Belthangady: ಮುಸ್ಲಿಂ ವ್ಯಕ್ತಿ ಆಕ್ರಮಿಸಿದ ಸರ್ಕಾರಿ ಜಾಗದಲ್ಲಿ ಪತ್ತೆಯಾಯ್ತು ಟಿಪ್ಪು ಧ್ವಂಸಗೊಳಿಸಿದ್ದ ಗೋಪಾಲಕೃಷ್ಣ ದೇವಾಲಯ !!
Belthangady: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲೊಂದು ಆಚ್ಚರಿಯ ಘಟನೆ ನಡೆದಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಅತಿಕ್ರಮಗೊಳಿಸಿಕೊಂಡಿದ್ದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್ ಧ್ವಂಸಗೊಳಿಸಿದ್ದಾನೆ ಎನ್ನಲಾದ ಶ್ರೀ ಭಗವದ್ ಗೋಪಾಲಕೃಷ್ಣ ದೇಗುಲ ಪತ್ತೆಯಾಗಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ತೆಕ್ಕಾರು ಎಂಬಲ್ಲಿ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದಲ್ಲಿ, ಸುಮಾರು 15 ಅಡಿ ಆಳದಲ್ಲಿ ಗೋಪಾಲಕೃಷ್ಣ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ಸಾಕ್ಷಾತ್ ವಿಷ್ಣುವೇ ಕನಸಿನಲ್ಲಿ ಬಂದು ಇರುವಿಕೆ ತೋರಿದ ರೋಚಕ ಸ್ಟೋರಿಯಾಗಿದೆ. ಯಾಕೆಂದರೆ ಶ್ರೀಕೃಷ್ಣನೇ ಹಿಂದೂ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು ದೇಗುಲ ಇರುವ ಬಗ್ಗೆ ಸುಳಿವು ನೀಡಿದ್ದು, ಜಾಗದಲ್ಲಿ ಶೋಧನೆ ಮಾಡಿದಾಗ ದೇಗುಲದ ಅವಶೇಷಗಳು ಹಾಗೂ ಗೋಪಾಲಕೃಷ್ಣ ಮೂರ್ತಿ ಇರುವುದು ಪತ್ತೆಯಾಗಿದೆ.
ಕುರುಹು ಸಿಕ್ಕಿದ್ದು ಹೇಗೆ ?
ಸುಮಾರು 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರು ತೆಕ್ಕಾರು ಬಳಿ ಜಾಗ ಖರೀದಿ ಮಾಡಿದ್ದರು.
ಈ ಮಧ್ಯೆ ಲಕ್ಷಣ್ ಅವರ ಕನಸಿನಲ್ಲಿ ವಿಷ್ಣು ಬಂದು ಇರುವಿಕೆ ತೋರಿತ್ತು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿಯಲ್ಲಿ ಲಕ್ಷ್ಮಣರಿಗೆ ಬಿದ್ದಿದ್ದ ಕನಸು ಬಿದ್ದಿದೆ. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ಹಾಮದ್ ಬಾವಾ ಎಂಬವರ ಜಾಗವಿತ್ತು. ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರೆತ ಜಾಗದಲ್ಲಿ ಬಾವಾಗೆ ಸೇರಿದ ಅಡಿಕೆ ತೋಟವಿತ್ತು. ಕನಸಿನಾಧಾರದ ಮೇಲೆ ಲಕ್ಷ್ಮಣ ಅವರು ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನ ಇರೋ ಮಾಹಿತಿ ಲಭ್ಯವಾಗಿದೆ. ಅದರಂತೆ ಜಾಗದ ದಾಖಲೆ ಪರಿಶೀಲಿಸಿದಾಗ ಅದು ಸರ್ಕಾರಿ ಜಾಗ ಎಂಬುದು ಪತ್ತೆಯಾಗುದೆ.
ಆ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಕಾರದಲ್ಲಿ ಮುಸ್ಲಿಂ ವ್ಯಕ್ತಿಯ ಜಾಗದ ಸರ್ವೇ ಮಾಡಲಾಗಿದೆ. ಈ ಸರ್ವೇ ಬೇಳೆ 25 ಸೆನ್ಸ್ ಜಾಗ ಸರ್ಕಾರದ್ದು ಎಂಬುದು ತಿಳಿದುಬಂದಿದೆ. ಹಾಮದ್ ಬಾವಾ ಅಡಿಕೆ ಗಿಡ ನೆಟ್ಟಿದ್ದ ಜಾಗ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ನಂತರ ಸ್ಥಳೀಯರು ಟ್ರಸ್ಟ್ ರಚಿಸಿಕೊಂಡು ಜಿಲ್ಲಾಡಳಿತದ ಅನತಿಯ ಮೇರೆಗೆ ಉತ್ಖನನಕ್ಕೆ ತೊಡಗಿದ್ದಾರೆ. ಈ ವೇಳೆ ಗೋಪಾಲಕೃಷ್ಣ ದೇವರ ವಿಗ್ರಹಗಳು ಪತ್ತೆಯಾಗಿವೆ. ಲಕ್ಷ್ಮಣರ ಕನಸಿನಲ್ಲಿ ಬಂದಂತೆ ವಿಗ್ರಹ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇನ್ನೂ ಹಾಮದ್ ಬಾವಾ ಅವರು ವಿಗ್ರಹ ಪತ್ತೆಯಾದ ಜಾಗದ ಸುತ್ತಲಿರುವ ತಮ್ಮ 75 ಸೆನ್ಸ್ ಸೌಹಾರ್ದತೆಯಿಂತ 75 ಸೆಂಟ್ಸ್ ಜಾಗವನ್ನೂ ದೇವಸ್ಥಾನ ಟ್ರಸ್ಟ್‌ಗೆ ಮಾರಾಟ ಮಾಡಿದ್ದಾನೆ. ಸದ್ದದಲ್ಲೇ ಗ್ರಾಮಸ್ಥರಿಂದ ದೇವಾಲಯ ನಿರ್ಮಾಣವಾಗಲಿದೆ.