Karnataka CM: ಸಿದ್ದರಾಮಯ್ಯರ ಬಳಿಕ ಡಾ. ಪರಮೇಶ್ವರ್ ರಾಜ್ಯದ ಸಿಎಂ ?!
Karnataka political news KN rajanna says if Siddaramaiah not G Parameshwar to be CM
Karnataka CM: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದೆ. ಸಿಎಂ ಸಿದ್ದರಾಮಯ್ಯನವರ ಬಳಿಕ ಡಿಕೆ ಶಿವಕುಮಾರ್ ಅವರು ಮುಂದಿನ ಅವಧಿಗೆ ಸಿಎಂ ಆಗುತ್ತಾರೆ ಎಂಬ ವಿಚಾರ ಸದ್ದುಆಡುತ್ತಿದೆ. ಆದರೆ ಈ ನಡುವೆ ಗೃಹ ಸಚಿವ ಡಾಕ್ಟರ್ ಪರಮೇಶ್ವರ್ ಅವರು ಕರ್ನಾಟಕದ ಮುಂದಿನ ಸಿಎಂ(Karnataka CM)!! ಎಂಬ ವಿಚಾರವೊಂದು ಸಣ್ಣದಾಗಿ ಸದ್ಧುಮಾಡಿದೆ.
ಸಿಎಂ ಬದಲಾವಣೆ ವಿಚಾರ ರಾಜ್ಯದ್ಯಾಂತ ಈ ಮಟ್ಟಕ್ಕೆ ಚರ್ಚೆಯಾಗಲು ಸ್ವತಃ ಕಾಂಗ್ರೆಸ್ ಶಾಸಕರು, ಸಚಿವರೇ ಕಾರಣ. ಅವರ ಗೊಂದಲಮಯ ಹೇಳಿಕೆಗಳೇ ಇದಕ್ಕೆಲ್ಲ ಮೂಲ. ಈ ಕುರಿತು ಸಿದ್ದರಾಮಯ್ಯನವರೂ ಪ್ರತಿಕ್ರಿಯಿಸಿ ನಾನೇ ರಾಜ್ಯದಲ್ಲಿ 5 ವರ್ಷವೂ ಸಿಎಂ ಎಂದು ಹೇಳಿ, ತಮ್ಮ ಹೇಳಿಕೆ ಕುರಿತು ಯೂಟರ್ನ್ ಹೊಡೆದದ್ದೂ ಆಯಿತು. ಆದರೀಗ ಅಚ್ಚರಿ ಎಂಬಂತೆ ಮುಂದಿನ ಸಿಎಂ ಪಟ್ಟ ಡಾಕ್ಟರ್ ಪರಮೇಶ್ವರ್ ಅವರಿಗೆ ಧಕ್ಕಲಿ ಎಂಬ ಕೂಗೊಂದು ಕೇಳಿಬಂದಿದೆ.
ಹೌದು, ಸಿದ್ದರಾಮಯ್ಯ ಅವರು ಬೇಡ ಅಂದರೆ ಮುಂದೆ ಪರಮೇಶ್ವರ್ ಅವರು ಸಿಎಂ ಆಗಲಿ ಎಂದು ಸ್ವತಃ ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರ ಸಚಿವರಾಗಿರೋ ಕೆ. ರಾಜಣ್ಣ ಅವರು ಹೇಳಿ ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇದುವರೆಗೂ ಒಬ್ಬರು ಮಾತ್ರವಲ್ಲ ರಾಜ್ಯಕ್ಕೆ ಹೆಚ್ಚು ಡಿಸಿಎಂ ಬೇಕು ಎಂದು ಹೈಕಮಾಂಡ್ ಗೆ ಪತ್ರ ಬರೆಯುವ ಮೂಲಕ ಸುದ್ಧಿಯಾಗಿದ್ದ ರಾಜಣ್ಣ ಇದೀಗ ಸಿಎಂ ಬದಲಾವಣೆ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ.
ಅಂದಹಾಗೆ ಈ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ನಾನು ಮತ್ತು ಪರಮೇಶ್ವರ ಅವರ ಪರ ಇರುತ್ತೇವೆ. ಒಂದ ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ ಪರಮೇಶ್ವರ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ನಂತರ ಪರಮೇಶ್ವರ ಅವರಿಗೆ ಸಿಎಂ ಪಟ್ಟ ಧಕ್ಕಬೇಕು. ಬೇರೆಯಾರಿಗೂ ಆ ಸ್ಥಾನ ನೀಡಬಾರದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಬಳಿಕ ಹೈಕಮಾಂಡ್ ವಿರುದ್ಧ ಗುಡುಗಿದ ಅವರು ಸರ್ಕಾರದಲ್ಲಿ ಸಿಎಂ ಬದಲಾವಣೆ, ಮಂತ್ರಿ ಸ್ಥಾನ ಹಂಚಿಕೆ ಇದಾವುದರ ಕುರಿತು ಯಾವುದೇ ಸಚಿವ ಆಗಲಿ, ನಾಯಕನಾಗಲಿ ಹೇಳಿಕೆ ನೀಡಬಾರದು ಎಂದು ವರಿಷ್ಠರು ಸೂಚಿಸಿದ್ದಾರೆ. ಆದರೆ ಇದಾವುದಕ್ಕೂ ನಾನು ಜಗ್ಗುವನಲ್ಲ, ಬಗ್ಗುವನಲ್ಲ. ನನಗೇನು ತೋಚುತ್ತದೆ ಅದನ್ನು ನಾನು ಹೇಳುತ್ತೇನೆ. ಯಾಕೆಂದರೆ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ. ಇದೇ ನನ್ನ ಗುಣ ಚುನಾವಣೆ. ಹಾಗಾಗಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಖಡಕ್ ಆದ ಸಂದೇಶ ರವಾನಿಸಿದ್ದಾರೆ..
ಇದನ್ನೂ ಓದಿ: Old pension scheme: ಹಳೆ ಪಿಂಚಣಿ ಯೋಜನೆ ಜಾರಿಗೆ ಹೈಕೋರ್ಟ್ ಅಸ್ತು – ಆದರೆ ಈ ಸರ್ಕಾರಿ ನೌಕರರಿಗೆ ಮಾತ್ರ !!