BJP Satate president: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುರುಬ ಸಮುದಾಯದ ಈ ನಾಯಕನ ಹೆಸರು ಫಿಕ್ಸ್ ?!

name of this leader of the Kuruba community has been nominated for the post of BJP state president

BJP Satate president: ಕೆಲವು ದಿನಗಳಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಬಿಜೆಪಿ ಹೈಕಮಾಂಡ್ ಕೆಲವು ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಿ ಈ ಬಗ್ಗೆ ಚರ್ಚೆ ನಡೆಸಿದೆ. ಈ ಬೆನ್ನಲ್ಲೇ ಇದೀಗ ಬಿಜೆಪಿ ಅಧ್ಯಕ್ಷ(BJP Satate president) ಸ್ಥಾನಕ್ಕೆ ಕುರುಬ ಸಮುದಾಯದ ಈ ನಾಯಕನ ಹೆಸರು ಫಿಕ್ಸ್ ಆಗಲಿದೆ ಎಂಬ ಸುದ್ದಿಯೊಂದು ಸದ್ದುಮಾಡುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಮುದುಡಿರುವ ಕಮಲವನ್ನು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅರಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ. ಇದಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾತ್ರ ಸಾಲದು ಎಂದರಿತಿರುವ ವರಿಷ್ಠರು ಇದೀಗ ಪ್ರಬಲ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಚಿಂತಿಸಿದೆ. ಹೀಗಾಗಿ ಈಗ ರಾಜ್ಯದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಕುರುಬ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷದ ಪಟ್ಟಾಭಿಷೇಕ ಮಾಡಲು ಹೈಕಮಾಂಡ್ ಮುಂದಡಿ ಇಟ್ಟಿದ್ದು, ಹೆಸರು ಕೂಡ ಫಿಕ್ಸ್ ಆಗಿದೆ ಎಂಬ ವಿಚಾರ ಮುನ್ನಲೆಗೆ ಬಂದಿದೆ.

ಹೌದು, ಕುರುಬ ಸಮುದಾಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ಕುರುಬ ಸಮುದಾಯದ ನಾಯಕನನ್ನು ರಾಜ್ಯಾಧ್ಯಕ್ಷ ಮಾಡಲು ಬಿಜೆಪಿ ಹೊರಟಿದೆಯಂತೆ. ಇದಕ್ಕಾಗಿ ಪಕ್ಷದ ಪ್ರಬಲ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಹೆಸರು ಫೈನಲ್ ಆಗಿದೆ ಎಂಬ ಸುದ್ದಿ ಬಲ್ಲ ಮೂಲಗಳಿಂದ ದೊರೆತಿದೆ. ಕೆಲ ದಿನಗಳ ಹಿಂದಷ್ಟೇ ಈಶ್ವರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದ್ದು, ರಾಜ್ಯಾಧ್ಯಕ್ಷ ಸ್ಥಾನ ಕೆ ಎಸ್‌ ಈಶ್ವರಪ್ಪ ಅವರಿಗೆ ಒಲಿದು ಬರಲಿದೆ ಎಂದು ಹೇಳಲಾಗಿದೆ.

ಅಂದಹಾಗೆ ಈಗಾಗಲೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಧ್ಯಕ್ಯ ಜೆ ಪಿ ನಡ್ಡಾ ಅವರನ್ನ ಕೆ ಎಸ್‌ ಈಶ್ವರಪ್ಪ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು ಘೋಷಣೆ ಮಾತ್ರ ಭಾಕಿ ಇದೆ ಅನ್ನೋ ಸುದ್ದಿ ಕೂಡ ಬರುತ್ತಿದೆ. ಆದರೆ ಮುಂದಿನ ನಿರ್ಧಾರ ಏನು ಎಂಬುದರ ಕುರಿತು ಎಲ್ಲರೂ ಕಾದು ನೋಡಬೇಕಿದೆ.

 

ಇದನ್ನು ಓದಿ: Good Morning Tips: ಬೆಳಗ್ಗೆ ಎದ್ದ ಕೂಡಲೇ ತುಳಸಿಗೆ ನೀರು ಅರ್ಪಿಸೋದು ಯಾಕೆ ?! ಏನಿದರ ಮಹತ್ವ ?!

 

 

Leave A Reply

Your email address will not be published.