಾಯಿಯಾಗಿದೆ. ಈ ಕಾರಿನ ಖರೀದಿಗೆ 2.3 ಲಕ್ಷ ರೂಪಾಯಿ ಆಫರ್ ಲಭ್ಯವಾಗಲಿದೆ.
* ಜೀಪ್ ಮೆರಿಡಿಯನ್ ಕಾರಿಗೆ ದೀಪಾವಳಿ ಹಬ್ಬದ ಪ್ರಯುಕ್ತ 1.85 ಲಕ್ಷ ರೂಪಾಯಿ ಆಫರ್ ನೀಡಲಾಗಿದ್ದು ಈ ಕಾರಿನ ಆರಂಭಿಕ ಬೆಲೆ 33.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆಗಿದೆ.

* ಭಾರತದಲ್ಲಿ ಸಿಟ್ರೊಯೆನ್ ಕಾರು ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಮಾರುಕಟ್ಟೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸಿಟ್ರೊಯೆನ್ ಸಿ5 ಏರ್‌ಕ್ರಾಸ್ ಕಾರಿನ ಎಕ್ಸ್ ಶೋ ರೂಂ ಬೆಲೆ 36.91 ಲಕ್ಷ ರೂಪಾಯಿಯಿಂದ 37.67 ಲಕ್ಷ ರೂಪಾಯಿ ಆಗಿದೆ. ಈ ಕಾರನ್ನು ಖರೀದಿ ಮಾಡಿದರೆ ಗ್ರಾಹಕರಿಗೆ 2.5 ಲಕ್ಷ ರೂಪಾಯಿ ಆಫರ್ ಸಿಗಲಿದೆ.

* ಟೋಯೋಟಾ ಹಿಲಕ್ಸ್ ಪಿಕ್ ಅಪ್ ಟ್ರಕ್ ಶೋ ರೂಂ ಬೆಲೆ 30.40 ಲಕ್ಷ ರೂಪಾಯಿಂದ 37.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ. ಇದನ್ನು ಖರೀದಿ ಮಾಡುವ ಗ್ರಾಹಕರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ಆಫರ್ ದೊರೆಯಲಿದೆ.

 

ಇದನ್ನು ಓದಿ: Shocking news: ಹೆಂಡತಿಯ ಹುಟ್ದಬ್ಬಕ್ಕೆ ಗಂಡ ಕೊಟ್ಟ ಗಿಫ್ಟ್ ಇಬ್ರಿಗೂ ಡೈವೋರ್ಸ್ ಕೊಡಿಸಿಬಿಡ್ತು !!

Leave A Reply

Your email address will not be published.