Plastic rice: ಗ್ರಾಹಕರೆ ಎಚ್ಚರ..!! ಅಂಗಡಿಯಿಂದ ತಂದದ್ದು ಪ್ಲಾಸ್ಟಿಕ್ ಅಕ್ಕಿಯೋ, ನಿಜವಾದ ಅಕ್ಕಿಯೋ? ಕೂಡಲೇ ಚೆಕ್ ಮಾಡಿ !!

Check whether the rice brought from the store is plastic rice or real rice

Plastic rice: ಜಗತ್ತು ಎಲ್ಲಾ ರೀತಿಯಿಂದಲೂ ಮುಂದುವರೆದಂತೆ ಅಸಲಿಗಳೆಲ್ಲವೂ ನಕಲಿಗಳಾಗುತ್ತಿವೆ. ಹಣ ಗಳಿಕೆಗೆ ಅನ್ಯ ಮಾರ್ಗಗಳನ್ನು ಹಿಡಿದು ಹಲವರ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ ಕಟುಕರು. ಇದರಲ್ಲಿ ಪ್ರಮುಖವಾಗಿ ನೋಡೋದಾದ್ರೆ ತಿನ್ನೋ ಅನ್ನವನ್ನೂ ನಕಲಿಯಾಗಿಸಿ ಜನಸಾಮಾನ್ಯರನ್ನು ಸಾವಿನ ದವಡೆಗೆ ದೂಡುತ್ತಿದ್ದಾರೆ. ಅಂದರೆ ಪ್ಲಾಸ್ಟಿಕ್ ಅಕ್ಕಿಯ(Plastic rice)ನ್ನು ಮಾರುಕಟ್ಟೆಗೆ ಬಿಟ್ಟು ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ಹೌದು, ಅನೇಕರು ಇಂದು ಪ್ಲಾಸ್ಟಿಕ್ ಅಕ್ಕಿಯ ಹಾವಳಿಯಿಂದ ಬಸವಳಿದು ಹೋಗಿದ್ದಾರೆ. ರಾಸಾಯನಿಕ ಮಿಶ್ರಿತವಾದ ಈ ಅಕ್ಕಿಯಿಂದ ಕ್ಯಾನ್ಸರ್ ನಂತಹ ಅನೇಕ ಮಾರಕ ಕಾಯಿಲೆಗಳು ವಕ್ಕರಿಸುತ್ತಿವೆ. ಹೀಗಾಗಿ ಗ್ರಾಹಕರೆ ದಯವಿಟ್ಟು ತಾವು ಅಂಗಡಿಯಿಂದ ತಂದದ್ದು ಪ್ಲಾಸ್ಟಿಕ್ ಅಕ್ಕಿಯೋ ಅಥವಾ ನಿಜವಾದದ್ದೋ ಎಂದು ತಂದ ಕೂಡಲೇ ಹೀಗೆ ಚೆಕ್ ಮಾಡಿ!!

ಪ್ಲಾಸ್ಟಿಕ್ ಅಕ್ಕಿಯನ್ನು ಪತ್ತೆ ಮಾಡುವುದು ಹೇಗೆ ?!
• ಅಂಗಡಿಯಿಂದ ತಂದ ಅಕ್ಕಿಯನ್ನು ನೀವು ಬೇಯಿಸಲು ಇಟ್ಟಾಗ ಪಾತ್ರೆಯ ಸುತ್ತ ದಪ್ಪದಾದ ಒಂದು ಪದರ ರೂಪಗೊಳ್ಳುತ್ತ
• ನೈಜವಾದ ಅಕ್ಕಿಯು ಬೆಂದ ತಕ್ಷಣ ಮೃದುವಾಗುವುದು ಎಲ್ಲರಿಗೂ ತಿಳಿದಿದೆ. ಆದರೆ ಪ್ಲಾಸ್ಟಿಕ್ ಹಾಕಿ ಬೆಂದ ನಂತರ ಗಟ್ಟಿಯಾಗಿರುತ್ತದೆ.
• ಅಂಗಡಿಯಿಂದ ತಂದ ಅಕ್ಕಿಯನ್ನು ಅನ್ನ ಮಾಡಿದ ನಂತರ ಒಂದು ಪಾತ್ರೆಗೆ ಹಾಕಿ ಎರಡು ಮೂರು ದಿನ ಬಿಡಿ. ಆ ಅನ್ನವು ಫಂಗಸ್ ಬಾರದಿದ್ದರೆ ಅದು ನಿಜವಾದ ಅಕ್ಕಿಯಲ್ಲ, ಪ್ಲಾಸ್ಟಿಕ್ ಅಕ್ಕಿ ಎಂಬುದು ಸಾಬೀತಾಗುತ್ತದೆ.
• ಅನ್ನವನ್ನು ಬೇಯಿಸಿದ ನಂತರ ಅದಕ್ಕೆ ಬಿಸಿಯಾದ ಎಣ್ಣೆಯನ್ನು ಸುರಿಯರಿ. ಅದು ಪ್ಲಾಸ್ಟಿಕ್ ಅಕ್ಕಿಯಾದರೆ ಅಲ್ಲೇ ಕರಗಿ, ಜಿನಗಿ ಹೋಗುತ್ತದೆ.
• ಮನೆಯಲ್ಲಿ ಅನ್ನ ಮಾಡಿದಾಗ ಅದು ಯಾವುದೇ ಕ್ವಾಲಿಟಿ ಅಕ್ಕಿಯಾದರೂ ಸುವಾಸನೆ ಬೀರುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿ ಎಷ್ಟೇ ಆದರೂ ಪರಿಮಳ ಬೀರುವುದಿಲ್ಲ. ಬದಲಿಗೆ ರಾಸಾಯನಿಕ ವಾಸನೆ.

ಹೀಗಾಗಿ ಜನಸಾಮಾನ್ಯರೇ ಆಹಾರ ಪದಾರ್ಥಗಳ ವಿಚಾರವಾಗಿ ನೀವು ಸದಾ ಎಚ್ಚರದಿಂದಿರಿ. ಅದರಲ್ಲೂ ಕೂಡ ಈ ಅಕ್ಕಿಯ ವಿಚಾರದಲ್ಲಿ ಸದಾ ನಿಮ್ಮ ಗಮನ ಆಕಡೆಗೇ ಇರಲಿ. ಅಂಗಡಿಯಿಂದ ತಂದ ಕೂಡಲೇ ಮೇಲೆ ಹೇಳಿದ ಹಾಗೆ ಅಕ್ಕಿ ನಕಲಿಯೋ, ಅಸಲಿಯೋ ಎಂದು ಕೂಡಲೇ ಚೆಕ್ ಮಾಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

 

ಇದನ್ನು ಓದಿ: Murder Case: ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ; ಕೊಲೆ ರಹಸ್ಯ ಬಯಲು!!!

Leave A Reply

Your email address will not be published.