Jagadish Shetter: ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜಗದೀಶ್ ಶೆಟ್ಟರ್ – ‘ಕಮಲ’ದಲ್ಲಿ ಮಾತ್ರವಲ್ಲ, ಯಡಿಯೂರಪ್ಪ ಕುಟುಂಬದಲ್ಲೂ ತಳಮಳ !!

Share the Article

Jagadish Shetter: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರದು ಕಾಂಗ್ರೆಸ್ ಸೇರಿ ಕಮಲ ಪಾಳಯಕ್ಕೆ ಭಾರಿ ದೊಡ್ಡ ಶಾಕ್ ನೀಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shetter) ಇದೀಗ ಲೋಕಸಮರದ ಹೊತ್ತಿನಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಈ ಭಾರೀ ಶೆಟ್ಟರ್ ಶಾಕ್ ನೀಡಿದ್ದು ಬರೀ ಬಿಜೆಪಿ(BJP)ಗೆ ಮಾತ್ರವಲ್ಲ. ಯಡಿಯೂರಪ್ಪ(Yadiyurappa) ಕುಟುಂಬಕ್ಕೂ ಕೂಡ. ಯಾಕೆಂದರೆ ಪಕ್ಕಾ ಬಿಜೆಪಿ ಕುಟುಂಬ ಎಂದು ಗುರುತಿಸಿಕೊಂಡು ರಾಜ್ಯದಲ್ಲಿ ಹೆಸರು ಮಾಡಿದ್ದ ಯಡಿಯೂರಪ್ಪರ ಕುಟುಂಬದ ಪ್ರಮುಖ ಸದಸ್ಯರೊಬ್ಬರು ಈಗ ಕಾಂಗ್ರೆಸ್ ಪಾಲಾಗುತ್ತಿದ್ದಾರೆ. ಇದಕ್ಕೆ ಮಾಸ್ಟರ್ ಪ್ಲಾನ್ ಹೆಣೆದು ಬಿಜೆಪಿಗೆ ಮತ್ತೊಂದು ಆಘಾತ ಉಂಟುಮಾಡಿದ್ದೇ ಜಗದೀಶ್ ಶೆಟ್ಟರ್!!

ಹೌದು, ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರ ಸಂಬಂಧಿ, ಮಾಜಿ ಶಾಸಕ ಚಿಕ್ಕನಗೌಡರ್(Chikkana goudar) ಬಿಜೆಪಿ ತೊರೆದು ಕಾಂಗ್ರೆಸ್​ನತ್ತ ಸೇರ್ಪಡೆಗೆ ಮುಂದಾಗಿದ್ದಾರೆ. ಅಂದಹಾಗೆ ಚಿಕ್ಕನಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದು, ಅವರು ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲುಕಂಡಿದ್ದರು. ಇದೀಗ ಅವರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದಾರೆ.

 

ಇದನ್ನು ಓದಿ: CM Siddaramaiah: ರಾತ್ರೋ ರಾತ್ರಿ ರಾಜ್ಯಾದ ಎಲ್ಲಾ ಮಂತ್ರಿಗಳಿಗೆ ಖಡಕ್ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ !!

Leave A Reply