BBMP: ಬೆಂಗಳೂರಿನಲ್ಲಿ ಸೈಟ್ ಹೊಂದಿರುವವರಿಗೆ ಬಂತು ಟಫ್ ರೂಲ್ಸ್- ಬಿಬಿಎಂಪಿಯಿಂದ ಮಹತ್ವದ ನಿರ್ಧಾರ !!

New rules for site owners from BBMP in Bangalore

BBMP: ಬೆಂಗಳೂರಿನಲ್ಲಿ ಸೈಟ್ ಅಥವಾ ಯಾವುದಾದರು ಜಾಗಗಳನ್ನು ಹೊಂದಿದವರುವ ಮಾಲಿಕರಿಗೆ ಇದೀಗ ಬಿಬಿಎಂಪಿಯು(BBMP) ಹೊಸ ಟಫ್ ರೂಲ್ಸ್ ಅನ್ನು ಜಾರಿಗೊಳಿಸಿದೆ.

ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಟ್ ಇದೀಯಾ..? ಅದನ್ನು ನೀವು ವರ್ಷಗಟ್ಟಲೆ ಯಿಂದ ಖಾಲಿ ಬಿಟ್ಟಿದ್ದೀರಾ..? ಹಾಗಾದರೆ ನಿಮಗೆ ಬಿಬಿಎಂಪಿ ಬಿಗ್ ಶಾಕ್ ನೀಡ್ತಿದೆ. ಅದೇನೆಂದರೆ ಬೆಂಗಳೂರಿನಲ್ಲಿ ಸೈಟ್ ಹೊಂದಿದವರಿಗೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊಸ ನಿಯಮ ಜಾರಿಗೆ ತಂದಿದ್ದು ತಮ್ಮ ಕಾಲಿನಿ ವೇಶನ ಅಥವಾ ಸೈಟ್ ಗಳಲ್ಲಿ ಪೊದೆಗಳು ಏನಾದರೂ ಬೆಳೆದಿದ್ದರೆ ಇಲ್ಲ ಅದರಲ್ಲಿ ಕಸ ತಂದು ಹಾಕಿ ಗಲೀಜಾಗಿ ಇಟ್ಟುಕೊಂಡಿದ್ದರೆ ಅಂತಹ ನಿವೇಶನದ ಮಾಲೀಕರಿಗೆ ಬಾರಿ ಮತದಂಡವನ್ನು ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವ ಮಾಲೀಕರು ಅದರಲ್ಲಿ ತಕ್ಷಣವೇ ಮನೆ ನಿರ್ಮಾಣ ಮಾಡಬೇಕು. ಅನಿವಾರ್ಯ ಕಾರಣಗಳಿಂದ ಅದು ಆಗಲಿಲ್ಲ ಎಂದರೆ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಹೂವಿನ ಗಿಡಗಳನ್ನು ಬೆಳೆಸಬಹುದು. ಒಂದು ವೇಳೆ ಖಾಲಿ ನಿವೇಶನದಲ್ಲಿ ಕಸ ಹಾಕುವುದು, ಕಟ್ಟಡಗಳ ಕಸ ಸುರಿಯುವುದು ಅಥವಾ ಪೊದೆಗಳನ್ನು ಬೆಳೆಸಿದಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಬಿಬಿಎಂಪಿ ವತಿಯಿಂದ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಂದಹಾಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಚಿರತೆಗಳ ಕಾಟ ತುಂಬಾನೇ ಹೆಚ್ಚಾಗುತ್ತಿದೆ. ಈ ಚಿರತೆಗಳೆಲ್ಲವೂ ಕೂಡ ಈ ಕಾಲಿ ನಿವೇಶನಗಳಲ್ಲಿ ಬೆಳೆದ ಪದಗಳಲ್ಲಿ ಅಡಗಿ ಕುಳಿತಿರುತ್ತವೆ. ಹೀಗಾಗಿ ಇದು ಒಂದು ಭಯದ ವಾತಾವರಣ ನಿರ್ಮಿಸಿದೆ. ಜೊತೆಗೆ ಮುಂದಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ದಾರಿ ನೀಡುವ ಲಕ್ಷಣಗಳಿಗೆ. ಹೀಗಾಗಿ ಬಿಬಿಎಂಪಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

 

ಇದನ್ನು ಓದಿ: YouTube: ಯೂಟ್ಯೂಬ್ ನಲ್ಲಿ ವಿಡಿಯೋ ನೋಡೋರಿಗೆ ಬಂತು ಹೊಸ ರೂಲ್ಸ್ !!

Leave A Reply

Your email address will not be published.